ಹೈ ಪೈ ದರೋಡೆಕೋರರಿಗೆ ಚಳ್ಳೆಹಣ್ಣು ತಿನ್ನಿಸಿದ ಗಟ್ಟಿಗಿತ್ತಿ: ಮಹಿಳೆಯ ದೈರ್ಯಕ್ಕೆ ನೆಟ್ಟಿಗರಿಂದ ಫುಲ್ ಮಾರ್ಕ್ಸ್
ಮಂಗಳೂರು: ತನ್ನ ಕೈಯಲ್ಲಿದ್ದ ಬ್ಯಾಗನ್ನೆ ಕಸಿಯಲು ಯತ್ನಿಸಿದವನನ್ನೆ ಥಳಿಸಿದ ಮಹಿಳೆಯೋರ್ವರು ಆ ಜಾಗದಿಂದಲೇ ಆ ದುಷ್ಕರ್ಮಿ ಕಾಲ್ಕೀಳುವಂತೆ ಮಾಡಿರುವ ಘಟನೆ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ನಡೆದಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮಂಗಳೂರಿನಲ್ಲಿ ಕಾರಿನಿಂದ ಬಂದ ಅಪರಿಚಿತರು ಮಹಿಳೆ ಮೇಲೆ ದರೋಡೆಗೆ ಯತ್ನಿಸಿ, ಆಕೆಯ ಕೈಯಲ್ಲಿದ್ದ ಬ್ಯಾಗ್ ಕಸಿಯಲು ಯತ್ನಿಸಿದ್ದು, ಆಕೆ ಬ್ಯಾಗ್ ಕಸಿಯಲು ಬಿಡದೆ ತನ್ನ ರಕ್ಷಣೆಗೆ ತಾನೇ ಮುಂದಾಗಿದ್ದು, ದರೋಡೆಗೆ ಕಾರಿನಿಂದ ಇಳಿದ ವ್ಯಕ್ತಿಗೆ ವಾಪಸ್ ಥಳಿಸಿ ಆತ್ಮರಕ್ಷಣೆ ಮಾಡಿಕೊಂಡಿದ್ದಾಳೆ.
ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಸಿಯಲು ಆರೋಪಿ ಯತ್ನಿಸಿದ್ದಾನೆ. ಆದರೆ, ಮಹಿಳೆಯ ಪ್ರತಿರೋಧದಿಂದ ಬ್ಯಾಗ್ ಕಸಿಯಲು ಆಗದೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಮತ್ತು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಫುಲ್ ವೈರಲ್ ಆಗಿದ್ದು ನೆಟ್ಟಿಗರು ಆ ಮಹಿಳೆಯ ಧೈರ್ಯವನ್ನು ಕೊಂಡಾಡಿದ್ದಾರೆ.