ಟೌನ್ ಹಾಲ್ ಬಳಿ ಅಪಘಾತ ಪತ್ರಕರ್ತ ಶೃಂಷ ಗಂಗಾಧರ ಮೂರ್ತಿ ಸಾವು

 

ಬೆಂಗಳೂರು,ಜ. 23-ವೇಗವಾಗಿ ಬಂದ ಲಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬೈಕ್ ಮೇಲೆ ಬಿದ್ದು ಹಿರಿಯ ಪತ್ರಕರ್ತ ಶೃಂಷ
ಗಂಗಾಧರ ಮೂರ್ತಿ ಮೃತಪಟ್ಟಿರುವ ದುರ್ಘಟನೆ ಜೆಸಿ ರಸ್ತೆಯ ಟೌನ್ ಹಾಲ್ ಮುಂಭಾಗದಲ್ಲಿ ಇಂದು ಸಂಜೆ ನಡೆದಿದೆ.

ವಿಜಯವಾಣಿ ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಶೃಂಷ ಗಂಗಾಧರ ಮೂರ್ತಿ ಅವರು ಬೈಕ್ ನಲ್ಲಿ ಟೌನ್ ಹಾಲ್ ಮುಂಭಾಗದಲ್ಲಿ ಹೋಗುತ್ತಿದ್ದಾಗ ಜೆಸಿ ನಗರ ರಸ್ತೆ ಕಡೆಯಿಂದ ಮಾರುಕಟ್ಟೆ ಕಡೆಗೆ ಬರುತ್ತಿದ್ದ ಕೆಮಿಕಲ್ ಆಯಿಲ್ ತುಂಬಿದ್ದ ಲಾರಿ ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಿದ್ದಿದೆ.

ಅದರಡಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಗಂಗಾಧರ ಮೂರ್ತಿ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕರುನಾಡ ಸಂಜೆ ಪತ್ರಿಕೆಯಿಂದ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದ ಗಂಗಾಧರ ಮೂರ್ತಿ ಸಂಜೆವಾಣಿಯಲ್ಲೂ ಕೆಲ ವರ್ಷಗಳ ಕಾಲ ಕೆಲಸ ಮಾಡಿ‌ ನಂತರ ವಿಜಯವಾಣಿ ಸೇರಿದ್ದರು.

ಘಟನಾ ಸ್ಥಳಕ್ಕೆ ಹಲಸೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!