cricket; ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಕೊನೆಗೂ ಒಲಿಂಪಿಕ್ಸ್ ಗೆ ಎಂಟ್ರಿ ಕೊಟ್ಟ ಕ್ರಿಕೆಟ್

ಮುಂಬೈ, ಅ.17: ಕ್ರಿಕೆಟ್ (cricket) ಜೊತೆ ಒಟ್ಟು 5 ಕ್ರೀಡೆಗಳನ್ನು 2028 ರ ಒಲಿಂಪಿಕ್ಸ್ ಗೇಮ್ ನಲ್ಲಿ ಅಧಿಕೃತವಾಗಿ ಸೇರಿಸಲು ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಸೋಮವಾರ ಮುಂಬೈಯಲ್ಲಿ ನಡೆದ 141ನೇ ಒಲಿಂಪಿಕ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಅಧಿಕೃತಗೊಳಿಸಲಾಗಿದ್ದು, 2028 ರಲ್ಲಿ ಏಜಂಲೀಸ್ ನಲ್ಲಿ ನಡೆಯಲ್ಲಿರುವ ಒಲಿಂಪಿಕ್ಸ್ ನಲ್ಲಿ T-20 ಮಾದರಿಯ ಕ್ರಿಕೆಟ್ ಪಂದ್ಯ ನಡೆಯಲಿದೆ.

Education; ಚಿಂದಿ ಆಯುವವರ ಮಕ್ಕಳಿಗೆ 6ನೇ ತರಗತಿಗೆ ದಾಖಲಾತಿ: ಪಿ.ಮಣಿವಣ್ಣನ್

ಕೇವಲ ಕ್ರಿಕೆಟ್ ಅಲ್ಲದೇ, ಇದರೊಂದಿಗೆ ಸಾಫ್ಟ್’ಬಾಲ್, ಫ್ಲಾಗ್, ಫುಟ್’ಬಾಲ್, ಬೇಸ್’ಬಾಲ್ ಮತ್ತು ಸ್ಕ್ವಾಷ್ ಪಂದ್ಯಗಳು ಸೇರಿಕೊಂಡಿದೆ. 2028 ರ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಭಾಗಿಯಾಗಲಿದೆ ಎಂಬ ವಿಚಾರ ಅಕ್ಟೋಬರ್ 10 ರಂದೆ ಹಲವು ಜನರಿಗೆ ತಿಳಿದಿತ್ತು. ಆದರೆ ಇದು ಅಧಿಕೃತಗೊಂಡಿರಲಿಲ್ಲ.

ಒಟ್ಟಾರೆಯಾಗಿ ಹಲವು ವರ್ಷಗಳಿಂದ ಈ ಕುರಿತು ನಡೆಯುತ್ತಿದ್ದ ಚರ್ಚೆಗೆ ಇದೀಗ ಬ್ರೇಕ್ ಬಿದ್ದಿದ್ದು, ಕ್ರಿಕೇಟ್ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!