Rain; ಮಳೆಗಾಲದ ಹಂಗಾಮಿನ ಬೆಳೆಗೆ ಭದ್ರಾ ನೀರು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಶಾಸಕ ಬಸವರಾಜು ವಿ ಶಿವಗಂಗಾ

ಚನ್ನಗಿರಿ: ಆ.16: ಮಳೆಗಾಲದ (rain) ಹಂಗಾಮಿನ ಬೆಳೆ ಬೆಳೆಯಲು ಭದ್ರಾ ಬಲದಂಡೆ ಕಾಲುವೆಗೆ ಈಗಾಗಲೇ ಆಗಸ್ಟ್ 10 ರಿಂದಲೇ ನೀರು ಹರಿಸಲಾಗಿದೆ. ಭದ್ರಾ ನೀರಿನ ಮಟ್ಟ ಇಂದಿಗೆ 166.9 ಅಡಿ ಇದ್ದು, 170 ಅಡಿಗೆ ನೀರು ತಲುಪಿದರೆ ರೈತರಿಗೆ ಸಂಪೂರ್ಣವಾಗಿ ನೀರು ಹರಿಸಲು ಸಮಸ್ಯೆ ಆಗುವುದಿಲ್ಲ. ಪ್ರಸ್ತುತ ಜಲಾಶಯದಲ್ಲಿರುವ ನೀರು ರೈತರು ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಇಲ್ಲ ಎಂದು ಪಟ್ಟಣದಲ್ಲಿ ಶಾಸಕ ಬಸವರಾಜು ವಿ ಶಿವಗಂಗಾ ತಿಳಿಸಿದರು.

ಈ ಕುರಿತಂತೆ ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ, ಸರ್ಕಾರದ ಮುಂದೆ ಕಾಲುವೆಗಳಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಕುರಿತು ಯಾವುದೇ ಪ್ರಸ್ತಾಪ ಬಂದಿಲ್ಲ ಎನ್ನಲಾಗಿದೆ. ರೈತರು ಯಾವುದೇ ಆತಂಕಪಡಬೇಕಾಗಿಲ್ಲ, ರೈತರಿಗೆ ತೊಂದರೆಯಾಗಲು ನಾನು ಬಿಡುವುದಿಲ್ಲ ಎಂದು ತಿಳಿಸಿದರು.

ಭದ್ರಾ ಜಲಾಶಯಕ್ಕೆ 170 ಅಡಿ ನೀರು ಸಂಗ್ರಹವಾದರೆ ಸಾಕು ರೈತರಿಗೆ 100 ದಿನಗಳಿಗೂ ಹೆಚ್ಚು ನೀರು ಹರಿಸಬಹುದು. ಮಲೆನಾಡು ಭಾಗದಲ್ಲಿ ಸ್ವಲ್ಪ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ಜಲಾಶಯಕ್ಕೆ ಒಳಹರಿವು ಸ್ವಲ್ಪ ಕಡಿಮೆಯಾಗಿದೆ ಆದರೂ ಸಹ ರೈತರ ಜಮೀನುಗಳಿಗೆ ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಈ ಕಾರಣ ರೈತರನ್ನ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಇಂಥ ಮಾಹಿತಿಗಳಿಗೆ ಯಾರು ಸಹ ಕಿವಿಗೊಡಬಾರದು, ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತ ಬೆಳೆದ ರೈತರು ಈ ಬಗ್ಗೆ ಚಿಂತಿಸಬೇಡಿ, ಬೆಳೆ ಬೆಳೆಯಲು ನೀರು ಹರಿಸಲಾಗುತ್ತದೆ. ಈಗಾಗಲೇ ಆಗಸ್ಟ್ 10 ರಿಂದಲೇ ಭದ್ರಾ ಕಾಲುವೆಗೆ ನೀರನ್ನ ಹರಿ ಬಿಡಲಾಗಿದೆ, ನಿಗದಿಯಂತೆ ರೈತರ ಬೆಳೆಗಳಿಗೆ ನೀರು ಬರುತ್ತದೆ, ನಿಮ್ಮ ಪರವಾಗಿ ನಾನು ಇದ್ದೇನೆ ಎಂದು ರೈತರಿಗೆ ತಿಳಿಸಿದರು.

**

ಈಗಾಗಲೇ ನೀರಾವರಿ ಇಲಾಖೆ ಇಂಜಿನಿಯರ್ ಗಳ ಜೊತೆ ಮಾತನಾಡಿದ್ದೇನೆ. ನೀರು ನಿಲ್ಲಿಸುವ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದಿದ್ದಾರೆ. ಆಗಸ್ಟ್ 10 ರಿಂದಲೇ ಭದ್ರಾ ಬಲದಂಡೆ ಕಾಲುವೆಗಳಿಗೆ ನೀರು ಹರಿಸಲಾಗಿದೆ, ರೈತರು ಯಾವುದೇ ಆತಂಕಪಡಬೇಕಿಲ್ಲ ನಿಮ್ಮ ಪರವಾಗಿ ನಾನಿದ್ದೇನೆ.

– ಬಸವರಾಜು ವಿ ಶಿವಗಂಗಾ, ಚನ್ನಗಿರಿ, ಶಾಸಕರು

Leave a Reply

Your email address will not be published. Required fields are marked *

error: Content is protected !!