ಭಾರತೀಯ ರೈತ ಒಕ್ಕೂಟದಿಂದ ವಿವಿಧ ಬೇಡಿಕೆ ಆಗ್ರಹಿಸಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ

ದಾವಣಗೆರೆ: ಭದ್ರಾದಿಂದ ವಾಣಿ ವಿಲಾಸಕ್ಕೆ ನೀರು ಹರಿಸುವುದನ್ನು ನಿಲ್ಲಿಸುವುದು, ಭದ್ರಾ ಮೇಲ್ದಂಡೆ ಮತ್ತು ಎತ್ತಿನ ಹಳ್ಳ ಯೋಜನೆಗಳ ಪರಿಷ್ಕರಣ ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಜಿಲ್ಲಾ ಘಟಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ನಗರಕ್ಕಾಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಘಟಕದ ಮುಖಂಡರು ಮನವಿ ಪತ್ರ ಸಲ್ಲಿಸಿದರು. ನೀರಿಗಾಗಿ ಭದ್ರಾ ಮೇಲ್ದಂಡೆ ಯೋಜನೆ ಚರ್ಚೆಯಲ್ಲಿ ಹಾಲಿ ಭದ್ರಾ ಅಚ್ಚುಕಟ್ಟು ಬಾಗಿದಾರರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಅಂದಿನ ಅಧಿಕಾರಿಗಳ ನೇತೃತ್ವದಲ್ಲಿ ಚರ್ಚೆ ನಡೆದು ಅಂತಿಮವಾಗಿ ತೀರ್ಮಾನಿಸಿದ ಯಾವುದೇ ಷರತ್ತುಗಳು ಪಾಲನೆಯಾಗಿಲ್ಲ. ಅಣೆಕಟ್ಟಿನ ತುಂಗಾಭದ್ರದಿಂದ ನೀರನ್ನು ಎತ್ತಿ ಭದ್ರಕ್ಕೆ ಹರಿಸಿ ಭದ್ರದಲ್ಲಿ ಸಿಕ್ಕುವ 6 ಟಿ.ಎಂ.ಸಿ. ಜೊತೆಗೆ ಸೇರಿಸಿ 180 ಅಡಿ ಮೇಲೆ ತೂಬಿನಿಂದ ಕಾಲುವೆಗೆ ಹರಿಸಲು ತೀರ್ಮಾನಿಸಿತ್ತು , ಇದೇನೂ ಆಗಿಲ್ಲ. ಬದಲಾಗಿ 2 ವರ್ಷಗಳಿಂದ ಭದ್ರ ಅಣಿಕಟ್ಟಿನಿಂದಲೇ ನೀರನ್ನು 700 ಕ್ಯೂಸೆಕ್ ಹರಿಸಲಾಗುತ್ತಿದೆ . ಅಣಿಕಟ್ಟು ತುಂಬಿದಾಗ ನಮ್ಮ ಅಭ್ಯಂತರವಿಲ್ಲ. 1 ಟಿಎಂಸಿ ನೀರು ಅಣೆಕಟ್ಟಿನಿಂದ ವಾಣಿ ವಿಲಾಸಕ್ಕೆ ಹರಿಸಲಾಗಿದೆ . ಇನ್ನೂ ಮುಂದೆ ಹರಿಸಿದರೆ ನಮಗೆ ತೊಂದರೆಯಾಗುತ್ತದೆ. ಭದ್ರಾದಿಂದ ವಾಣಿ ವಿಲಾಸಕ್ಕೆ ನೀರು ಹರಿಸುವುದನ್ನು ನಿಲ್ಲಿಸಿ ಮುಂದೆ ಆಗಬಹುದಾದ ಘರ್ಷಣೆಯನ್ನು ತಪ್ಪಿಸುವಂತೆ ಒತ್ತಾಯಿಸಿದರು.
ತುಂಗಾದಿಂದ ಎತ್ತುವ ಮತ್ತು ಭದ್ರ ದಿಂದ ಎತ್ತುವ ನೀರನ್ನು ಸುರಂಗಗಳು , ಪಂಪ್‌ಗಳು , ಭೂಸ್ವಾಧೀನ ಎಲ್ಲಾವನ್ನು ತಪ್ಪಿಸಲು ತುಂಗಾದಿಂದ ಎತ್ತುವ ನೀರುನ್ನು ಮತ್ತು ಭದ್ರಾ ದ ಹೆಚ್ಚುವರಿ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಬೇಕು, ಎತ್ತಿನಹಳ್ಳ ನೀರು ಕೇವಲ 50 ಕಿ.ಮೀ. ಕಾಲುವೆ ಮೂಲಕ ಹರಿಸಿ ಕಡೂರಿನ ಪಕ್ಕದಲ್ಲಿರುವ ವೇದಾವತಿ ಉಪ ಹಳ್ಳಕ್ಕೆ ಹರಿಸಿದರೆ ಅದು ಕೂಡ ವಾಣಿ ವಿಲಾಸಕ್ಕೆ ಸೇರುತ್ತದೆ ಅಪಾರ ಪ್ರಮಾಣದ ಹಣ ಉಳಿಯುತ್ತದೆ ಎಂದರು.
ಬೆಂಬಲ ಬೆಲೆ ಖರೀದಿ ಬಗ್ಗೆ ಈಗಿನ ಪ್ರತಿ ರೈತನಿಂದ ಪಡೆಯುವ ಧಾನ್ಯದ ಹಾಸ್ಯ ಕಾರಕ ಮಿತಿಯನ್ನು ಕೂಡಲೇ ರದ್ದುಗೊಳಿಸಬೇಕು, ಭಾರತ ಆಹಾರ ನಿಗಮವನ್ನು ಕರ್ನಾಟಕದಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಲ್ ಭತ್ತಕ್ಕೆ ಛತ್ತೀಸ್‌ಘಡ ಮಾದರಿಯಲ್ಲಿ ಕನಿಷ್ಠ 2,250 ಬೋನಸ್ ಘೋಷಿಸಿ ಬೆಂಬಲ ಬೆಲೆಗೆ ಸೇರಿಸಬೇಕು, ಕನಿಷ್ಠ 10 ಲಕ್ಷ ಟನ್ ಭತ್ತ ಕರ್ನಾಟಕದಿಂದ ಖರೀದಿಸಿಲು ಭಾರತ ಆಹಾರ ನಿಯಮಕ್ಕೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.
ಭದ್ರಾ ಡ್ಯಾಂ ನಲ್ಲಿ ಕ್ರೆಸ್ಟ್ ಗೇಟ್‌ಗಳಿಂದ ನೀರು ನದಿಗೆ ಧುಮುಕುವ ಗೇಟ್‌ಗಳಿಂದ ಕೆಳಭಗಾದಲ್ಲಿ 2 ವರ್ಷಹದಿಂದ ಮಾಡಿದ ಸ್ಟಿಲಿಂಗ್ ಬೇಸಿನ್ 2018 ರಲ್ಲಿ ವಿಶ್ವ ಬ್ಯಾಂಕಿನ ಹಣದಿಂದ 7 ಕೋಟಿ ಮಂಜೂರು ಮಾಡಿಸಿ ಕಾಮಗಾರಿ ಮಾಡಿದ ಸ್ಟಿಲ್ಲಿಂಗ್ ಬೇಸಿನ್ ಮಾಡಿದ ಕೆಲವೇ ಗಂಟೆಗಳಲ್ಲಿ ನೀರಿಗೆ ಕೊಚ್ಚಿ ಹೋಗಿದೆ . ಇದುವರೆಗೂ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ . ಇದನ್ನು ನೋಡಿದರೆ ಭಾರೀ ಭ್ರಷ್ಟಾಚಾರವಾಗಿದೆ . ಆದ್ದರಿಂದ ತನಿಕೆ ಮಾಡಿ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ರೈತರಿಗೆ ನ್ಯಾಯ ದೊರಕಿಸಬೇಕೆಂದು ವಿನಂತಿಸಿದರು.
2006-07 ರಲ್ಲಿ ನಾಲೆಗಳ ಆಧುನೀಕರಣ ಮಾಡಿದೆ . ಇದುವರೆಗೂ ನಾಲೆಯ ಊಳನ್ನು ತೆಗೆಸಿಲ್ಲ . ಆಧುನೀಕರಣದ ಕೆಲ ಭಾಗ ದುರಸ್ಥಿಯಾಗಿದೆ . ಇದುವರೆಗೂ ಸರಿಪಡಿಸಿಲ್ಲ . ಮುಖ್ಯ ನಾಲೆಗಳಲ್ಲಿ ಗೇಟ್‌ಗಳನ್ನು ರಿಪೇರಿ ಮಾಡಿಲ್ಲ . ಕೊನೆ ಭಾಗದ 30 ಸಾವಿರಗಳ ಜಮೀನಿಗೆ ನೀರಿಲ್ಲದೆ ವಂಚಿತವಾಗಿದೆ . ನಾಲೆಗಳ ಪಕ್ಕದಲ್ಲಿರುವ ರಸ್ತೆಗಳನ್ನು ಮೆಟ್ಟಿಂಗ್ ಮಾಡಿ ಟಾರ್ ರಸ್ತೆಗಳನ್ನು ಮಾಡುವುದು ಹಾಗೂ ನ್ಯಾಯಾಲಯದ ಆದೇಶವಿದ್ದರೂ ಸಹ ಅಕ್ರಮವಾಗಿ ಅಳವಡಿಸಿರುವ ಪಂಪ್ ಸೆಟ್‌ಗಳನ್ನು ತೆರವುಗೊಳಿಸಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು, ಅಪರ್ ಭದ್ರಾ ಸ್ಟೀಮ್‌ನಲ್ಲಿ ತುಂಗಾದಿಂದ ಭದ್ರೆಗೆ ನೀರನ್ನು ಎತ್ತಿ ನೀರನ್ನು ಹರಿಸಬೇಕು . ಭದ್ರಾದಿಂದ ನೀರನ್ನು ಕೊಟ್ಟರೆ ಭದ್ರಾ ರೈತರು ವಂಚಿತರಾಗುತ್ತಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.