ದಾವಣಗೆರೆ

PDS: ಜಿಲ್ಲೆಯ ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ತಿಂಗಳ ಪಡಿತರ ವಿತರಣೆ – ಮಧುಸೂಧನ್‌

Share
Share

ದಾವಣಗೆರೆ(PDS): ಮೇ-2026ರ ಮಾಹೆಯಲ್ಲಿ ಎನ್.ಎಫ್.ಎಸ್.ಎ (NFSA) ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಎರಡು ತಿಂಗಳ ಪಡಿತರವನ್ನು ಒಟ್ಟಾಗಿ ವಿತರಿಸಲು ಸರ್ಕಾರ ಆದೇಶಿಸಿದೆ. ದಾವಣಗೆರೆ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಅಂತ್ಯೋದಯ (AAY) ಕಾರ್ಡ್: ಪ್ರತಿ ಕಾರ್ಡಿಗೆ 28 ಕೆ.ಜಿ ಅಕ್ಕಿ ಮತ್ತು 42 ಕೆ.ಜಿ ರಾಗಿ ವಿತರಿಸಲಾಗುವುದು. ಆದ್ಯತಾ ಪಡಿತರ ಚೀಟಿ (PHH/BPL): ಪ್ರತಿ ಸದಸ್ಯರಿಗೆ 04 ಕೆ.ಜಿ ಅಕ್ಕಿ ಮತ್ತು 06 ಕೆ.ಜಿ ರಾಗಿ ವಿತರಿಸಲಾಗುವುದು. ರಾಜ್ಯ ಪಡಿತರ ಚೀಟಿ (State Cards): ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಮಾತ್ರ ಉಚಿತವಾಗಿ ನೀಡಲಾಗುವುದು.

ಫಲಾನುಭವಿಗಳು ಮೇ ಮತ್ತು ಜೂನ್ ಮಾಹೆಯ ಪಡಿತರಕ್ಕಾಗಿ ಎರಡು ಬಾರಿ ಬಯೋ ಮೆಟ್ರಿಕ್ ದೃಢೀಕರಣ ನೀಡಬೇಕಾಗುತ್ತದೆ. ಪಡಿತರ ಪಡೆಯುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಪ್ರತಿ ಪಡಿತರ ಚೀಟಿದಾರರು ಬಯೋ ದೃಢೀಕರಣ ನೀಡಿದ ತಕ್ಷಣ ನ್ಯಾಯಬೆಲೆ ಅಂಗಡಿಯಿಂದ ಕಂಪ್ಯೂಟರ್ ರಸೀದಿಯನ್ನು ಪಡೆದು, ಅದರಲ್ಲಿರುವ ಪ್ರಮಾಣದಂತೆ ಆಹಾರಧಾನ್ಯ ಪಡೆಯಬೇಕು. ನ್ಯಾಯಬೆಲೆ ಅಂಗಡಿಕಾರರು ಪಡಿತರ ವಿತರಣೆಯ ನಂತರ ಕಡ್ಡಾಯವಾಗಿ ಪ್ರತ್ಯೇಕ ರಶೀದಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ದಾವಣಗೆರೆ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 08192251552 ಅನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರಾದ ಮಧುಸೂಧನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಅಪರಾಧ

Sand: ದಾವಣಗೆರೆಯಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ವಶ: ಗಣಿ ಸಚಿವರ ಆಪ್ತನಿಂದ ಪೊಲೀಸರ ಮೇಲೆ ಒತ್ತಡ.?

ದಾವಣಗೆರೆ:(Sand) ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್...

ದಾವಣಗೆರೆ

DC: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ಕ್ರಮ : ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ: (DC) ಜಿಲ್ಲೆಯಲ್ಲಿ ಮುಂಗಾರು ನಿರೀಕ್ಷಿತ ಅವಧಿಯೊಳಗೆ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆ, ಕಟ್ಟೆ-ಕಾಲುವೆಗಳಲ್ಲಿ ಸಂಗ್ರಹವಾಗಿದ್ದ ನೀರು ದಿನೇದಿನೇ ಬತ್ತಿ ಹೋಗುತ್ತಿದೆ ಮಾತ್ರವಲ್ಲ ಅಂತರ್ಜಲದ ಮಟ್ಟ ಕಡಿಮೆಯಾಗಿದ್ದು, ಗ್ರಾಮೀಣ ಜನ-ಜಾನುವಾರುಗಳಿಗೆ ಉಂಟಾಗಬಹುದಾದ...

Related Articles
ಅಪರಾಧದಾವಣಗೆರೆದೇಶರಾಜ್ಯ / ಕರ್ನಾಟಕ

Pocso: ವಚನಾನಂದ ಸ್ವಾಮಿ ಪೋಕ್ಸೊ ಪ್ರಕರಣ: ಹೈಕೋರ್ಟ್ ನಲ್ಲಿ ಪ್ರಕರಣ; ಜೂನ್ 30ಕ್ಕೆ ಆದೇಶ ಮುಂದೂಡಿಕೆ

​ದಾವಣಗೆರೆ: ದಾವಣಗೆರೆ ಸ್ಥಳೀಯ ಪೋಕ್ಸೊ (POCSO) ನ್ಯಾಯಾಲಯದಲ್ಲಿ ಇಂದು ನಿಗದಿಯಾಗಿದ್ದ  ವಚನಾನಂದ ಸ್ವಾಮಿ ಅವರ ಜಾಮೀನು ರದ್ದು...

ದಾವಣಗೆರೆಅಪರಾಧ

Matka: ದಾವಣಗೆರೆ – ಹರಿಹರದಲ್ಲಿ ಅಕ್ರಮ ಚಟುವಟಿಕೆ ಹಾಗೂ ಕೆ.ಎಸ್. ಭಗವಾನ್ ಹೇಳಿಕೆ ವಿರುದ್ಧ ಶಾಸಕ ಬಿ.ಪಿ. ಹರೀಶ್ ಕಿಡಿ

ದಾವಣಗೆರೆ:(Matka) ಜಿಲ್ಲೆ ಹಾಗೂ ಹರಿಹರ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು, ಇತ್ತೀಚೆಗೆ ನಡೆದ ವಿವಾದಾತ್ಮಕ...

ದಾವಣಗೆರೆ

Davanagere: ದಾವಣಗೆರೆಯಲ್ಲಿ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ: ಪೂರ್ವಭಾವಿ ಸಭೆ ಯಶಸ್ವಿ

ದಾವಣಗೆರೆ: (Davanagere) ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ...