davanagere; ಅಧೋಗತಿ ತಲುಪಿದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ ಸಮುದಾಯ ಭವನಗಳು..!

ದಾವಣಗೆರೆ (davanagere) ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಹಾಗೂ ಅಸ್ತಾಪನಹಳ್ಳಿ ಗ್ರಾಮದಲ್ಲಿರುವ ಭವನಗಳು ಪಾಳು ಬಿದ್ದಿವೆ. ಹಕ್ಕಿಪಿಕ್ಕಿ ಬುಡಕಟ್ಟು ಅಲೆಮಾರಿ ಜನಾಂಗಕ್ಕೆಂದು ಗ್ರಾಮದಲ್ಲಿ ನಿರ್ಮಾಣವಾದ ಸರ್ಕಾರ ತರಬೇತಿ ಮತ್ತು ಉತ್ಪಾದನಾ ಘಟಕಗಳ ನಿರ್ವಹಣೆ ಇಲ್ಲದೇ ಅಧೋಗತಿ ತಲುಪಿವೆ.

ಮನೆಯಲ್ಲಿ (house) ತಯಾರಿಸುವ ಸಣ್ಣ ಪುಟ್ಟ ವಸ್ತುಗಳನ್ನು ಸಮುದಾಯ ಭವನಗಳಲ್ಲಿ ತಯಾರಿಸಿ ಮಾರಾಟ ಮಾಡಲು ಸಹಕಾರವಾಗುವಂತೆ ಸರ್ಕಾರ ನಿರ್ಮಿಸಿದೆ. ಆದರ ಇಲಾಖೆಗಳು ಕಳೆದ 25 ವರ್ಷಗಳಿಂದ ಭೇಟಿ ನೀಡದೆ, ಸಮರ್ಪಕ ನಿರ್ವಹಣೆಗಳಿಲ್ಲದೆ ಹೀಗೆ ವ್ಯವಸ್ಥೆ ಇರುವುದು, ಹಲವು ಬಾರಿ ಸರ್ಕಾರಕ್ಕೆ (government) ಮನವಿ ಮಾಡಿದರೂ ನಿರ್ಲಕ್ಷ ತೋರುವುದು ಎಷ್ಟರ ಮಟ್ಟಿಗೆ ಸರಿ?

 

 

ಸಮಾಜದಲ್ಲಿ ಹಿಂದುಳಿದಿರುವ ಸಮುದಾಯಗಳಿಗೆ ಅನುಕೂಲವಾಗುವಂತೆ ಸರ್ಕಾರ ಗ್ರಾಮಗಳಿಗೆ ಸಮುದಾಯ ಭವನಗಳ ನಿರ್ಮಾಣ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡಿತ್ತು, ಆದರೆ ಇಲ್ಲಿನ ಪರಿಸ್ಥಿತಿ ಕೇಳುವವರಿಲ್ಲ, ಹೇಳುವವರಿಲ್ಲ ಎಂಬಂತಾಗಿದೆ. ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯೇ ಇದರ ಹೊಣೆ ಹೊರಬೇಕಾಗಿದೆ.

**

“ಜನರ ಬಳಕೆಯಿಂದ ದೂರ ಸರಿದಿರುವ ಭವನಗಳಲ್ಲಿ ಸೌಲಭ್ಯಗಳು ಮರಿಚಿಕೆಯಾಗಿದೆ, ಸರಿಯಾದ ನಿರ್ವಹಣೆ ಇಲ್ಲ, ವಿದ್ಯುತ್ ಕೂಡ ಇಲ್ಲ, ಇದರಿಂದ ಗ್ರಾಮಸ್ಥರ ಕಾರ್ಯಕ್ಕೆ ಅಡ್ಡಿಯಾಗಿದೆ. ಸುಮಾರು 25 ವರ್ಷಗಳಿಂದ ಭವನಗಳು ಬಣ್ಣ ಕಂಡಿಲ್ಲ. ಮಳೆ ಬಂದರೆ ಸೋರುತ್ತಿವೆ. ಆದಷ್ಟು ಬೇಗ ಸರ್ಕಾರ ನೂತನ ಸಮುದಾಯ ಭವನಗಳು ನಿರ್ಮಾಣ ಮಾಡಿಕೊಡಬೇಕು. ಹಕ್ಕಿಪಿಕ್ಕಿ ಜನಾಂಗದ ಸರ್ವತೋಮುಖ ಬೆಳವಣಿಗೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ”.

ಪುನೀತ್ ಕುಮಾರ್ ಆರ್, ರಾಜ್ಯಾಧ್ಯಕ್ಷರು, ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ.

Leave a Reply

Your email address will not be published. Required fields are marked *

error: Content is protected !!