ಛಾಯಾಗ್ರಾಹಕರಿಗೆ ಜಿಲ್ಲಾಡಳಿತದಿಂದ ಕೊವಿಡ್ ಲಸಿಕೆ: ಅಧಿಕಾರಿಗಳಿಗೆ ನಗು ಮುಖದಿಂದ ಧನ್ಯವಾದ ಅರ್ಪಿಸಿದ ವಿಡಿಯೋಗ್ರಾಫರ್ಸ್

ದಾವಣಗೆರೆ: ದಾವಣಗೆರೆ ಜಿಲ್ಲಾ ಫೋಟೋ ಗ್ರಾಫರ್ಸ್ ಅಂಡ್ ವೀಡಿಯೋ ಗ್ರಾಫರ್ಸ್ ಸಂಘ, ದಾವಣಗೆರೆ ತಾಲೂಕು ಫೋಟೋ ಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ನಿಂದ ಲಸಿಕೆ ಹಾಕುವ ಕಾರ್ಯಕ್ರಮ ಬುಧವಾರ ನಗರದ ಪಿ.ಜೆ.ಬಡಾವಣೆಯ ಕನ್ನಿಕಾಪರಮೇಶ್ವರಿ ಬ್ಯಾಂಕ್ ಎದುರು ಇರುವ ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ, ಡಾ.ಮೀನಾಕ್ಷಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಜಯ ಜಾಧವ್, ತಾಲೂಕು ಫೋಟೋ ಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಕೆ.ಸಿ.ರಾಜು, ಫೋಟೋಗ್ರಾಫರ್ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ ಅಗಡಿ, ಖಜಾಂಚಿ ಮಲ್ಲಿಕಾರ್ಜುನ, ತಾಲೂಕು ಪ್ರಧಾನ ಕಾರ್ಯದರ್ಶಿ ದುಗ್ಗೇಶ, ಸದಸ್ಯರಾದ ಕಿರಣ್, ಅರುಣಕುಮಾರ, ಮಿಥುನ್, ಪ್ರಕಾಶ, ಶ್ರೀನಿವಾಸ, ಪತ್ರಿಕಾ ಛಾಯಾಗ್ರಾಹಕರಾದ ವಿವೇಕಾನಂದ ಬದ್ದಿ, ಎಸ್.ಎಸ್.ಸಾಗರ್ ಸೇರಿದಂತೆ ಪದಾಧಿಕಾರಿಗಳು, ಛಾಯಾಗ್ರಾಹಕರು ಭಾಗವಹಿಸಿದ್ದರು.
ಈ ಲಸಿಕಾ ಕಾರ್ಯಕ್ಕೆ ಸ್ಪಂಧಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರಿಗೆ ಸಂಘದಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ಹೆಚ್ ಎಂ ಪಿ ಕುಮಾರ್, ಹಿರಿಯ ಛಾಯಾಗ್ರಾಹಕ ಹೇಮಚಂದ್ರ ಜೈನ್ ಸೇರಿದಂತೆ ಅನೇಕ ಛಾಯಾಗ್ರಾಹಕರ ಕುಟುಂಬದವರು ಭಾಗಿಯಾಗಿದ್ದರು.