valmiki; ವಾಲ್ಮೀಕಿ ಸಮಾಜದ ವತಿಯಿಂದ ಅಹೋರಾತ್ರಿ ಹೋರಾಟ
ಚನ್ನಗಿರಿ (ದಾವಣಗೆರೆ), ಅ.17: ಮಹರ್ಷಿ ವಾಲ್ಮೀಕಿಯರು (valmiki) ಭಾರತ ದೇಶದ ಮಹಾನ್ ಗ್ರಂಥ ರಾಮಾಯಣವನ್ನು ಕೊಡುಗೆಯಾಗಿ ಕೊಡುವ ಮೂಲಕ ಸಂಸ್ಕಾರಯುತ ಮತ್ತು ಅದರ್ಶ ವ್ಯಕ್ತಿತ್ವವನ್ನು ಸಮಾಜಕ್ಕೆ ತಿಳಿಸಿದ್ದಾರೆ ಎಂದು ರಾಯಚೂರು ವಾಲ್ಮೀಕಿ ಗುರು ಪೀಠದ ವಾರದೇಶ್ವರ ಸ್ವಾಮಿಗಳು ಹೇಳಿದರು.
ಪಟ್ಟಣದ ಬೀರೂರು ರಸ್ತೆಯಲ್ಲಿ ಕಳೆದ 5 ದಿನಗಳಿಂದ ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ನಿರಶನ ಮಾಡುತ್ತಿರುವ ಯುವಕರಿಗೆ ಬೆಂಬಲವನ್ನು ಸೂಚಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ನಮ್ಮ ಸಂಸ್ಕೃತಿಗೆ ಒಂದು ಬುನಾದಿಯನ್ನು ಹಾಕಿಕೊಟ್ಟ ಮಹಾನ್ ವ್ಯಕ್ತಿ. ಆದ್ದರಿಂದ ವೃತ್ತಕ್ಕೆ ಅವರ ಹೆಸರನ್ನು ಸ್ಥಾಪಿಸಲು ರಾಜಕೀಯವನ್ನು ಬೆರೆಸುತ್ತಿದ್ದಾರೆ ಎಂದರೆ ನಾವು ಇನ್ನೂ ಸಹ ಯಾವ ಕಾಲದಲ್ಲಿ ಇದ್ದೇವೆ ಎನ್ನುವುದು ಮನಗಾಣಬೇಕಿದೆ.
gb vinay; ಜನಸಾಮಾನ್ಯರ ಅಭಿವೃದ್ಧಿಗೆ ಸ್ಪಂದಿಸುವವರು ಬೇಕು: ಇನ್ ಸೈಟ್ಸ್ ವಿನಯ್
ರಾಜಕಾರಣ ವ್ಯಕ್ತಿಗತವಾಗಿ ಮಾಡಬೇಕು. ಮಹಾತ್ಮರ ವಿಷಯದಲ್ಲಿ ರಾಜಕಾರಣ ಮಾಡಬಾರದು. ಇಲ್ಲಿನ ಶಾಸಕರು ಇದುವರೆಗೂ ಈ ಸಮಸ್ಯೆನ್ನು ಬಗೆಹರಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ನಾವು ಕಾನೂನಿಗೆ ಗೌರವ ಕೊಟ್ಟಿದ್ದರೂ ನಮಗೆ ನ್ಯಾಯ ದೊರಕುತ್ತಿಲ್ಲ. ಇಲ್ಲಿ ಕಾನೂನಿಗಿಂತ ವೈಯಕ್ತಿಕ ಹಿತಾಸಕ್ತಿ ಕಾಪಾಡುತ್ತಿದ್ದಾರೆ ಎಂದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ಮಾತನಾಡಿ, ಈ ವೃತ್ತ ನಿರ್ಮಾಣದ ವಿಷಯ ಮಾಧ್ಯಮಗಳ ಮೂಲಕ ಇಡೀ ರಾಜ್ಯವನ್ನು ತಲುಪಿದೆ. ವಾಲ್ಮೀಕಿ ಪೀಠದ ಶ್ರೀಗಳ ಬಳಿ ಈ ವಿಷಯವನ್ನು ಚರ್ಚೆ ಮಾಡಲಾಗಿದ್ದು 21 ರಂದು ಇಡೀ ರಾಜ್ಯದ ಎಲ್ಲಾ ಅಹಿಂದ ಮಠಗಳ ಸ್ವಾಮೀಜಿಗಳು ಸಹ ಚನ್ನಗಿರಿಗೆ ಬರಲಿದ್ದಾರೆ. ಅಂದು ತೆಗೆದುಕೊಳ್ಳುವ ತೀರ್ಮಾನದ ನಂತರ ಶ್ರೀಗಳು ವಾಲ್ಮೀಕಿ ಜಯಂತಿಗೆ ಬೆಂಗಳೂರಿಗೆ ತೆರಳದೇ ಚನ್ನಗಿರಿಯಲ್ಲಿಯೇ ಇಡೀ ರಾಜ್ಯದ ವಾಲ್ಮೀಕಿ ಬಂಧುಗಳು ಚನ್ನಗಿರಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಚನ್ನಗಿರಿಯಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ತಾಲೂಕುನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲಪ್ಪ, ಪಿ.ಲೋಹಿತ್‌ಕುಮಾರ್, ಸ್ವಾಭಿಮಾನಿ ನಾಯಕರ ಯುವ ವೇಧಿಕೆಯ ಅಧ್ಯಕ್ಷ ನವೀನ್ ಚನ್ನಗಿರಿ, ಮತ್ತು ಪದಾಧಿಕಾರಿಗಳು ಮತ್ತು ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.