Sp Video: ದಾವಣಗೆರೆಯಲ್ಲಿ ನಡೆಯಬೇಕಿದ್ದ SDPI ಸಮಾವೇಶ ಮುಂದೂಡಿಕೆ || ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

ದಾವಣಗೆರೆ: ದಾವಣಗೆರೆಯಲ್ಲಿ ನಾಳೆ ಭಾನುವಾರ ಜೂನ್ 12 ರಂದು ನಡೆಯಬೇಕಿದ್ದ ಎಸ್ ಡಿ ಫಿ ಎಫ್ SDPI ಸಮಾವೇಶ ದಾವಣಗೆರೆಯಲ್ಲಿ ಮುಂದೂಡಲಾಗಿದೆ. ಕಾರ್ಯಕ್ರಮದ ಆಯೋಜಕರನ್ನ ಕರೆದು ಅವರ ಮನವೊಲಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಭಾರತದಾದ್ಯಂತ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಪೈಗಂಬರ್ ಬಗ್ಗೆ ಅವಹೇಳನ ಕಾರಿ ಹೇಳಿಕೆ ವಿರುದ್ದ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ , ದಾವಣಗೆರೆಯಲ್ಲಿ ಕೂಡ ಪ್ರತಿಭಟನೆ ನಡೆಯುವ ಸಾಧ್ಯತರ ಇರುವುದರಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಲಾ ಅಂಡ್ ಆರ್ಡರ್ ಕಾಪಾಡುವ ಹಿತದೃಷ್ಟಿಯಿಂದ ಕಾರ್ಯಕ್ರಮ ಮುಂದೂಡಲು ಅವಶ್ಯಕವಾಗಿರುತ್ತದೆ.

ಅದ್ದರಿಂದ ಕಾರ್ಯಕ್ರಮ ಆಯೋಜಕರನ್ನು, ಮುಖಂಡರನ್ನು ದಾವಣಗೆರೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖಂಡರನ್ನು ಮನವೊಲಿಸಿ ಕಾರ್ಯಕ್ರಮವನ್ನ ಮುಂದೂಡುವಂತೆ ಕೇಳಲಾಗಿ ಅವರನ್ನ ಒಪ್ಪಿಸಲಾಗಿದೆ. ನಾಳೆ ಕಾರ್ಯಕ್ರಮಕ್ಕೆ ಬೇರೆ ಕಡೆಯಿಂದ ಬರುವ ಮುಖಂಡರಿಗೆ ಬರದಂತೆ ಹೇಳಲು ತಿಳಿಸಲಾಗಿದೆ. ಮುಂಜಾಗ್ರತೆಗಾಗಿ ಜೂನ್ 11 ರ ಸಂಜೆ 6 ರಿಂದ ಜೂನ್ 12 ರವರೆಗೆ ರಾತ್ರಿ 10 ರವರೆಗೆ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು ಪೋಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ದಾವಣಗೆರೆ ಎಸ್ ಪಿ ಸಿ. ಬಿ. ರಿಷ್ಯಂತ್ ಹೇಳಿದರು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!