Kerala Shabarimalai Rain: ಕೇರಳದಲ್ಲಿ ಭಾರಿ ಮಳೆ.! ಶಬರಿಮಲೈ ಯಾತ್ರಿಗಳು ಮಳೆಯ ನರ್ತನಕ್ಕೆ ತತ್ತರ.!
ಕೇರಳ: ಕೇರಳದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಬರಿಮಲೈಯಲ್ಲಿ ಅಯ್ಯಪ್ಪ ದರ್ಶನಕ್ಕೆ ಅ.17 ಮತ್ತು 18 ರಂದು ನಿಷೇಧಿಸಿ ಇಲ್ಲಿನ ಸರ್ಕಾರ ಆದೇಶಿಸಿದೆ.
ಕೇರಳದ ತ್ರಿಪುರ, ಕೊಟ್ಟಾಯಂ, ಎರ್ನಾಕುಲಂ ನಲ್ಲಿ ವರುಣಾರ್ಭಟ ಅಧಿಕವಾಗಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ರಸ್ತೆಯ ತುಂಬೆಲ್ಲಾ ಪ್ರವಾಹದಂತೆ ನೀರು ಹರಿಯುತ್ತಲಿದ್ದು, ಹಲವು ವಾಹನಗಳು ಚಲಿಸಲಾಗದೆ ಅಲ್ಲಿಯೇ ಜಖಂ ಗೊಂಡಿವೆ.
ಶಬರಿಮಲೈ ಯಾತ್ರಾರ್ಥಿಗಳು ಈ ಸಂದರ್ಭದಲ್ಲಿ ಮಾಲೆಹಾಕಿ ಹೋಗುವುದರಿಂದ ಅಲ್ಲಿ ಅಪಾಯದ ಮಟ್ಟದಲ್ಲಿ ಮಳೆ ಬರುತ್ತಿರುವುದರಿಂದ ವಾಹನಗಳು ಅಪಘಾತಕ್ಕೀಡಾಗುವ ಸಂಭವ ಹೆಚ್ಚಾಗಿರುವುದರಿಂದ ಪ್ರಾಣಾಪಾಯದಿಂದ ಪಾರು ಮಾಡುವ ಉದ್ದೇಶದಿಂದ ಕೇರಳ ಸರ್ಕಾರ ಶಬರಿಮಲೈ ಯಾತ್ರಾರ್ಥಿಗಳು ಅ.17 ಮತ್ತು 18 ರಂದು ಪ್ರವೇಶಕ್ಕೆ ನಿಷೇಧಿಸಿ ಆದೇಶ ಹೊರಡಿಸಿದೆ.