assault; ರೈತರ ಮೇಲೆ ಹಲ್ಲೆ ನಡೆಸಿದ ಪಿಎಸ್’ಐ: ವಿಡಿಯೋ ವೈರಲ್

ಚಿತ್ರದುರ್ಗ,  ಅ.17: ರೈತರು ಹಾಗೂ ಕಂಪನಿ ಸಿಬ್ಬಂದಿಗಳ ನಡುವೆ ಆದ ವಾಗ್ವಾದವನ್ನು ವಿಚಾರಿಸಲು ಬಂದ ಪಿಎಸ್’ಐ ರೈತರ ಮೇಲೆ ರೌಡಿಯಂತೆ ಹಲ್ಲೆ (assault) ನಡೆಸಿದ ವಿಡಿಯೋ ವೈರಲ್ ಆಗಿದೆ.

ಜಿಲ್ಲೆಯ ಅಡವಿಗೊಲ್ಲರಹಳ್ಳಿ ಗ್ರಾಮದಲ್ಲಿರುವ ರೆನಿವ್ ಉತ್ಪಾದನಾ ಕಂಪನಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯ ವೇಳೆ ವಿದ್ಯುತ್ ಪ್ಯಾನ್ ಲೈನ್ ಎಳೆಯುವ ವಿಚಾರಕ್ಕೆ ರೈತರು ಹಾಗೂ ಕಂಪನಿ ಸಿಬ್ಬಂದಿಗಳ ನಡುವೆ ವಾಗ್ವಾದವಾಗಿದ್ದು, ಅದನ್ನು ವಿಚಾರಿಸಲು ಬಂದ ಭರಮಸಾಗರ ಪೊಲೀಸ್ ಠಾಣೆ ಪಿಎಸ್’ಐ ರವಿ ನಾಯ್ಕ್ ರೈತರ ಮೇಲೆ ರೌಡಿಯಂತೆ ಹಲ್ಲೆ ನಡೆಸಿದ್ದಾರೆ.

congress; ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ: ವಿನಯ್‌ ಕುಮಾರ್

ವಿಚಾರಣೆ ವೇಳೆ ರೈತರ ಎದೆ ಮೇಲಿನ ಟೀ ಶರ್ಟ್ ಹಿಡಿಯುವುದಲ್ಲದೇ, ರೈತ ರಹಮತ್ ವುಲ್ಲಾ ಹಾಗೂ ಸಹೋದರ ಬಾಬು ಮೇಲೆಯೂ ಹಲ್ಲೆ ನಡೆಸಿದ್ದಾರೆ ಹಾಗೂ ವೃದ್ದೆ ಮೆಹಬೂಬಿ ಮೇಲೆ ಮಹಿಳಾ ಪೊಲೀಸರು ಹಲ್ಲೆ ಮಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ರೈತರು ಪೊಲೀಸರ ವಿರುದ್ದ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!