Education Department; ಶಿಕ್ಷಣ ಇಲಾಖೆ ನಿರ್ಲಕ್ಷ್ಯ; ಜಿಲ್ಲೆಯ ಗಡಿಭಾಗದ ಈ ಹಳ್ಳೀಲಿ ಕೊಠಡಿ, ಶೌಚಾಲಯವಿಲ್ಲ

ಹಾಲೇಶ್ ರಾಂಪುರ, ಪುರಂದರ್ ಲೋಕಿಕೆರೆ

ದಾವಣಗೆರೆ, ಆ.30: “ಸರ್, ಇರೋದು ಎರಡೇ ಕೊಠಡಿ, ಒಂದರಿಂದ ಐದು ಐದನೇ ಕ್ಲಾಸು ತರಗತಿಗಳಿಗೆ ಪಾಠ ನಡೆಯಬೇಕು, ಇರುವ ಮೂವರು ಟೇಚರ್ ಗಳಲ್ಲಿ ಇಬ್ಬರು ಒಂದೊಂದಿನ ರಜಾ ಹಾಕ್ತಾರೆ, ಬರೋದೇ ಒಬ್ಬರು. ಶೌಚಾಲಯವಂತೂ ಇಲ್ಲವೇ ಇಲ್ಲ, ಶಿಕ್ಷಕರ ಸಮೇತ ಮಕ್ಕಳು ಪಕ್ಕದ ತೋಟಗಳಿಗೆ ಹೊಲಗಳಿಗೆ ಹೋಗಿ ಶೌಚದ ಬಾಧೆ ತೀರಿಸಿಕೊಳ್ಳುವ ಪರಿಸ್ಥಿತಿ. ಶಿಕ್ಷಣ ಇಲಾಖೆ (Education Department) ನಿರ್ಲಕ್ಷ್ಯ ವಹಿಸಿದರೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹೇಗೆ ಆಗುತ್ತೆ ಎಂಬ ಬೇಸರ ವ್ಯಕ್ತಪಡಿಸಿ ಪ್ರಶ್ನೆ ಹಾಕಿದರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್.

ಇದ್ಯಾವುದೋ ಕಾಡಂಚಿನ ಊರ ಶಾಲೆಯ ಕಥೆಯಲ್ಲ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ಜಿಲ್ಲೆಯ ಗಡಿಭಾಗದ ಹಳ್ಳಿ ತ್ಯಾಗದಕಟ್ಟೆ ಚಿಕ್ಕ ಹಳ್ಳಿ ಶಾಲೆಯ ಪರಿಸ್ಥಿತಿ. ಇಲ್ಲಿಗೆ ದಾವಣಗೆರೆ ಜಿಲ್ಲಾಧಿಕಾರಿ ಒಮ್ಮೆ ಭೇಟಿ ಕೊಟ್ಟಿದ್ದರಂತೆ ಅಲ್ಲಿಂದಲೂ ಇದೇ ಸ್ಥಿತಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಈ ಗ್ರಾಮದಲ್ಲಿನ ಜನರು ಏನು ಸುಮ್ಮನೇ ಕೈ ಕಟ್ಟಿ ಕುಳಿತಿಲ್ಲ, ಹೊನ್ನಾಳಿ ತಾಲೂಕಿನ ಶಿಕ್ಷಣಾಧಿಕಾರಿ ಕಛೇರಿಗೆ ಅಲೆದು ಅಲೆದು ದೂರುಗಳ ಮನವಿಗಳ ಸರಮಾಲೆಗಳೇ ಆಗಿದ್ದರೂ ಫೈಲ್‌ ಗಳು ಟೇಬಲ್ ಗಳ ಮೇಲೆ ಕೂತು ದೂಳು ಹಿಡಿದರೂ ಅವುಗಳು ತಾಲೂಕು ಶಿಕ್ಷಣ ಇಲಾಖೆ ಬಿಟ್ಟು ದೂರದ ದಾವಣಗೆರೆ ಜಿಲ್ಲೆಯ ಉಪ ನಿರ್ದೇಶಕರ ಕಛೇರಿ ಮುಖ ಕಂಡಿಲ್ಲ.

Gruha Lakshmi; ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಚಾಲನಾ ಸಿದ್ದತೆ, ಪರಿಶೀಲನೆ

ಬಿಸಿಯೂಟ ತಯಾರಿ ಕೊಠಡಿ ಇಲ್ಲವೇ ಇಲ್ಲ

ಐವತ್ತು ಮಕ್ಕಳ ಈ ಗ್ರಾಮದಲ್ಲಿ ಐದನೇ ತರಗತಿವರೆಗೆ ಕಲಿಯಬಹುದು. ಎರಡೇ ಕೊಠಡಿಯಲ್ಲಿ ಮಾತ್ರ ಒಂದನೇ ಕ್ಲಾಸಿನ ಮಕ್ಕಳಿಂದ ಹಿಡಿದು ಮೂರನೇ ಕ್ಲಾಸ್ ಸೇರಿ ಒಬ್ಬರೇ ಶಿಕ್ಷಕ ಪಾಠ ಕಲಿಸಿದರೆ ಇನ್ನುಳಿದ ನಾಲ್ಕು ಐದನೇ ಕ್ಲಾಸು ಸೇರಿಸಿ ಎರಡು ಕಡೆ ಪಾಠ ಮಾಡುವ ಸ್ಥಿತಿ. ಇನ್ನೂ ಹೊಸ ಕಟ್ಟಡ ನಿರ್ಮಾಣ ಮಾಡುವಾಗಲೇ ಶೌಚಾಲಯ ಕಟ್ಟಿಲ್ಲ ಇದರಿಂದ ಶಾಲಾ ಮಕ್ಕಳು ಪಕ್ಕದ ತೋಟಗಳಿಗೆ ಹೊಲಗಳಿಗೆ ಹೋಗಿ ಶೌಚದ ಭಾದೆ ತೀರಿಸಿಕೊಳ್ಳುವ ಸ್ಥಿತಿ ನಿತ್ಯವೂ ಇದೇ ಪುನರಾವರ್ತನೆ, ಪ್ರತ್ಯೇಕ ಅನ್ನದಾಸೋಹ ಬಿಸಿಯೂಟ ತಯಾರಿ ಕೊಠಡಿ ಇಲ್ಲವೇ ಇಲ್ಲ, ಅದು ಕೂಡ 4-5 ಕಂಬೈನ್ಡ್ ಸ್ಟಡೀಸ್ ಕೊಠಡಿ ಯಲ್ಲೇ ಮುಖ್ಯ ಅಡುಗೆ ತಯಾರಿಕೆಯ ಪ್ರೇಮಮ್ಮನ ನಿಸ್ಸಾಯಕ ಮಾತುಗಳು.

Minority; ಅಲ್ಪಸಂಖ್ಯಾತರ ಸಮುದಾಯಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಯಾವುದೇ ಸಮಸ್ಯೆ ಬಗೆಹರಿದಿಲ್ಲ

ಅಲ್ಲೆ ಪಾಠ ಅಲ್ಲೆ ಊಟ, ಪಾಪ ಒಮ್ಮೊಮ್ಮೆ ಮಕ್ಕಳು ತರಕಾರಿ ಕತ್ತರಿಸುವ ಈಳಿಗೆ ಮಣೆ ಮೇಲೆ ಕಾಲಿಟ್ಟು ಕಾಲು ಕೊಯ್ದುಕೊಂಡ ಘಟನೆಗಳು ಆಗಿವೆ. ಹೊನ್ನಾಳಿ ತಾಲೂಕಿನ ಶಿಕ್ಷಣಾಧಿಕಾರಿ ಮಾತ್ರ ಜಾಣ ಕುರುಡು, ದಾವಣಗೆರೆ ಡಿಡಿಪಿಐ ಕಛೇರಿ ಕಡೆ ಕೈ ತೋರಿಸಿ ಸುಮ್ಮನಾಗುವುದು. ಚುನಾವಣೆ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳ ಹೇಳಿದಷ್ಟು ಬಂತು ಯಾವುದೇ ಸಮಸ್ಯೆ ಬಗೆಹರಿದಿಲ್ಲ, ಸರ್ಕಾರ ಬದಲಾದರೂ ಕ್ಷೇತ್ರ ಶಾಸಕರು ಬದಲಾದರು ಆದರೆ ಇಷ್ಟೊಂದು ಸಮಸ್ಯೆ ಗಳ ಹೊತ್ತು ನಿತ್ಯ ಜೀವನ ನಡೆಸುವ ಮಕ್ಕಳ ಶೈಕ್ಷಣಿಕ ಬದುಕು ಬವಣೆ ಬದಲಾಗೇ ಇಲ್ಲ.

ಜಿಲ್ಲೆಗೆ ಹೊಸ ಕಡಕ್ ಜಿಲ್ಲಾಧಿಕಾರಿ ವೆಂಕಟೇಶ್ ರವರು ಬಂದಿದ್ದಾರೇನೋ ನಿಜ. ಈ ಗಡಿ ಭಾಗದ ತ್ಯಾಗದಕಟ್ಟೆ ಶಾಲೆಯ ಈ ಅತಂತ್ರ ಸ್ಥಿತಿ ಸುಧಾರಿಸಿತೋ ಏನೋ ಎಂದು ಮಲತಾಯಿ ಧೋರಣೆಗೆ ಒಳಗಾಗಿರುವ ಈ ಗ್ರಾಮದ ಪರಿಸ್ಥಿತಿ ಬದಲಾಗುವುದೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!