99 ಮಕ್ಕಳು ಸೇರಿದಂತೆ 468 ಮಂದಿಗೆ ಕೊರೊನಾ ಸೊಂಕು ದೃಡ.! ಪೋರ್ಟಲ್ ಸಮಸ್ಯೆ.! ಕಳೆದೆರೆಡು ದಿನದಲ್ಲಿ ಉಳಿದಿದ್ದ ಕೇಸ್ ಇಂದು ಅಪ್ಲೋಡ್

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಜ. 22 ರಂದು 0 ಇಂದ 5 ವರ್ಷದೊಳಗಿನ 4 ಮಕ್ಕಳು, ಹಾಗೂ 5 ರಿಂದ 18 ವರ್ಷದೊಳಗಿನ 95 ಮಕ್ಕಳು, ಸೇರಿದಂತೆ, 468 ಮಂದಿಗೆ ಕೊರೊನಾ ಸೊಂಕು ಪತ್ತೆಯಾಗಿದೆ.

ಎರಡು ದಿನಗಳಿಂದ ಪೋರ್ಟಲ್ ಸಮಸ್ಯೆಯಿಂದಾಗಿ ಅಪ್ಲೋಡ್ ಮಾಡಲು ಸಾಧ್ಯವಾಗದೆ ಉಳಿದ ಕೇಸ್ ಗಳನ್ನು ಈ ದಿನ ಅಪ್ಲೋಡ್ ಮಾಡಲಾಗಿದೆ, ಆದುದರಿಂದ ಪ್ರಕಾರಣಗಳ ಸಂಖ್ಯೆ ಹೆಚ್ಚಳವಾಗಿದೆ.
ಇಂದು 298 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸಕ್ರಿಯ ಪ್ರಕರಣಗಳು1,603.

ದಾವಣಗೆರೆ 252.ಹರಿಹರ 54, ಜಗಳೂರು ತಾಲೂಕಿನಲ್ಲಿ 44, ಚನ್ನಗಿರಿ ತಾಲ್ಲೂಕಿನಲ್ಲಿ 60, ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 50 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 8 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ 53.416 ಮಂದಿಗೆ ಇಲ್ಲಿವರೆಗೆ ಕೊರೊನಾ ಸೊಂಕು ತಗುಲಿದೆ. 51,204 ಮಂದಿ ಗುಣಮುಖರಾಗಿದ್ದಾರೆ. 609 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!