ದಾವಣಗೆರೆಯಲ್ಲಿ ಟ್ರಾಫಿಕ್‌ ಸಮಸ್ಯೆಗೆ ಈ ನಂಬರ್ ಗೆ ತಿಳಿಸಲು ಪೋಲೀಸ್‌ ಇಲಾಖೆ‌ ಮನವಿ.

ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಸಂಚಾರಕ್ಕೆ ತೊಂದರೆಯಾಗಿದ್ದಲ್ಲಿ ಹಾಗೂ ಇನ್ನಿತರೆ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆ ಇದ್ದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನಲ್ಲಿ 24*7 ಸೌಲಭ್ಯ ಇರುವ ಮೊಬೈಲ್ ನಂಬ‌ರ್ 9480803208  ಗೆ ನೇರವಾಗಿ ಕರೆ ಮಾಡಿ ಮಾಹಿತಿಯನ್ನು ತಿಳಿಸಬಹುದು‌ ಎಂದು ಪೋಲೀಸ್‌ಇಲಾಖೆ ತಿಳಿಸಿದೆ.

ಈ ನಂಬ‌ರ್ ಗೆ ವ್ಯಾಟ್ಸನ್ ಇದ್ದು ವಾಟ್ಸಾಪ್  ಮೂಲಕವಾದರೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಂದೇಶವನ್ನು ಕಳುಹಿಸಿದಲ್ಲಿ, ನಿಮ್ಮ ಕರೆಗೆ/ಸಂದೇಶಕ್ಕೆ ಕೂಡಲೇ ಸ್ಪಂದಿಸಿ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲಾಗುವುದು. ಹಾಗೂ ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಗೆ ಕಂಡು ಬಂದಲ್ಲಿ ಅವರು ಅದರ ಫೋಟೋ ತೆಗೆದು, ವಾಹನದ ನೊಂದಣಿ ಸಂಖ್ಯೆ ಸಮೇತ ಸ್ಥಳ ಮತ್ತು ಸಮಯವನ್ನು ನಮೂದಿಸಿ, ಈ ನಂಬರ್ ಗೆ ವ್ಯಾಟ್ಸಪ್ ಮಾಡಿದಲ್ಲಿ ಆ ವಾಹನ ಸವಾರರ ವಿರುದ್ಧ ಸರ್ವಾಜನಿಕರ ದೂರು ಎಂದು ದಾಖಲಿಸಿ, ಸಂಚಾರ ನಿಯಮದಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು  ಸಾರ್ವಜನಿಕರಲ್ಲಿ ಪೋಲೀಸ್ ವರಿಷ್ಟಾಧಿಕಾರಿ ಅರುಣ್ ಕೆ. ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!