ಬಿಜೆಪಿ ಗಂಗಾ ನದಿ ಇದ್ದಂತೆ: ಮಾಣಿಕ್ ಸಾಹಾ
ಅಗರ್ತಲ: ದಕ್ಷಿಣ ತ್ರಿಪುರಾದ ಕಾಕ್ರಾಬನ್‌ನಲ್ಲಿ ‘ಜನ್ ವಿಶ್ವಾಸ್ ರ್ಯಾಲಿ’ ಭಾಗವಾಗಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿರುವ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು, ಬಿಜೆಪಿಯು ಗಂಗಾ ನದಿ ಇದ್ದಂತೆ. ಇದರಲ್ಲಿ ಒಮ್ಮೆ ಮುಳುಗೆದ್ದರೆ ಎಲ್ಲ ಪಾಪಗಳು ಪರಿಹಾರವಾಗುತ್ತವೆ. ಎಡ ಪಕ್ಷಗಳ ನಾಯಕರು ಬಿಜೆಪಿ ಸೇರಿ ಪಾವನರಾಗಲಿ ಎಂದು ಹೇಳಿದ್ದಾರೆ.
ಸ್ಟಾಲಿನ್ ಮತ್ತು ಲೆನಿನ್ ಸಿದ್ಧಾಂತವಾದಿಗಳನ್ನು ಬಿಜೆಪಿಗೆ ಸೇರುವಂತೆ ಆಹ್ವಾನಿಸುವೆ. ಏಕೆಂದರೆ ನಮ್ಮ ಪಕ್ಷವು ಗಂಗಾ ನದಿಯಂತಿದೆ. ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದರೆ ನಿಮ್ಮ ಎಲ್ಲ ಪಾಪಗಳು ತೊಳೆದು ಹೋಗುತ್ತವೆ’ ಎಂದು ಹೇಳಿದ್ದಾರೆ.
‘ರೈಲಿನ ಬೋಗಿಗಳು ಇನ್ನೂ ಖಾಲಿ ಇವೆ. ಖಾಲಿ ಬೋಗಿಗಳಿಗೆ ಹತ್ತಿ ಕುಳಿತುಕೊಳ್ಳಿ. ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ತಲುಪಬೇಕಾದ ಗಮ್ಯಸ್ಥಾನಕ್ಕೆ ಕರೆದೊಯ್ಯುತ್ತಾರೆ ಎಂದು ಹೇಳಿದರು.