ಲೋಕಲ್ ಸುದ್ದಿ

ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ: ಡಾ. ವೆಂಕಟೇಶ್ ಎಲ್.ಡಿ

ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ: ಡಾ. ವೆಂಕಟೇಶ್ ಎಲ್.ಡಿ

ದಾವಣಗೆರೆ: ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ ಎಂದು ಅವರಗೊಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ  ಹಿರಿಯ ಆಡಳಿತ ವೈದ್ಯಾಧಿಕಾರಿ  ಡಾ. ವೆಂಕಟೇಶ್ ಎಲ್.ಡಿ ತಿಳಿಸಿದರು. ಬುಧವಾರ  ಸರ್ಕಾರಿ ಪ್ರೌಢಶಾಲೆ ಅವರಗೊಳ್ಳದಲ್ಲಿ ನಡೆದ ಡೆಂಗ್ಯೂ, ಚಿಕ್ಕನ್ ಗುನ್ಯಾ, ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ಕ್ಷಯ ರೋಗದ ಲಕ್ಷಣಗಳ ಕುರಿತು ಅವರು ಮಾತನಾಡಿದರು.ಸೊಳ್ಳೆಯಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಮೆದುಳು ಜ್ವರವು ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ.

ಡೆಂಗ್ಯೂ , ಚಿಕ್ಕನ್ ಗುನ್ಯಾ, ಮಲೇರಿಯಾ  ರೋಗದ ಲಕ್ಷಣಗಳು : ತೀವ್ರ ಜ್ವರ, ತಲೆನೋವು, ಗಂಧೆಗಳು, ಕಣ್ಣಿನ ಹಿಂಭಾಗ ನೋವು, ಮೈ ಕೈ ನೋವು, ಕೀಲು ಮೂಳೆ ನೋವು, ಕಾಲು ಬಾವು, ಚಳಿಯ ಹಂತ, ಬಿಸಿ  ಜ್ವರದ ಹಂತ,  ಬೆವರಿಕೆಯ ಹಂತ ಜೊತೆಗೆ ತಲೆನೋವು, ನಡುಕ  ಈ ಲಕ್ಷಣಗಳು ಪ್ರತಿದಿನ ಅಥವಾ ದಿನ ಬಿಟ್ಟು ದಿನ ಕಾಣಿಸಿಕೊಳ್ಳಬಹುದು ಕೆಲವೊಂದು ಪ್ರಕರಣಗಳಲ್ಲಿ ತಲೆನೋವು ಮತ್ತು ಸುಸ್ತು ಮಾತ್ರ ಕಾಣಿಸಿಕೊಳ್ಳಬಹುದು, ಕ್ಷಯ ರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆ ಜ್ವರ , ಬೆವರುವಿಕೆ, ಹಸಿವು ಆಗದಿರುವುದು. ತೂಕ ಕಡಿಮೆ ಆಗಿರುವುದು. ಕಫಾದಲ್ಲಿ ರಕ್ತ ಕಾಣಿಸಿಕೊಳ್ಳುವುದು ಇವುಗಳು ಕ್ಷಯರೋಗದ ಲಕ್ಷಣಗಳಾಗಿರುತ್ತವೆ.

ನಿಯಂತ್ರಣ ಕ್ರಮಗಳು: ನೀರಿನ ಮೂಲಗಳಾದ ಡ್ರಮ್ಮು, ಬ್ಯಾರೆಲ್, ತೊಟ್ಟಿ, ನೀರಿನ ಗುಂಡಿ, ತೆಂಗಿನಕಾಯಿ ಚಿಪ್ಪು, ಟೀ ಲೋಟ, ಹೂವಿನ ಕುಂಡಲಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಮನೆಯ ಸುತ್ತಮುತ್ತ ಘನ ತ್ಯಾಜ್ಯ ಗಳನ್ನು ಸ್ವಚ್ಛಗೊಳಿಸುವುದು, ನಿಂತ ನೀರು ಸೊಳ್ಳೆಯ ತವರೂರು,  ಸೊಳ್ಳೆಯ ಪರದೆ ಉಪಯೋಗಿಸುವುದು ಸೊಳ್ಳೆ ನಾಶಕ ದ್ರಾವಣ ಬಳಸುವುದು ಮುಂಜಾಗ್ರತಾವಾಗಿ ಸೊಳ್ಳೆಯ ಉತ್ಪನ್ನ ತಾಣಗಳನ್ನು ಟೆಮೀಫಾಸ್ ದ್ರಾವಣ ಬಳಸಬೇಕು ಹಾಗೂ ಲಾರ್ವಹಾರಿ ಮೀನುಗಳನ್ನು ದೊಡ್ಡ ತೊಟ್ಟಿಗಳಲ್ಲಿ ಬಿಡುವ  ಮೂಲಕ ಸೊಳ್ಳೆ ಲಾರ್ವಗಳನ್ನು ನಾಶಗೊಳಿಸುತ್ತವೆ ಎಂದು ತಿಳಿಸಿಕೊಟ್ಟರು.

ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಜಾಥಾ ಮಾಡುವ ಮೂಲಕ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಘೋಷವಾಕ್ಯಗಳನ್ನು ಕೂಗುತ್ತಾ  ಗ್ರಾಮದಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಪ್ಪ ಬಿ, ಸದಸ್ಯ ಜಿ.ಟಿ.ವೀರಣ್ಣ, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಪ್ರೌಢ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top