ದಾವಣಗೆರೆ ಜಿಲ್ಲೆಯ ಪ್ರಖ್ಯಾತ ಆರ್ ಟಿ ಐ ಕಾರ್ಯಕರ್ತರ ನಡುವೆ ಮಾತಿನ ಕಾಳಗ.!
ದಾವಣಗೆರೆ: ಜಿಲ್ಲೆಯಲ್ಲಿ ಆರ್ ಟಿಐ ಕಾರ್ಯಕರ್ತನ ಕೊಲೆ ನಡುವೆ. ಈಗ ಆರ್ ಆರ್ ಟಿಇ ಕಾರ್ಯಕರ್ತರ ನಡುವೆ ಈಗ ತಿಕ್ಕಾಟ ಶುರುವಾಗಿದೆ.
ದಾವಣಗೆರೆಯಲ್ಲಿ ಆರ್ ಟಿ ಐ ಕಾರ್ಯಕರ್ತರಲ್ಲಿ ಮಂಚೂಣಿಯಲ್ಲಿರುವ ಮಣಿ ಸರ್ಕಾರ್ ಹಾಗೂ ಹರೀಶ್ ಹಳ್ಳಿ ಎಲ್ಲ ಇಲಾಖೆಗಳಲ್ಲಿ ಚಿರಪರಿಚಿತರಾಗಿದ್ದಾರೆ. ಈಗ ಇವರಿಬ್ಬರ ನಡುವೆ ಯಾವುದೊ ವಿಚಾರಕ್ಕೆ ವ್ಯತ್ಯಾಸ ಕಂಡು ಬಂದಿರುವುದರಿಂದ ಇವರಿಬ್ಬರ ನಡುವೆ ಫೋನ್ ನಲ್ಲಿ ವಾದ-ವಾಗ್ವದ ನಡೆದಿದೆ.
ಮಾಹಿತಿ ಹಕ್ಕು ಅಧಿನಿಯಮದ ಮೂಲಕ ಸರ್ಕಾರದ ವಿವಿಧ ಇಲಾಖೆಗಳಿಂದ ಮಾಹಿತಿ ಕೇಳುವ ವಿಚಾರದಲ್ಲಿ ಇಬ್ಬರು ಸಾಮಾಜಿಕ ಕಾರ್ಯಕರ್ತರ ನಡುವೆ ದೂರವಾಣಿ ಮೂಲಕ ಜಗಳ ನಡೆದಿದೆ.
ಹರೀಶ್ ಹಳ್ಳಿ ಮತ್ತು ಮಣಿಸರ್ಕಾರ್ ಅವರ ನಡುವೆ ಈ ಮಾತಿನ ಚಕಮಕಿ ನಡೆದಿದೆ. ಮೊಬೈಲ್‌ನಲ್ಲಿ ಇಬ್ಬರೂ ಕೂಡ ಸಾಕಷ್ಟು ಕಾವೇರುವ ಮಾತಿನ ಚಕಮಕಿ ನಡೆಸಿದ್ದಾರೆ. ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದ ಮಹಾನಗರ ಪಾಲಿಕೆ ಕಂದಾಯಾಧಿಕಾರಿ ವೆಂಕಟೇಶ್ ಅವರ ವಿಚಾರ ಕೂಡ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವುದು ಕೂತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ವೆಂಕಟೇಶ್ ಅವರನ್ನು ಹಿಡಿದುಕೊಡಲು ನಾನು 12 ಲಕ್ಷ ರೂ ವೆಚ್ಚ ಮಾಡಿದ್ದೇನೆ ಎಂದು ಮಣಿ ಸರ್ಕಾರ ಹೇಳಿರುವುದು ಸಂಭಾಷಣೆಯಲ್ಲಿ ದಾಖಲಾಗಿದೆ. ಹರೀಶ್ ಹಳ್ಳಿ ಅವರು ಸರ್ಕಾರದ ಯಾವ ಇಲಾಖೆಯಿಂದ ಯಾವೆಲ್ಲ ಮಾಹಿತಿ ಕೋರಿ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ದಾಖಲೆ ಪಡೆದಿದ್ದಾರೆ ಎನ್ನುವ ಮಾಹಿತಿ ಕೊಡಿ ಎಂದು ಕೃಷ್ಣ ಎನ್ನುವವರು ಅದೇ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಲೋಕಾಯುಕ್ತಕ್ಕೆ ಒಬ್ಬರ ಮೇಲೊಬ್ಬರು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದಾರೆ.
ಕೆರಾ ಕಿತ್ತುಹೋಗುತ್ತವೆ ಎಂದು ಮಣಿ ಸರ್ಕಾರ ಹೇಳಿರುವುದು, ಇದಕ್ಕೆ ಹರೀಶ್ ಹಳ್ಳಿ ಅದೆಷ್ಟು ಜೊತೆ ಕೆರದಲ್ಲಿ ಹೊಡೆಯುತ್ತೀಯೋ ನೋಡೋಣ ನಾಳೆ ಗಾಂಧಿ ಸರ್ಕಲ್‌ಗೆ ಬಾ ಎಂದು ಸವಾಲು ಹಾಕಿದ್ದಾರೆ.
ಇದಕ್ಕೆ ಉತ್ತರಿಸುವ ಮಣಿ ಸರ್ಕಾರ್, ನಾನು ಈಗ ಬೆಂಗಳೂರಿನಲ್ಲಿ ಇದ್ದೇನೆ. ನಾಳೆ ಬೆಳಿಗ್ಗೆ 11 ಗಂಟೆಗೆ ನೀನು ಇದ್ದಲ್ಲಿಯೇ ಬರುತ್ತೇನೆ ಎಂದು ಹೇಳಿದ್ದಾರೆ..
ಹರೀಶ್ ಹಳ್ಳಿ, ಮಣಿ ಸರ್ಕಾರ್ ಜೊತೆ ಮಧ್ಯಸ್ಥಿಕೆ ವಹಿಸಿಕೊಂಡು ಓರ್ವ ವ್ಯಕ್ತಿಯ ನಡುವೆ ಸಂಭಾಷಣೆ ನಡೆದಿದ್ದು, ಮೂವರ ನಡುವೆ ವಾದ-ವಾಗ್ವಾದ ನಡೆದಿದೆ.. ನಿವಿಬ್ಬರು ಒಂದೇ ವೃತ್ತಿ ಮಾಡೋರೋ ಚೆನ್ನಾಗಿರಬೇಕೇಷ್ಟೇ. ಹೌದು ಅಣ್ಣ.. .ನಾವೇನಾದರೂ ಹರೀಶ್ ಹಳ್ಳಿ ಎಂದು ಹೆಸರು ತೆಗೆಯುತ್ತೀವ್ವ?… ಗೌರವದಿಂದ ಏನ್ರಿ ಚೆನ್ನಾಗಿದ್ದೀರಾ.. ಈ ವರ್ಡ್ ಬಿಟ್ಟರೇ ನಾವು ಯಾವತ್ತು ಏನು ಮಾತನಾಡಿಲ್ಲ.. ನಿಮ್ಮ ಕಡೆ ತಿರುಗು ನೋಡೋಲ್ಲ.. ಮಣಿ ಸರಕಾರ ಅಂದ್ರೆ ನನಗೆ ಯಾರು ಗೊತ್ತಿಲ್ಲ ಎಂದು ಹರೀಶ್ ಹಳ್ಳಿ ಹೇಳಿದ್ದಾರೆ..
ಇವರಿಬ್ಬರ ನಡುವೆ ನಡೆದಿರುವ 5 ನಿಮಿಷದ ಸಂಭಾಷಣೆ ಇದೀಗ ವೈರಲ್ ಆಗಿದ್ದು ಇನ್ನೂ ಹೆಚ್ಚಿನ ಸಂಭಾಷಣೆಯ ಆಡಿಯೋ ಇದೇ ಎನ್ನಲಾಗಿದ್ದು ಮುಂದೆ ಅದೂ ಕೂಡ ವೈರಲ್ ಹಾಗುವ ಸಾಧ್ಯತೆ ಇದೆ ಎನ್ನಲಾಗಿದೆ.