ದಾವಣೆಗೆರೆಯಲ್ಲಿ ನಡೆಯಬೇಕಿದ್ದ SDPI ಜನಾಧಿಕಾರ ಸಮಾವೇಶ ಜೂನ್ 26 ಕ್ಕೆ ಮುಂದೂಡಿಕೆ
ದಾವಣಗೆರೆ: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನಾಧಿಕಾರ ಸಮಾವೇಶವನ್ನು ಮುಂದೂಡುವಂತೆ ಜಿಲ್ಲಾಡಳಿತ ಮಾಡಿದ ಮನವಿಗೆ ಸ್ಪಂದಿಸಿದ ಸೋಷಿಯಲ್ ಡೆಮಾಕಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆಯಲ್ಲಿ ಜೂನ್ 12 ರಂದು ಹಮ್ಮಿಕೊಳ್ಳಲಾಗಿದ್ದ ಜನಾಧಿಕಾರ ಸಮಾವೇಶವನ್ನು ಮುಂದೂಡಲಾಗಿದೆ.
ದಾವಣಗೆರೆಯಲ್ಲಿ ನಾಳೆ ಸಂಜೆ 6ರಿಂದ ರಾತ್ರಿ 10ರವರೆಗೆ ನಿಷೇಧಾಜ್ಞೆ ಹೇರಲಾಗಿದ್ದು, ಸಮಾವೇಶವನ್ನು ಮುಂದೂಡುವಂತೆ ದಾವಣಗೆರೆ ಡಿಸಿ ಮಹಾತೇಂಗ್ ಬೀಳಗಿ SDPI ನಾಯಕರಲ್ಲಿ ವಿನಂತಿಸಿದ್ದಾರೆ.
ಪ್ರವಾದಿ ಅವಹೇಳನದ ಕುರಿತು ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಾವೇಶವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಸಮಾವೇಶವನ್ನು ಮುಂದೂಡುವ ತೀರ್ಮಾನಕ್ಕೆ SDPI ಬಂದಿದ್ದು ಇದೇ ಬರುವ ಜೂನ್ 26 ಕ್ಕೆ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಅದ್ದರಿಂದ SDPI ಪಕ್ಷದ ಎಲ್ಲ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು, ಸದಸ್ಯರುಗಳು ಹಾಗು ಬೆಂಬಲಿಗರು ದಯಮಾಡಿ ಸಹಕರಿಸಬೇಕಾಗಿ ಎಸ್ ಡಿ ಪಿ.ಐ ವಿನಂತಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಬ್ಯಾನರ್ ಗಳಿಗೆ ಹಣವನ್ನು ಕಟ್ಟುತ್ತೆವೆ ಅದ್ದರಿಂದ ಬ್ಯಾನರ್ ಗಳನ್ನು ತೆಗೆಯದಂತೆ ಸಂಘಟಕರು ವಿನಂತಿಸಿದ್ದಾರೆ.
garudavoice21@gmail.com 9740365719