raksha bandhan; ಅಳಿಸಲಾಗದ ಅನುಬಂಧ ರಕ್ಷಾ ಬಂಧನ- ಬಕ್ಷಿ ನಾಗರಾಜ, ವಿದ್ಯಾರ್ಥಿ
ರಕ್ಷಾ ಬಂಧನ (raksha bandhan) ಅಳಿಸಲಾಗದ ಅನುಬಂಧ ಸೋದರತೆಯ ಸಂಬಂಧ
ತಂಗಿಯ ಪ್ರೀತಿ ದೊರೆಯದ ಋಣಾನುಬಂಧ
ಅಕ್ಕನ ಅಕ್ಕರೆಯ ಸಕ್ಕರೆಯ ಸವಿಯದ ಅಕ್ಷಯದಂತೆ
ಸಹೋದರತೆಯ ರಕ್ತ ಸಂಬಂಧಿಯ ಸ್ನೇಹ ಸಂಬಂಧ
ರಕ್ಷಣೆ ನೀಡಲೆಂದೇ ಜೊತೆಯಲ್ಲಿ ಹುಟ್ಟಿದ ಸಹೋದರರು
ಮಾತೃ ವಾತ್ಸಲ್ಯ ಧರೆಯರೆಯುವ ಸಹೋದರಿಯರು
ತ್ಯಾಗ ಮೂರ್ತಿಯ ಸ್ವರೂಪ ಎಮಗೆ ಇವರೇ ದೈವ ರೂಪ
ಸದಾ ನಮ್ಮ ಒಳಿತಿಗಾಗಿ ಧ್ಯಾನಿಸುವ ಹೃದಯವಂತ
ಈ ನನ್ನ ಸಹೋದರಿಯರು ಸಹೋದರಿಯರನ್ನು ರಕ್ಷಣೆ ಮಾಡುವುದು ಸಹೋದರರ ಕರ್ತವ್ಯ. ರಕ್ಷಕರಿಗೆ ಶಕ್ತಿ ಈ ಸಹೋದರತ್ವದ ಬಾಂಧವ್ಯ ರಕ್ತ ಸಂಬಂಧದಲ್ಲಿಷ್ಟೇ ಇಲ್ಲ. ಇಂತಹ ಸೋದರತ್ವ ಹೃದಯ ತಟ್ಟಿ ಪ್ರೀತಿ ವಾತ್ಸಲ್ಯ ತೋರುವ ಬಂದುತ್ವ ಮಮತೆಯೇ ಈ ಸಹೋದರ ಸಹೋದರಿಯರ ಮಹತ್ವವಾಗಿದೆ. ಈ ರಾಖಿಹಬ್ಬವು ಒಂದು ಪವಿತ್ರವಾದ ಸಂಬಂಧವನ್ನು ಮೂಡಿಸುತ್ತದೆ ಇದರ ಜೊತೆಗೆ ಅಣ್ಣ ತಂಗಿಯ ಸಂಬಂಧ ಇದು ವಾತ್ಸಲ್ಯದಿಂದ ಕೂಡಿರುತ್ತದೆ ನನ್ನ ಪ್ರೀತಿಯ ಮುದ್ದು ಸಹೋದರಿ.
ಬಕ್ಷಿ ನಾಗರಾಜ..
ದಾವಣಗೆರೆ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ