Bit Coin Audio Viral:ದೊಡ್ಡೊರು ಇರೋದು ಸರ್? ಮಿನಿಸ್ಟರ್ ಲೆವೆಲ್ ನಲ್ಲಿದ್ದಾರೆ.! ಅವನ ಅಕೌಂಟಿನಿಂದ ಬಿಟ್ ಕಾಯಿನ್ ಟ್ರಾನ್ಸ್‌ಫರ್ ಆಗಿದೆ ಸರ್.!ಕನ್ಫರ್ಮ್​ ಇಲ್ಲ! ವೈರಲ್ ಆಗ್ತಿದೆ ಬಿಟ್ ಕಾಯಿನ್​ ವಿಚಾರದ ಈ ಆಡಿಯೋ.!

ದೊಡ್ಡೊರು ಇರೋದು ಸರ್? ಮಿನಿಸ್ಟರ್ ಲೆವೆಲ್ ನಲ್ಲಿದ್ದಾರೆ.! ಅವನ ಅಕೌಂಟಿನಿಂದ ಬಿಟ್ ಕಾಯಿನ್ ಟ್ರಾನ್ಸ್‌ಫರ್ ಆಗಿದೆ ಸರ್.!ಕನ್ಫರ್ಮ್​ ಇಲ್ಲ! ವೈರಲ್ ಆಗ್ತಿದೆ ಬಿಟ್ ಕಾಯಿನ್​ ವಿಚಾರದ ಈ ಆಡಿಯೋ !?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇವತ್ತು ಹೊಸ ಆಟ ಶುರುವಾಗಿದೆ. ಈ ಆಟ ಆಡುತ್ತಿರುವವರು ಯಾರು? ಆಡಿಸ್ತಿರೋರು ಯಾರು? ಆಟದಲ್ಲಿ ಗೆಲುವಿನ ಗುರಿಯೇನು? ಯಾವುದು ಸ್ಪಷ್ಟವಾಗಿಲ್ಲ. ಆದರೆ ಇಲ್ಲಿ ಪಗಡೆ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ರಮೇಶ್​ . ಆಟದ ಮೈದಾನ ಬಿಟ್ ಕಾಯಿನ್​ ಆಗಿದೆ.

ರಾಜ್ಯ ರಾಜಕಾರಣವಷ್ಟೆ ಅಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ಸುಳಿಗಾಳಿ ಎಬ್ಬಿಸ್ತಿರುವ ಬಿಟ್ ಕಾಯಿನ್ ವಿಚಾರ, ಇದೀಗ ರಾಷ್ಟ್ರೀಯ ಮಾಧ್ಯಮಗಳು ಕೈಗೆ ಎತ್ತಿಕೊಂಡಿವೆ. ನ್ಯಾಷನಲ್ ಮೀಡಿಯಾಗಳು ಕೈಗೆ ಹೋದ ಸುದ್ದಿಯ ಪರಿಣಾಮಗಳು ಎನಾಗಬಹುದು ಎನ್ನುವುದು ಎಲ್ಲರಿಗೂ ಗೊತ್ತಿದೆ.

ಇದೆಲ್ಲದಕ್ಕೂ ಪೂರಕವಾಗಿ ಬಿಟ್​ ಕಾಯಿನ್ ವಿಚಾರವಾಗಿ ಇಬ್ಬರು ಅಧಿಕಾರಿಗಳ ನಡುವೆ ನಡೆದಿದೆ ಎನ್ನಲಾದ( ಸ್ಪಷ್ಟತೆಯಿಲ್ಲ) ಆಡಿಯೋ ಲೀಕ್​ ಆಗಿದೆ.

ಈ ಆಡಿಯೋ ಎಲ್ಲಿಂದ, ಹೇಗೆ, ಯಾರ ಕೈ, ಮೂಲಕ ಬದಲಾವಣೆಗೊಂಡಿತು ಅನ್ನೋದು ಗೊತ್ತಿಲ್ಲ. ಮೇಲಾಗಿ ಇದರ ಅಸಲಿಯತ್ತು ಸಹ ಸ್ಪಷ್ಟವಾಗಿಲ್ಲ. ಆದರೆ ಓದುಗರಿಗೆ ವಿಷಯ ತಿಳಿಸುವ ಸಲುವಾಗಿ ಆಡಿಯೋದಲ್ಲಿನ ಸಂಭಾಷಣೆಯನ್ನು ಇಲ್ಲಿ ಪ್ರಕಟಿಸಿದ್ದೇವೆ.

ವೈರಲ್​ ಆಡಿಯೋದಲ್ಲಿ ಅಧಿಕಾರಿಯೊಬ್ಬರು ಕೇಸ್​ನ ತನಿಖೆಯಲ್ಲಿದ್ದ ಮತ್ತೊಬ್ಬ ಅಧಿಕಾರಿಯನ್ನು ಬಿಟ್​ ಕಾಯಿನ್ ನಲ್ಲಿ ಯಾರ್ಯಾರಿದ್ದಾರೆ ಎಂದು ಪ್ರಶ್ನಿಸುವಂತಿದೆ, ಅದಕ್ಕೆ ಅದೀನ ಅಧಿಕಾರಿ ನೀಡಿರುವ ಉತ್ತರವೆನ್ನಲಾಗಿದೆ.

ಸಿಕ್ಕ ಆಡಿಯೋದ ಯಥಾವತ್ತು ಇಲ್ಲಿದೆ, ಈ ಆಡಿಯೋದ ಮೂಲದ ಬಗ್ಗೆಯಾಗಲಿ, ಆಡಿಯೋದ ಸ್ಪಷ್ಟತೆ ಬಗ್ಗೆಯಾಗಲಿ ಇನ್ನಷ್ಟೆ ಸತ್ಯ ಆಚೆಗೆ ಬರಬೇಕಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!