ಕಾನಿಪ ಧ್ವನಿ ಸಂಘಟನೆಯ ಪ್ರಥಮ ರಾಜ್ಯ ಸಮ್ಮೇಳನಕ್ಕೆ 101 ಪುಸ್ತಕಗಳನ್ನು ಕೊಡುಗೆ: ಬಾಗೇವಾಡಿಮಠ.

ರಾಜ್ಯ ಸಮ್ಮೇಳನಕ್ಕೆ 101 ಪುಸ್ತಕಗಳನ್ನು ಕೊಡುಗೆ
ರಾಣೇಬೆನ್ನೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 25-02-2023 ರಂದು ನಡೆಯಲಿರುವ ಕಾನಿಪ ಧ್ವನಿ ಸಂಘಟನೆಯ ಪ್ರಥಮ ರಾಜ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದು ಎಂದು ಸಂಸ್ಥೆಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹೇಳಿದರು.ಈ ಮಾದ್ಯಮ ಸಮ್ಮೇಳನಕ್ಕೆ ರಾಣೇಬೆನ್ನೂರಿನ ಕವಿ, ಸಾಹಿತಿ, ಲೇಖಕರು, ಖ್ಯಾತ ಪುಸ್ತಕ ಪ್ರೇಮಿ ಮತ್ತು ಹಾವೇರಿ ಜಿಲ್ಲೆಯ ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ ವಾಯ್ಸ್ ಸಂಘಟನೆಯ ಸದಸ್ಯರು ಹಾಗೂ ಹಳೆಯ ಪುಸ್ತಕ ಸಂಗ್ರಹದ ರೂವಾರಿಯಾದ ಬಸವರಾಜ ಎಸ್.ಬಾಗೇವಾಡಿಮಠ ಅವರು 101 ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಾರೆ, ಇವರಿಗೆ ಕೈ ಜೋಡಿಸಿ ಸಹಾಯ ಸಹಕಾರ ನೀಡಿದ ಶ್ರೀ ಮತಿ ಅರ್ಚನಾ ಪಾಟೀಲ್. ಶ್ರೀ ಕಾಂತ್ ಕೊಟ್ಟೂರು, ಗಣೇಶ್ ಸಾಲಿಗ್ರಾಮ, ಪ್ರಕಾಶ ಭೋಜೆ, ಪ್ರಕಾಶ ಜಹಾಗೀರದಾರ,ಶ್ರೀಮತಿ ರಾಧಮಣಿ ಕೋಲಾರ ಇವರ ಸಹಾಯ ಯೊಂದಿಗೆ ಬಾಗೇವಾಡಿಮಠ ಅವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ,ಎಂದು ಕಾನಿಪ ಧ್ವನಿಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಅಭಿಪ್ರಾಯ ವ್ಯಕ್ತಪಡಿಸಿ ಪ್ರಕಟನೆ ತಿಳಿಸಿದ್ದಾರೆ.