ಉತ್ತರ ಕರ್ನಾಟಕ ಜನರ ಅಭಿವೃದ್ಧಿಗೆ ಬದ್ಧ- ಪ್ರಧಾನಿ ಮೋದಿ

ಯಾದಗಿರಿ : ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ. ಇದಕ್ಕೂ ಮುನ್ನ ಜಲಜೀವನ ಮಿಷನ್ ಯೋಜನೆಯ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇನ್ನೂ ಯಾದಗಿರಿಯಲ್ಲಿ ಜನರನ್ನ ಕುರಿತು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಡಬಲ್ ಇಂಜಿನ್ ಸರ್ಕಾರಗಳು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬದ್ಧವಾಗಿವೆ. ಕುಡಿಯುವ ನೀರು ಮಾತ್ರವಲ್ಲ, ದಶಕಗಳಿಂದ ಇಲ್ಲಿ ಆಗದಿರುವ ಮೂಲಸೌಕರ್ಯಗಳ ಅಭಿವೃದ್ಧಿಯ ಕನಸುಗಳು ಇನ್ನು ಸದ್ಯದಲ್ಲೇ ನೆರವೇರಲಿದ್ದು ಈ ಮೂಲಕ ಉತ್ತರ ಕರ್ನಾಟಕದ ಎಲ್ಲಾ ಜನರ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರತಿ ವರ್ಷ ತೊಗರಿ ಬೆಳೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸುತ್ತವೆ. ಉತ್ತರ ಕರ್ನಾಟಕವು ತೊಗರಿಯ ಕಣಜವಾಗಿದೆ. 2014ಕ್ಕಿಂತ ಮುಂಚೆ ತೊಗರಿಗೆ ಕೆಲವು ಕೋಟಿಗಳಷ್ಟೇ ನೀಡಲಾಗುತ್ತಿತ್ತು. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 7,000 ಕೋಟಿ ರೂ. ಸಹಾಯ ಧನ ನೀಡಿದ್ದೇವೆ. ಇದಿಷ್ಟೇ ಅಲ್ಲದೆ, ಈ ಭಾಗದ ರೈತರ ಅಭಿವೃದ್ಧಿಗೆ ಕೇಂದ್ರದ ಹಲವಾರು ಯೋಜನೆಗಳು ಉಪಯೋಗಕ್ಕೆ ಬರಲಿವೆ. ಕೇಂದ್ರವು, ಬಯೋಫ್ಯೂಯೆಲ್, ಇಥನಾಲ್ ಉತ್ಪಾದನೆಗೆ ಒತ್ತು ಕೊಟ್ಟಿದೆ. ಪೆಟ್ರೋಲ್ ನಲ್ಲಿ ಇಥನಾಲ್ ಬ್ಲೆಂಡಿಂಗ್ ಮಾಡುವುದಕ್ಕೆ ಒತ್ತು ಕೊಟ್ಟಿದೆ. ಇದರಿಂದಲೂ ರೈತರಿಗೆ ನೆರವಾಗಲಿದೆ ಎಂದು ಹೇಳಿದರು.
ನಾವು ಎಂದಿಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿಟ್ಟು ರಾಜಕಾರಣ ಮಾಡುತ್ತೇವೆ. ಯಾದರಿಗಿ ಸಹಿತವಾಗಿ ದೇಶದ ನೂರಾರು ಇಂಥ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!