‘ಹಸಿರು ಆಕರ್ಷಣೆ’: KSRTC ಕ್ರಮಕ್ಕೆ ನಾಗರಿಕರ ಸೆಲ್ಯೂಟ್..

‘ಹಸಿರು ಆಕರ್ಷಣೆ’: KSRTC ಕ್ರಮಕ್ಕೆ ನಾಗರಿಕರ ಸೆಲ್ಯೂಟ್..

ಬೆಂಗಳೂರು: ರಾಜ್ಯದ ಜನರ ಹೆಮ್ಮೆಯ ರಥ ಕೆಎಸ್ಸಾರ್ಟಿಸಿ ಇದೀಗ ಹಸಿರು ಐಸಿರಿಯ ಮಂತ್ರ ಪಠಿಸುತ್ತಿದೆ. ಕೆಂಪು ಬಸ್ ಮೂಲಕ ಬಡವರ ಸಾರಿಗೆಯ ಆಧಾರವಾಗಿರುವ ಈ ನಿಗಮ ಪ್ರಕೃತಿ ಶ್ರೀಮಂತಿಕೆಯ ಕ್ರಮಕ್ಕೆ ಮುನ್ನುಡಿ ಬರೆದಿದೆ.

‘ಹಸಿರು ಆಕರ್ಷಣೆ’: KSRTC ಕ್ರಮಕ್ಕೆ ನಾಗರಿಕರ ಸೆಲ್ಯೂಟ್..

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ಕುತೂಹಲದ ಕೇಂದ್ರಬಿಂದುವಾಯಿತು. ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುವಕುಮಾರ್ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದೆ.

‘ಹಸಿರು ಆಕರ್ಷಣೆ’: KSRTC ಕ್ರಮಕ್ಕೆ ನಾಗರಿಕರ ಸೆಲ್ಯೂಟ್..

ಈ ಸಂದರ್ಭದಲ್ಲಿ ಮಾತನಾಡಿದ ಅನ್ಬುಕುಮಾರ್, ಪ್ರಾಣಿ-ಪಕ್ಷಿಗಳ ಸಂಕುಲವನ್ನು ಕಾಪಾಡಿ ಪ್ರಕೃತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ಗಿಡಮರಗಳು ಪ್ರಮುಖ ಪಾತ್ರವನ್ನು ವಹಿಸುವುದರಿಂದ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡುವಲ್ಲಿ ಕೈಜೋಡಿಸಬೇಕಿದೆ ಎಂದರು. ಪರಿಸರ ಹಸಿರೀಕರಣದ ಈ ಕಾರ್ಯಕ್ರಮ ಪ್ರಯಾಣಿಕ ಸಮೂಹದ ಮೆಚ್ಚುಗೆಗೆ ಪಾತ್ರವಾಗಿದೆ.

ನಿಗಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಕೈಗೊಂಡ ಕ್ರಮಗಳು:

ವಿಭಾಗಗಳ ವ್ಯಾಪ್ತಿಯಲ್ಲಿರುವ ಪ್ರಮುಖ ಬಸ್ ನಿಲ್ದಾಣಗಳ ಆವರಣದಲ್ಲಿ ಶುಚಿತ್ವದ ಜೊತೆಗೆ ಪರಿಸರ ಸಂರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ನಿಗಮದ ಎಲ್ಲಾ ಅಧಿಕಾರಿ, ಸಿಬ್ಬಂದಿ, ಮೇಲ್ಲಿಚಾರಕರು, ತಾಂತ್ರಿಕ/ಚಾಲನಾ ಸಿಬ್ಬಂದಿಗಳು ಸಾರ್ವಜನಿಕ ಸ್ವಯಂ ಸೇವಕರು ಸಂಘ ಸಂಸ್ಥೆಯ ಕಾರ್ಯಕರ್ತರು ಶಾಲಾ ಮಕ್ಕಳು, ಎನ್,ಸಿ,ಸಿ ರವರೊಡನೆ ಒಟ್ಟುಗೂಡಿ ಚರ್ಚಿಸಿ, ಶ್ರಮದಾನದ ಮೂಲಕ ವಿಭಾಗ ಮಟ್ಟದ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಸಕ್ತ 2023-2024ನೇ ಸಾಲಿನಲ್ಲಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಒಟ್ಟು 4000 ಸಸಿ/ಗಿಡಗಳನ್ನು ನೆಡಲು ವಿಭಾಗವಾರು ಯೋಜನೆಯನ್ನು ರೂಪಿಸಲಾಗಿದೆ.

‘ಹಸಿರು ಆಕರ್ಷಣೆ’: KSRTC ಕ್ರಮಕ್ಕೆ ನಾಗರಿಕರ ಸೆಲ್ಯೂಟ್..

ನಿಗಮದ 15 ವಿಭಾಗಗಳಲ್ಲಿ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳನ್ನು ಅಂತರ್ಜಾಲಗೊಳಿಸಲಾಗಿದೆ.

ನಿಗಮದ ಪ್ರಕೃತಿ ಎಂಬ ವಾಹನದೊಂದಿಗೆ ತಾಂತಿಕ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ಎಲ್ಲಾ ವಿಭಾಗಗಳ ಘಟಕಗಳಿಗೆ ಬೇಟಿ ನೀಡಿ, ಘಟಕಗಳ ಪರಿವೀಕ್ಷಣೆ ಹಾಗೂ ವಾಹನಗಳ ಅನಿರೀಕ್ಷಿತ ವಾಯು ಮಾಲಿನ್ಯ ಹೊಗೆ ತಪಾಸಣೆ ಮಾಡಲಾಗುತ್ತಿರುತ್ತದೆ.

ಪ್ರಮುಖ ಬಸ್ ನಿಲ್ದಾಣ/ಘಟಕ/ವಿಭಾಗೀಯ ಕಛೇರಿ/ಕಾರ್ಯಾಗಾರಗಳಲ್ಲಿ ಧೂಮಪಾನ ನಿಷೇಧಿಸಲಾಗಿದ್ದು, 2022-23ನೇ ಸಾಲಿನಲ್ಲಿ ನಿಯಮ ಉಲ್ಲಂಘಿಸಿದ ಪ್ರತಿ ವ್ಯಕ್ತಿಗೆ ರೂ.200 ರಂತೆ ದಂಡವನ್ನು ವಿಧಿಸಿದ್ದು, ರೂ. 29,51,200 ದಂಡದ ಮೊತ್ತ ಸಂಗ್ರಹಿಸಲಾಗಿರುತ್ತದೆ.

ಪ್ರಮುಖ ಬಸ್ ನಿಲ್ದಾಣ/ಘಟಕ/ವಿಭಾಗೀಯ ಕಛೇರಿ/ಕಾರ್ಯಾಗಾರಗಳಲ್ಲಿ ಬಯಲು ಮೂತ್ರ ವಿಸರ್ಜನೆ ನಿಷೇಧಿಸಲಾಗಿದ್ದು 2022-23ನೇ ಸಾಲಿನಲ್ಲಿ ಈ ನಿಯಮ ಉಲ್ಲಂಘಿಸಿದ ಪ್ರತಿ ವ್ಯಕ್ತಿಗೆ ರೂ.100 ರಂತೆ ದಂಡವನ್ನು ವಿಧಿಸಿದ್ದು, ರೂ.17,12,800 ದಂಡದ ಮೊತ್ತ ಸಂಗ್ರಹಿಸಲಾಗಿರುತ್ತದೆ.

ಉಗುಳುವಿಕೆಯ ನಿಷೇಧ ನಿಯಮ ಉಲ್ಲಂಘಿಸಿದವರಿಗೆ ರೂ. 100 ರಂತೆ ದಂಡ ವಿಧಿಸಲಾಗುತ್ತಿದ್ದು, ನಿಗಮದಲ್ಲಿ 2022-23ನೇ ಸಾಲಿನಲ್ಲಿ ರೂ.7,25,100/- ದಂಡದ ಮೊತ್ತ ಸಂಗ್ರಹಿಸಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!