ಹಾಸನ: ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಪ್ಯಾಕೇಟ್..ಮೊಬೈಲ್..ಹೆಡ್ ಫೋನ್..!?

ಹಾಸನ: ಜನವರಿ 19 ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ಎಎಸ್ಪಿ ತಮ್ಮಯ್ಯ ಹಾಗೂ ಡಿವೈಎಸ್ಪಿ ಉದಯ್ ಭಾಸ್ಕರ್ ನೇತೃತ್ವದಲ್ಲಿ ನೂರು ಪೊಲೀಸರಿದ್ದ ತಂಡ ದಿಢೀರ್ ದಾಳಿ ನಡೆಸಿತ್ತು. ಈ ದಾಳಿಯ ವೇಳೆ ಪೊಲೀಸರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಹಾಗು ಎರಡು ಮೊಬೈಲ್, ಹೆಡ್ ಫೋನ್, ಗಾಂಜಾ ಪ್ಯಾಕೇಟ್ ರೆಡ್ ಹ್ಯಾಂಡ್ ಆಗಿ ದೊರೆತವು. ನಾಲ್ವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ಅಂಶ ರಕ್ತದಲ್ಲಿದ್ದ ಮಾಹಿತಿ ಬಹಿರಂಗವಾಗಿದೆ. ಕೊಲೆ ಆರೋಠಿದಲ್ಲಿದ್ದ ಇಬ್ಬರು ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರು ಬ್ಯಾರಕ್ ಗಳಲ್ಲಿ ಏಕ ಕಾಲ ದಾಳಿ ನಡೆಸಿದಾಗ ಪ್ರಕರಣ ಬಯಲಾಗಿದೆ. ಜೈಲಿಗೆ ಗಾಂಜಾ ಸರಬರಾಜು ಮಾಡಿದ್ದು ಯಾರು, ಮೊಬೈಲ್ ಫೋನ್ ಇಟ್ಡುಕೊಂಡು ಅವರುಗಳು ಮಾಡುತ್ತಿದ್ದ ಆಪರೇಷನ್ ಏನು? ಜೈಲರ್ ಗಳು ಇದರಲ್ಲಿ ಭಾಗಿಯಾಗಿದ್ದಾರಾ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂಬುವುದಾಗಿ ಹಾಸನ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!