ದಾವಣಗೆರೆ

IGP: ವರದಿಗಾರರ ಮೇಲೆ ASP ದರ್ಪ: ಕ್ರಮಕ್ಕೆ ಒತ್ತಾಯಿಸಿ IGPಗೆ ಪತ್ರಕರ್ತರ ಮನವಿ

Share
Share

ದಾವಣಗೆರೆ:(IGP) ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದುರ್ವರ್ತನೆ ತೋರಿರುವುದನ್ನು ಖಂಡಿಸಿ ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಬಿ.ಆರ್.ರವಿಕಾಂತೇಗೌಡ ಅವರಿಗೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಲಾಯಿತು.

ಪಂಚಮಸಾಲಿ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರ ವರದಿಗಾಗಿ ಸುದ್ದಿಗಾರರು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮಠದ ಶ್ರೀಗಳನ್ನು ಮಾತನಾಡಿಸಲು ಮುಂದಾದಾಗ ಎದುರಿಗೆ ಬಂದ ಪರಮೇಶ್ವರ ಹೆಗಡೆ ಅವರು ಮಾಧ್ಯಮದವರನ್ನು ತಡೆದು ನಿಲ್ಲಿಸಿದ್ದಾರೆ. ನಿಮ್ಮಿಂದಲೇ ಇಂತಹ ಗಲಾಟೆಗಳು ನಡೆಯುತ್ತವೆ, ನೀವಿಲ್ಲದಿದ್ದರೆ ಎಲ್ಲವೂ ಸರಿ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಟಿವಿ ಮಾಧ್ಯಮದ ಕ್ಯಾಮರಾಮನ್ ದಿನೇಶ್ ಅವರನ್ನು ಏಕವಚನದಲ್ಲಿ ನಿಂದಿಸಿ ದರ್ಪ ತೋರಿದ್ದಾರೆ ಎಂದು ಮಾಧ್ಯಮದವರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದ ವೇಳೆ ಸಾರ್ವಜನಿಕರು ಶೂ ಮತ್ತು ಚಪ್ಪಲಿಗಳನ್ನು ತೂರುತ್ತಿದ್ದರೂ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಎಎಸ್ಪಿ, ಅದನ್ನು ಪ್ರಶ್ನಿಸಿದ ಮಾಧ್ಯಮದವರ ವಿರುದ್ಧವೇ ಕೆಂಡಮಂಡಲವಾಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಹಿಂದೆ ಉಪ ಚುನಾವಣೆ ಪ್ರಚಾರದ ವೇಳೆಯೂ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಮಾತನಾಡಿಸಲು ಹೋದ ಸುದ್ದಿಗಾರರನ್ನು ಎಳೆದಾಡಿ ವಾಗ್ವಾದ ನಡೆಸಿದ್ದ ಘಟನೆಯನ್ನು ಇಲ್ಲಿ ಪ್ರಸ್ತುತ ಪಡಿಸಿ ಮಾತನಾಡಿದ ಪತ್ರಕರ್ತರು. ಕರ್ತವ್ಯ ನಿರತ ಪತ್ರಕರ್ತರ ಮೇಲೆ ಪದೇ ಪದೇ ದರ್ಪ ತೋರುತ್ತಿರುವ ಅಧಿಕಾರಿಯು ತಕ್ಷಣವೇ ಕ್ಷಮೆಯಾಚಿಸಬೇಕು. ಇಲಾಖೆಯ ಮೇಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಅಧ್ಯಕ್ಷ ನಾಗರಾಜ್ ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಹಿರಿಯ ಪತ್ರಕರ್ತರಾದ ಸಿದ್ದಯ್ಯ ಹಿರೇಮಠ್, ಟಿ.ಎಸ್. ತಿಪ್ಪೇಸ್ವಾಮಿ, ಬಸವರಾಜ್ ದೊಡ್ಮನಿ, ಎ.ಎನ್. ನಿಂಗಪ್ಪ, ರಾಜೇಶ್, ಸಿಕಂದರ್, ಮಹಾಂತೇಶ್, ಹೆಚ್.ಎಂ.ಪಿ. ಕುಮಾರ್, ಪುನೀತ್ ಆಪ್ತಿ, ಮಧು ನಾಗರಾಜ್, ದಿನೇಶ್, ಶಿವುಕುಮಾರ್, ನೂರುಲ್ಲಾ, ಲೋಕೇಶ್, ರಮೇಶ್, ಕಿರಣಕುಮಾರ್, ಶಂಭು, ಅಣ್ಣಪ್ಪ ಕುಂದುವಾಡ, ಬದ್ರಿನಾಥ್, ಮಹೇಶ್, ನಿಂಗರಾಜ್, ಶಿವಮೂರ್ತಿ,  ಸುರೇಶ್, ಅಜಯ್ ಸೇರಿದಂತೆ ಮತ್ತಿತರರಿದ್ದರು.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

Harihara: ಹರಿಹರ ಪಂಚಮಸಾಲಿ ಮಠದಲ್ಲಿ ಟ್ರಸ್ಟಿಗಳ ಬಂಡಾಯ: ಸಂಘಕ್ಕೆ ನಮ್ಮನ್ನು ಉಚ್ಚಾಟಿಸಲು ಅಧಿಕಾರವಿಲ್ಲ – ಬಿ ಸಿ ಉಮಾಪತಿ

Harihara: ಹರಿಹರ ಪಂಚಮಸಾಲಿ ಮಠದಲ್ಲಿ ಟ್ರಸ್ಟಿಗಳ ಬಂಡಾಯ: ಸಂಘಕ್ಕೆ ನಮ್ಮನ್ನು ಉಚ್ಚಾಟಿಸಲು ಅಧಿಕಾರವಿಲ್ಲ ದಾವಣಗೆರೆ:(Harihara) ಹರಿಹರ ತಾಲ್ಲೂಕಿನ ಹನಗವಾಡಿ ಬಳಿಯ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿನ ಆಂತರಿಕ ಭಿನ್ನಮತ ಮತ್ತೊಂದು ಸ್ವರೂಪದಲ್ಲಿ...

ದಾವಣಗೆರೆ

Expell: ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್, ಮತ್ತು ಜ್ಯೋತಿ ಪ್ರಕಾಶ್ ಟ್ರಸ್ಟ್‌ನಿಂದ ಉಚ್ಚಾಟನೆ: ಸೋಮನಗೌಡ ಎಂ. ಪಟೀಲ್

ದಾವಣಗೆರೆ: (Expell) ಹರಿಹರದ ಪಂಚಮಸಾಲಿ ಪೀಠದ ಟ್ರಸ್ಟ್‌ನ ಮೂವರು ಪ್ರಮುಖ ಪದಾಧಿಕಾರಿಗಳನ್ನು ಉಚ್ಚಾಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷರಾದ ಸೋಮನಗೌಡ ಎಂ. ಪಟೀಲ್ ತಿಳಿಸಿದ್ದಾರೆ. ​ಮುಖ್ಯಾಂಶಗಳು:...

Related Articles
ದಾವಣಗೆರೆ

Students: ಇಂಗ್ಲೆಂಡ್ ಪ್ರವಾಸ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ದಾವಣಗೆರೆ:(Students) ಇಂಗ್ಲೆಂಡನ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನಾತಕ ಪದವಿಯ ಪ್ರತಿಭಾನ್ವಿತರು (ಸ್ಕೌಟ್-೦೨) ಅಂತರರಾಷ್ಟಿçಯ ಶೈಕ್ಷಣಿಕ...

ಅಪರಾಧದಾವಣಗೆರೆರಾಜ್ಯ / ಕರ್ನಾಟಕ

PSI: ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪಾನಮತ್ತ ಮಹಿಳೆ.!

ದಾವಣಗೆರೆ: (PSI) ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಪಾನಮತ್ತ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಅಸಭ್ಯವಾಗಿ...

ಅಪರಾಧದಾವಣಗೆರೆದೇಶರಾಜ್ಯ / ಕರ್ನಾಟಕ

Pocso: ವಚನಾನಂದ ಸ್ವಾಮಿ ಪೋಕ್ಸೊ ಪ್ರಕರಣ: ಹೈಕೋರ್ಟ್ ನಲ್ಲಿ ಪ್ರಕರಣ; ಜೂನ್ 30ಕ್ಕೆ ಆದೇಶ ಮುಂದೂಡಿಕೆ

​ದಾವಣಗೆರೆ: ದಾವಣಗೆರೆ ಸ್ಥಳೀಯ ಪೋಕ್ಸೊ (POCSO) ನ್ಯಾಯಾಲಯದಲ್ಲಿ ಇಂದು ನಿಗದಿಯಾಗಿದ್ದ  ವಚನಾನಂದ ಸ್ವಾಮಿ ಅವರ ಜಾಮೀನು ರದ್ದು...