vijayapura; ಮೇಲಾಧಿಕಾರಿಗಳ ಭೇಟಿ ವೇಳೆ ಹೂಗುಚ್ಛ, ಹಾರ ತರುವಂತಿಲ್ಲ
ವಿಜಯಪುರ; ಆಗಸ್ಟ್ 18: ವಿಜಯಪುರದ (vijayapura) ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾದಂಢಾಧಿಕಾರಗಳ ಕಾರ್ಯಾಲಯವು ತಮ್ಮ ಅಧೀನ ಕಚೇರಿಗಳು ಹಾಗೂ ಅಧಿಕಾರಿಗಳಿಗೆ ವಿಶೇಷವಾದ ಸುತ್ತೋಲೆಯನ್ನು ಹೊರಡಿಸಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚಿಸಿದೆ. ಈ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ಮೇಲಾಧಿಕಾರಿಗಳನ್ನು ಭೇಟಿ ಮಾಡುವ ವೇಳೆ ಅಥವಾ ಮೇಲಾಧಿಕಾರಿಗಳ ಅಧೀನ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹೂಗುಚ್ಛ, ಹಾರ, ಹಣ್ಣಿನ ಬುಟ್ಟಿ, ಶಾಲುಗಳನ್ನು ತರುತ್ತಾರೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಟಿ ಭೂಪಾಲನ್ ಸೂಚಿಸಿದ್ದಾರೆ.
green city: ಹಸಿರು ನಗರವಾಗಿಸಲು ಎಲ್ಲರೂ ಶ್ರಮಿಸಿ: ಸುರೇಶ್ .ಬಿ. ಇಟ್ನಾಳ್
ಈ ಎಲ್ಲವುಗಳ ಬದಲು ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿ ಹಾಗೂ ನೌಕರರು ಕಿಂಗ್ ಸೈಜಿನ ನೋಟ್ ಬುಕ್ ಅಥವಾ ಸಾಮಾನ್ಯ ಜ್ಞಾನ, ಮಹಾನ್ ಪುರುಷರ, ಸ್ವಾತಂತ್ರ್ಯ ಹೋರಾಟಗಾರರ, ವಿಜ್ಞಾನಿಗಳ, ಎನ್ ಸೈಕ್ಲೋಪೀಡಿಯಾ, ನಿಘಂಟು ಇತ್ಯಾದಿ ಪುಸ್ತಕಗಳನ್ನು ನೀಡಿ ಗೌರವಿಸುವುದನ್ನು ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದೆ.
ಈ ರೀತಿಯಾಗಿ ಸಂಗ್ರಹವಾದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಅಥವಾ ಬಡ ಕುಟುಂಬದ ಶಾಲಾ ವಿದ್ಯಾರ್ಥಿಗಳಿಗೆ (students) ಉಚಿತವಾಗಿ ನೀಡುವುದರಿಂದ ಜನ ಸಾಮಾನ್ಯರ, ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನದ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ಅಧೀನ ಎಲ್ಲ ಕಚೇರಿಗಳಿಗೆ, ಅಧಿಕಾರಿ ವರ್ಗದವರು, ಸಾರ್ವಜನಿಕರಿಗೂ ಈ ಸುತ್ತೋಲೆ ಅನುಸರಿಸಲು ಸೂಚಿಸಬೇಕು ಎಂದು ಹೇಳಿದ್ದಾರೆ.