davanagere; ಮಹಾನಗರ ಪಾಲಿಕೆ ಆವರಣದಲ್ಲಿ “ಹುತಾತ್ಮರಿಗೊಂದು ನಮನ “

ದಾವಣಗೆರೆ, ಆ.18: ದಾವಣಗೆರೆ (davanagere) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ವತಿಯಿಂದ ಶ್ರೀ ಮುರುಘರಾಜೇಂದ್ರ ಜೇ ಚಿಗಟೇರಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ “ಹುತಾತ್ಮರಿಗೊಂದು ನಮನ” ಕಾರ್ಯಕ್ರಮವನ್ನು ಜಿಲ್ಲಾ ಸಂಸ್ಥೆ ವತಿಯಿಂದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು.

1942ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿ (quit india movement)ತಾರಕದಲಿದ್ದಾಗ ದಾವಣಗೆರೆಯಲ್ಲಿ ಸ್ವತಂತ್ರ ಹೋರಾಟಗಾರರು ರೈಲ್ವೆ ನಿಲ್ದಾಣ ಮತ್ತು ತಾಲೂಕು ಖಜಾನೆಗೆ ಮುತ್ತಿಗೆ ಹಾಕಿ ವಶಕ್ಕೆ ಪಡೆಯುವ ತಂತ್ರ ಹೂಡಿ ಕಾರ್ಯಯೋನ್ಮುಖರಾದಾಗ ಆಗಿನ ಬ್ರಿಟಿಷ್ ಸರ್ಕಾರ ಗೋಲಿಬಾರ್ ನಡೆಸಿತು. ಆ ಸಂದರ್ಭದಲ್ಲಿ ಹಳ್ಳೂರು ನಾಗಪ್ಪ, ಅಕ್ಕ ಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಮಗಾನಳ್ಳಿ ಹನುಮಂತಪ್ಪ ಈ 6 ಜನರು ಹುತಾತ್ಮರಾದರು ಅವರ ಸ್ಮರಣಾರ್ಥವಾಗಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಲಾಯಿತು.

vachana; ಶಿಕ್ಷಣ ಇಲಾಖೆಯಲ್ಲಿ ವಚನ ಸಾಹಿತ್ಯದ ಅವಗಣನೆ: ಸಾಣೇಹಳ್ಳಿ ಸ್ವಾಮೀಜಿ ಬೇಸರ

ಮುಖ್ಯ ಅತಿಥಿಗಳಾಗಿ ರೇಣುಕಾ ಮಹಾನಗರ ಪಾಲಿಕೆ ಆಯುಕ್ತರು ಮತ್ತು ವಿನಾಯಕ ಪೈಲ್ವಾನ್ ಮಹಾಪೌರರು ಆಗಮಿಸಿದ್ದರು. ಮುರುಘಾ ರಾಜೇಂದ್ರ ಜೇ ಚಿಗಟೇರಿಯವರು ಹೂಗುಚ್ಛವನ್ನು ಇಡುವ ಮೂಲಕ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎ ಪಿ ಷಡಕ್ಷರಪ್ಪ ಜಿಲ್ಲಾ ಸ್ಕೌಟ್ ಆಯುಕ್ತರು, ಶಾರದಾ ಮಾಗನಹಳ್ಳಿ ಜಿಲ್ಲಾ ಗೈಡ್ ಆಯುಕ್ತರು, ರತ್ನ ಜಿಲ್ಲಾ ಕಾರ್ಯದರ್ಶಿ, ಸುಖವಾನೀ ಜಿಲ್ಲಾ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ಥಾನಿಕ ಆಯುಕ್ತರಾದ ಶಂಕರ್ ನಾಯಕ್, ನೂರಲ್ಲ, ಎನ್. ಕೆ. ಕೊಟ್ರೇಶ್ ಮತ್ತು ವಿಜಯ್, ಅಶ್ವಿನಿ ಹಾಗೂ ಯುವ ಸಮಿತಿ ಸದಸ್ಯರು ಮತ್ತು ರೋವರ್ಸ್, ರೇಂಜರ್ಸ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!