ಕವಿ ಪತ್ರಕರ್ತ ಜಿ ಎಂ ಕುಲಕರ್ಣಿ ನಿಧನ

ಹಾವೇರಿ : ಕವಿ ಹಾಗೂ ಹಿರಿಯ ಪತ್ರಕರ್ತ ಜಿ.ಎಂ. ಕುಲಕರ್ಣಿ(56) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ಮಧ್ಯಾಹ್ನ ನಿಧನವಾಗಿದ್ದಾರೆ.

ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.

ಜಿ.ಎಂ.ಕುಲಕರ್ಣಿ ಅವರು ಕತ್ತಲಲ್ಲಿ ಕಾಲಿ ತಟ್ಟೆ ಹಿಡಿದವರು ಎಂಬ ಕವನ ಸಂಕಲನ ಬರೆದಿದ್ದರು. ಜೊತೆಗೆ ಸಿಂಚನ ಪ್ರಕಾಶನ ಹೊಂದಿದ್ದರು. ಅಲ್ಲದೇ ಮಾಧ್ಯಮ ಲೋಕದಲ್ಲಿ ಜಿ.ಎಂ. ಕುಲಕರ್ಣಿ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಚಲಿತದಲ್ಲಿತ್ತು.ಪತ್ರಿಕೋಧ್ಯಮ ವೃತ್ತಿಯನ್ನು ಕನ್ನಡಪ್ರಭ ಹಾಗೂ ಉದಯ ಟಿವಿಯಲ್ಲಿ ಕಳೆದರು.

Leave a Reply

Your email address will not be published. Required fields are marked *

error: Content is protected !!