ಮಂಗಳೂರು ಕಮೀಷನರ್  ಮಾದರಿ, ಸೃಜನಾತ್ಮಕ, ಕ್ರಿಯಾಶೀಲ ನಡೆ

ಮಂಗಳೂರು ಕಮೀಷನರ್  ಮಾದರಿ, ಸೃಜನಾತ್ಮಕ, ಕ್ರಿಯಾಶೀಲ ನಡೆ

ಮಂಗಳೂರು: ಬಂದರು ನಗರಿ ಮಂಗಳೂರಿನ ಪೊಲೀಸರು ಜನಹಿತ ಕ್ರಮದಿಂದಾಗಿ ಇದೀಗ ರಾಜ್ಯದ ಗಮನಸೆಳೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕ್ರಿಯಾಶೀಲ ಕ್ರಮಕ್ಕೆ ಹೆಸರಾಗಿರುವ ಐಪಿಎಸ್ ಅಧಿಕಾರಿ ಕುಲದೀಪ್‌ ಕುಮಾರ್‌ ಜೈನ್‌, ಇದೀಗ ಮಂಗಳೂರು ನಗರದಲ್ಲಿ ಕೈಗೊಂಡಿರುವ ತಾಲೀಮು ಮಾದರಿ ಎನಿಸಿದೆ.

ಸಮಾಜದ ಮಾರಕ ಪರಿಸ್ಥಿತಿಗೆ ಕಾರಣವಾಗಬಲ್ಲ ಮಾದಕ ವ್ಯಸನ ಜಾಲಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆದಿರುವಾಗಲೇ, ಮತ್ತೊಂದೆಡೆ ಯುವ ಜನತೆಯನ್ನು  ಜಾಗೃತಿಗೊಳಿಸಲು ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ಮುನ್ನುಡಿ ಬರೆದಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಕಮಿಷನರೆಟ್‌ ವ್ಯಾಪ್ತಿಯ ಹಲವೆಡೆ ಡ್ರಗ್ಸ್‌ ಸೇವನೆ ಪ್ರಕರಣಗಳಲ್ಲಿ ಪಾಸಿಟಿವ್‌ ಬಂದವರಿಗೆ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ತಾವೇ ಖುದ್ದಾಗಿ ಕೌನ್ಸೆಲಿಂಗ್‌ ನಡೆಸಿದ ಕುಲದೀಪ್‌ ಕುಮಾರ್‌ ಅವರು ಕುತೂಹಲದ ಕೇಂದ್ರಬಿಂದುವಾದರು.

ಕೆಲ ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನ ಸಂಚಾರ ಉಪ ಪೊಲೀಸ್ ಆಯುಕ್ತರಾಗಿದ್ದಾಗ ಕುಲದೀಪ್‌ ಕುಮಾರ್‌ ಜೈನ ಅವರು, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಂಚಾರ ವಿಭಾಗದಲ್ಲಿ ಅನೇಕ  ಬದಲಾವಣೆಗೆ ಕಾರಣರಾಗಿದ್ದರು.  ತಮ್ಮ ವಿಭಾಗದ ಅಧಿಕಾರಿಗಳನ್ನು ಬಳಸಿಕೊಂಡು ಸಂಚಾರ ನಿಯಮಗಳ ಪರಿಪೂರ್ಣ ಜಾರಿ ಸಂಬಂಧ ತಮ್ಮದೇ ಆದ ರೀತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಶ್ಲಾಘನೆಗೆ ಭಾಜನರಾಗಿದ್ದರು. ಸಂಚಾರ ನಿಯಮಗಳ ಜಾರಿಗೆ ಮುನ್ನ ಸಾರ್ವಜನಿಕರಿಗೆ ಅದರ ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕೆಂಬುದು ಅವರ ನಿಲುವಾಗಿತ್ತು. ಅದರಂತೆ ಪ್ರತೀ ಸಿಗ್ನಲ್’ಗಳಲ್ಲಿ ವಾಹನ ಸವಾರರಿಗೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವ  ಕೆಲಸ ನಡೆಯುತ್ತಿತ್ತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!