ವಿದ್ಯುತ್ ದರ ನಾವು ಏರಿಕೆ ಮಾಡಿಲ್ಲ.! ಜುಲೈ 7 ಕ್ಕೆ ಬಜೆಟ್ ಮಂಡನೆ- ಗೋಹತ್ಯೆ ಕಾಯ್ದೆ ಬಗ್ಗೆ ಸಿಎಂ ಏನಂದ್ರು ಗೊತ್ತಾ.?
ದಾವಣಗೆರೆ : ಸರ್ಕಾರ ವಿದ್ಯುತ ದರ ಏರಿಕೆ ಮಾಡಿಲ್ಲ. ವಿದ್ಯುತ್ ಅರ್.ಇ.ಸಿ ಅವರು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ದಾವಣಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರುವ ಮೊದಲೇ ರೆಗ್ಯುಲೆಟರ್ ಆ್ಯಕ್ಟ್ ಪ್ರಕಾರ ಅವರು ದರ ಪರಿಷ್ಕರಣೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಗೋಹತ್ಯೆ ಕಾಯ್ದೆ ವಾಪಸ್ ಪಡೆಯುವ ವಿಚಾರಕ್ಕೆ ಸಂಬಂದಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 1964 ಆ್ಯಕ್ಟ್ ಪ್ರಕಾರ 12 ವರ್ಷ ತುಂಬಿದ ರಾಸುಗಳು ಮತ್ತು ವ್ಯವಸಾಯಕ್ಕೆ ಅನಕೂಲಕ್ಕೆ ಬಾರದ ರಾಸು ಮುಕ್ತಗೊಳಿಸಲಾಗಿತ್ತು. ಇದು 1964 ರಲ್ಲೇ ಆದ ಕಾನೂನು ಎಂದು ಹೇಳಿದರು. ಗೋಹತ್ಯೆ ನಿಷೇದದ ಬಗ್ಗೆ ಕ್ಯಾಬಿನೆಟ್ ನಲ್ಲಿ ನಾವು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಜುಲೈ 3 ರಂದು ಅಧಿವೇಶನ ನಡೆಯಲಿದೆ. 7 ನೇ ತಾರೀಖು ಬಜೆಟ್ ಮಂಡಿಸಲಾಗುತ್ತೆ ಎಂದ ಸಿದ್ದರಾಮಯ್ಯ, ಬಜೆಟ್ ಗಾತ್ರದ ಬಗ್ಗೆ ಮಾಹಿತಿ ಕೊಡಲಿಲ್ಲ.ಮುಂಗಾರು ಬಿತ್ತನೆ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಸಿಇಓ ಜೊತೆ ಮಾತನಾಡಿದ್ದೆನೆ. ಬಿತ್ತನೆಗೆ ಬೀಜ ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಬೇಕು ಅಂತ ಸೂಚನೆ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.