ಕಾಂಗ್ರೇಸ್ ಕಾರ್ಯಕರ್ತರಿಗೆ ಇಂದಿನಿಂದ ಎಸ್ ಎಸ್ ಕುಟುಂಬದಿಂದ ಲಸಿಕೆ ಅಭಿಯಾನಕ್ಕೆ ಚಾಲನೆ

ದಾವಣಗೆರೆ: ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದಿನಿಂದ ಉಚಿತ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕರಾದ ಎ. ನಾಗರಾಜ್, ಕಿಸಾನ್ ಕಾಂಗ್ರೆಸ್ ನ ಮೊಹಮ್ಮದ್ ಜಿಕ್ರಿಯಾ, ಸುರೇಶ್ ಜಾಧವ್,ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ನ ಲಿಯಾಖತ್ ಅಲಿ,ಹರೀಶ್ ಹೆಚ್, ಯುವ ಕಾಂಗ್ರೆಸ್ ಮುಖಂಡರಾದ ಮಹಬೂಬ್ ಬಾಷಾ, ಹಾಗೂ ವಿವಿಧ ಘಟಕಗಳ ಮುಖಂಡರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಘಟಕ ಮುಖಂಡರುಗಳಿಗೆ ಶಾಸಕರ ಸಮ್ಮುಖದಲ್ಲೇ ಲಸಿಕೆಯನ್ನು ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!