ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾಷಣ ಸ್ಪರ್ಧೆ, ಚಿಕ್ಕಿ ರಂಗೋಲಿ ಸ್ಪರ್ಧೆ ಮತ್ತು ಚಿಕ್ಕ ಮಕ್ಕಳ ವೇಷಭೂಷಣ ಸ್ಪರ್ಧೆ
ದಾವಣಗೆರೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು ಭಾಷಣ ಸ್ಪರ್ಧೆ ಚಿಕ್ಕಿ ರಂಗೋಲಿ ಸ್ಪರ್ಧೆ ಮತ್ತು ಚಿಕ್ಕ ಮಕ್ಕಳ ವೇಷಭೂಷಣ ಸ್ಪರ್ಧೆಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಧ್ಯಕ್ಷತೆಯನ್ನ ಡಾ. ರವಿಕುಮಾರ್ ಎ.ಜೆ .ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ವಾಮದೇವಪ್ಪ ಜಿಲ್ಲಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕಲೆ ಭಾಷೆ ಹುಟ್ಟಿನಿಂದಲೇ ನೀಡಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.ತಂದೆ ತಾಯಿಗಳು ಸಂಸ್ಕೃತಿ ಬಗ್ಗೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಯನ್ನ ಡಾ. ಧನಂಜಯ್ ಮೂರ್ತಿ ಮಾತನಾಡಿದರು ಡಾ. ಪುಷ್ಪಲತಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡುತ್ತಾ ಮಕ್ಕಳಲ್ಲಿ ಶಿಸ್ತು ಸಂಯಮವನ್ನು ಬೆಳಸಬೇಕು ಎಂದು ಪೋಷಕರಿಗೆ ತಿಳಿಸಿದರು ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಲಯ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು .ಡಿಸಿಸಿ ಬ್ಯಾಂಕಿನ ಷಣ್ಮುಖಪ್ಪ ಜೆ ಆರ್ ಅವರು ಮಾತನಾಡುತ್ತಾ ಒಳ್ಳೆಯ ನಡಿ ನುಡಿ ಕಲಿಯಬೇಕು ಅದಕ್ಕೆ ತಕ್ಕನಾಗಿ ಪೋಷಕರು ಮತ್ತು ಶಿಕ್ಷಕರು ಸಹ ತಿದ್ದಿ ಮಕ್ಕಳಿಗೆ ಒಳ್ಳೆಯ ಬುದ್ಧಿಯನ್ನು ಹೇಳಿಕೊಡಬೇಕು ಎಂದು ಹೇಳಿದರು.
ಶ್ರೀಮತಿ ಜಯಲಕ್ಷ್ಮಿ ಮಹೇಶ್ ಮತ್ತು ಹೆಚ್. ಕೆ. ಕಲ್ಲಪ್ಪ ಮಾತನಾಡಿದರು ಡಾ. ರವಿಕುಮಾರ್ ಎಜೆ ಮಾತನಾಡುತ್ತಾ ಸಾಹಿತ್ಯ ಸಂಸ್ಕೃತಿ ಕಲೆ ಕನ್ನಡಪರ ಹೋರಾಟ ಮಕ್ಕಳ ಸಾಹಿತ್ಯ ಪರಿಷತ್ ಮುಂದೆ ಇರುತ್ತದೆ ಹಾಗೂ ಮಕ್ಕಳಲ್ಲಿನ ಪ್ರತಿಭೆಯನ್ನ ಹೊರ ತರುವ ಕೆಲಸವನ್ನು ನಾವು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ಕಾರ್ಯಕ್ರಮವನ್ನು ಮಾಡುತ್ತೇವೆ ಇದಕ್ಕೆ ಪೋಷಕರು ಮತ್ತು ಶಾಲೆಯ ಶಿಕ್ಷಕರುಗಳು ಸಹಕಾರ ನೀಡಿದರೆ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ ಎಂದು ತಿಳಿಸಿದರು ಶ್ರೀಮತಿ ಶುಭ ಐನಹಳ್ಳಿ ನಿರೂಪಣೆಯನ್ನು ಶ್ರೀಮತಿ ದೀಪ ಮತ್ತು ಶ್ರೀಮತಿ ರೇಖಾ ವಂದನಾರ್ಪಣೆಯನ್ನು ಕುಮಾರ್ ಮಾಡಿದರು ಪರಿಷತ್ತಿನ ಪದಾಧಿಕಾರಿಗಳಾದ ಶ್ರೀ ಸುರೇಶ್ ಚೌಹಾನ್,ಎಸ್ .ಕೆ. ಬೀರಪ್ಪ , ಶ್ರೀ ಎಂ ಆರ್ ಹರೀಶ್ ಕಾರ್ಯಕ್ರಮದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಶ್ರೀ ತೆಲಗಿ ವೀರಭದ್ರಪ್ಪನವರು ನೆರವೇರಿಸಿದರು.