SS Mallikarjun; ನನ್ನ ಹೇಳಿಕೆಯನ್ನು ತಿರುಚಬೇಡಿ, ಹೊಲಸು ಮಾಡಬೇಡಿ ಎಂದಿದ್ದೇನೆ ಅಷ್ಟೆ.! ವೈರಲ್ ಮಾಡಿದವರ ವಿರುದ್ದ ದೂರು

ದಾವಣಗೆರೆ : ಊರನ್ನು ಹೊಲಗೇರೆ ಮಾಡಬೇಡಿ ಎಂಬ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ (SS Mallikarjun) ಎಸ್ ಎಸ್ ಮಲ್ಲಿಕಾರ್ಜುನ್, ನನ್ನ ಹೇಳಿಕೆಯನ್ನು ತಿರುಚಬೇಡಿ, ನಾನು ಹೇಳಿದ್ದು ಹೊಲಸು ಮಾಡಬೇಡಿ ಎಂದಿದ್ದೇನೆ ಅಷ್ಟೆ ಎಂದು ಸಚಿವ ಎಸ್.ಎಸ್.ಎಂ ಹೇಳಿದರು.ಉಪೇಂದ್ರ ಪ್ರಕರಣ ನನಗೆ ಗೊತ್ತಿಲ್ಲ, ನಾನು ಆ ರೀತಿಯಾಗಿ ಹೇಳಿಲ್ಲ, ನನಗೇನು ಗೊತ್ತಿಲ್ಲ, ಹೊಲಸು ಮಾಡಬೇಡಿ ಎಂದಿದ್ದೇನೆ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಬಳಸಿದ್ದ ಹೊಲಿಗೇರಿ ಎಂಬ ವಿವಾದಾತ್ಮಕ ಪದ ಹೇಳಿಕೆ ಜೊತೆ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಕ್ಷೇಪಾರ್ಯ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದ್ದರ ಹಿನ್ನೆಲೆ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದರು. ಹೊಲಗೆರಿ ಪದ ಈಗ ರಾಜಕೀಯ ತಿರುವ ಪಡೆದಿದ್ದು, ನಟ ಉಪೇಂದ್ರ ಹೊಲಿಗೆರೆ ಪದ ಪ್ರಯೋಗಿಸಿದ್ದರಿಂದ ಉಪೇಂದ್ರ ವಿರುದ್ದ ಎಫ್ ಐ ಆರ್ ದಾಖಲಾಗಿತ್ತು.

ಈ ವಿಡಿಯೋ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಚುನಾವಣಾ ಪೂರ್ವ ಮಾತನಾಡಿರುವ ವಿಡಿಯೋ ಆಗಿದ್ದು, ಉಪೇಂದ್ರ ಟ್ವೀಟ್ ಮಾಡಿದ ಬಳಿಕ ಈಗ ಎಸ್‌ಎಸ್‌ಎಂ ಬಳಸಿರುವ ಪದ ಎಲ್ಲರ ಮೊಬೈಲ್‌ನಲ್ಲಿ ಹರಿದಾಡುತ್ತಿದೆ.

ಉತ್ತಮ ಪ್ರಜಾಕೀಯ ಪಕ್ಷ ದಾವಣಗೆರೆ ಫೆಸ್ ಬುಕ್ ಪೇಜ್ ನಿಂದ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಿಂದ ಯಾರ ಭಾವನೆಗೂ ದಕ್ಕೆ ಆಗಿಲ್ಲ ಅಲ್ವಾ..!? ತಾಕತ್ತು, ದಮ್ಮು ಇದ್ದವರು ಇವರ ಮೇಲೆ ಕೇಸ್ ಹಾಕೊಳ್ಳಿ ಎಂದು ಸಚಿವ ಪ್ರಿಯಾಂಕ ಖರ್ಗೆಗೆ ಟ್ಯಾಗ್ ಮಾಡಲಾಗಿದೆ. ಉಪೇಂದ್ರ ಪ್ರಕರಣದಲ್ಲಿ ಉಪೇಂದ್ರ ಅವರ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಕಾರಿದ್ದರು. ಈ ಹಿನ್ನಲೆ ಪ್ರಿಯಾಂಕ್ ಖರ್ಗೆ ಅವರಿಗೆ ಎಸ್ ಎಸ್ ಮಲ್ಲಿಕಾರ್ಜುನ್ ಅವರ ವಿಡಿಯೋ ಹಾಕಿ ಟ್ಯಾಗ್ ಮಾಡಿ ಉತ್ತರಿಸಿ ಎಂದು ಪ್ರಜಾಕೀಯ ಪಕ್ಷ ಪಟ್ಟು ಹಿಡಿದಿದೆ.

ಸಚಿವರ ವಿಡಿಯೋ ರಿಲೀಸ್ ಆದಾಗ ಅಂತಹದ್ದೇನು ವಿವಾದ ಕೇಳಿ ಬಂದಿರಲಿಲ್ಲ, ನಟ ಉಪೇಂದ್ರ ಪ್ರಕರಣ ಭಾರೀ ಸದ್ದು ಮಾಡಿದ ಬಳಿಕ ಈಗ ಈ ಹಳೇ ವಿಡಿಯೋ ಸಖತ್ ವೈರಲ್ ಆಗಿದೆ. ಕಳೆದ ವಿಧಾನಸಭೆ ಚುನಾವಣೆ ಮುನ್ನ ಅಂದರೆ ಮೇ ತಿಂಗಳಿನಲ್ಲಿ ಸಂದರ್ಶನ ಮಾಡಲಾಗಿತ್ತು. ಸಚಿವರ ಪತ್ನಿ ಡಾ, ಪ್ರಭಾ ಮಲ್ಲಿಕಾರ್ಜುನ್ ಎಸ್ ಎಸ್ ಮಲ್ಲಿಕಾರ್ಜುನ ಸಂದರ್ಶನ ನಡೆಸಿದ್ದರು.

ಅಶೋಕ ಥಿಯೇಟರ್ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನೂ ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಸಂಸದ ಸಿದ್ದೇಶ್ವರ್ ಗೆ ಕೇಳಬೇಕು. ಅಂಡರ್ ಪಾಸ್ ಗೆ ಎರಡು ಸರಿ ತಿರುಗಿ ಹೋಗಬೇಕು. ತಿರುವಿನಲ್ಲಿ ಜಾಸ್ತಿ ಜಾಗ ಬಿಡಬೇಕಿತ್ತು, ಇದೇ ರೀತಿ ಎಲ್ಲಾ ಕಡೇ ಹಾಳು ಮಾಡಿದ್ದಾರೆ, ಡಿಸಿಎಂ ಬಳಿಯ ಬ್ರಿಡ್ಜ್ ಹಾಳು, ಆಗ ಕೇಂದ್ರದವರಿಗೆ ಕರೆದು ಬೈದಿದ್ದೆ, ನಿಮ್ಮ ಮನೆಯಿಂದ ಹಣ ಕೊಡುವುದಿಲ್ಲ, ಪ್ಲಾನಿಂಗ್ ಮಾಡುವುದಾದರೆ ಸರಿಯಾಗಿ ಮಾಡಿ, ಊರನ್ನು ಹೊಲಗೇರಿ ಮಾಡಬೇಡಿ, ಸ್ವಚ್ಚವಾಗಿಡಿ,  ಬ್ರಿಡ್ಜ್‌ದ ಹಾವು ಹೋದಂತೆ ಆಗಿತ್ತು, ರಾಷ್ಟ್ರೀಯ ಹೆದ್ದಾರಿ ಬಳಿ ಬ್ರಿಡ್ಜ್‌ಗಳನ್ನು ಹಾಳು ಮಾಡಿದ್ದಾರೆ, ಕಾರು ತೆಗೆದುಕೊಂಡು ಹೋದರೆ ಕೆಳಗೆ ಇಳಿದು ನೋಡಿಕೊಂಡು ಬಳಿಕ ಹೋಗಬೇಕು ಎಂದು ಸಂದರ್ಶನದ ವೇಳೆ ಎಸ್ ಎಸ್ ಮಲ್ಲಿಕಾರ್ಜುನ ಹೇಳಿದ್ದರು.

ಇದನ್ನೂ ಓದಿ :- ನಮ್ಮ ದುರದೃಷ್ಟ ಐದು ವರ್ಷಗಳ ಕಾಲ ದಾವಣಗೆರೆ ಜಿಲ್ಲೆಯವರು ಧ್ವಜಾರೋಹಣ ಮಾಡಿರಲಿಲ್ಲ – ಎಸ್ ಎಸ್ ಮಲ್ಲಿಕಾರ್ಜುನ

ಸದ್ಯ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ. ಒಟ್ಟಾರೆ ಉಪೇಂದ್ರ ಅಭಿಮಾನಿಗಳು ತಾಕತ್ತು ದಮ್ಮು ಇದ್ದರೆ ಇವರ ಮೇಲೆ ಕೇಸ್ ಹಾಕೊಳ್ಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಸಚಿವರ ವಿಡಿಯೋ ವೈರಲ್ ಆದ ಬಳಿಕ ಕಾಂಗ್ರೆಸ್ ಕಾರ್ಯಕರ್ತ‌ ಬಾಬು ಎನ್ನುವವರು ದಾವಣಗೆರೆಯ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ವಿಡಿಯೋ ತಿರುಚಿ ವೈರಲ್ ಮಾಡಲಾಗಿದೆ, ಸಚಿವರನ್ನ ತೇಜೋವದೆ ಮಾಡಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!