ಭಾರತ- ಉಕ್ರೇನ್ ಮತ್ತೊಂದು ಪ್ರೇಮ್ ಕಹಾನಿ
ಹೊಸದಿಲ್ಲಿ: ಉಕ್ರೇನ್‌ನಲ್ಲಿ ಪರಸ್ಪರ ಪ್ರೀತಿಸಿದ್ದ ಭಾರತ ಮೂಲದ ಪ್ರತೀಕ್ ಹಾಗೂ ಉಕ್ರೇನ್‌ನ ಪ್ರಜೆ ಲಿಬೊವ್ ಜೋಡಿ, ಇನ್ನೇನು ಯುದ್ಧ ಆರಂಭವಾಗುವುದಕ್ಕಿ0ತ ಮುಂಚೆ ಅಲ್ಲಿಂದ ಭಾರತಕ್ಕೆ ಬಂದು ಮಾ. 1ರಂದು ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು.ಅಂಥದ್ದೇ ಲವ್‌ಸ್ಟೋರಿಯೊಂದು ದಕ್ಷಿಣ ದೆಹಲಿಯಲ್ಲಿ ಅನಾವರಣಗೊಂಡಿದೆ. ಉಕ್ರೇನ್‌ನ ಆಯನಾ ಹರೋಡೆಟ್ಸ್ಕಾ (30), ದೆಹಲಿ ಹೈಕೋರ್ಟ್ನ ವಕೀಲ ಅನುಭವ್ ಭಾಸಿನ್ (33) ಸದ್ಯದಲ್ಲೇ ವಿವಾಹವಾಗಲಿರುವ ಜೋಡಿ. 2019ರಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಸೇವೆ ಸಲ್ಲಿಸುವಾಗ ಇಬ್ಬರೂ ಭೇಟಿಯಾಗಿ ಪ್ರೇಮಿಗಳಾಗಿದ್ದರು. ಆನಂತರ, ಅನುಭವ್ ಅವರು ದೆಹಲಿಗೆ ಹಿಂದಿರುಗಿದರು. ಆದರೆ, ಪ್ರೀತಿ ಹಾಗೆಯೇ ಮುಂದುವರಿದಿತ್ತು. ಉಕ್ರೇನ್ ಯುದ್ಧ ಶುರುವಾಗಿ ಒಂದೆರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ ಆಯನಾ, ಈಗ ಅನುಭವ್‌ರನ್ನು ವರಿಸಲು ಸಿದ್ಧವಾಗಿದ್ದಾರೆ.