“ನಿಸರ್ಗದ ನೇಗಿಲು”, ಕೋಟ್ಯಾಂತರ ಸುರಂಗಗಳ ರೂಪಿಸುವ ಈ ವ್ಯೆಯ್ಯಾರಿ

ದಾವಣಗೆರೆ: ಇವಳಲ್ಲಿನ ಅಪಾರ ಶಕ್ತಿ ಸಾಮರ್ಥ್ಯಗಳ ಕುರಿತು ನಮ್ಮಲ್ಲಿ ಲವಲೇಶದ ಜ್ಞಾನವೂ ಇಲ್ಲ. ಉದಾಹರಣೆಗೆ, ಇರುವೆಗಳು ಗಾತ್ರದಲ್ಲಿ ಚಿಕ್ಕದಾದರೂ, ಅವು ಬಲಿಷ್ಟ ಜೀವಿಗಳು ಎಂದೇ ನಮ್ಮಲ್ಲನೇಕರು ಭಾವಿಸಿದ್ದೇವೆ.

ಆದರೆ ಇರುವೆಗಳಿಗೇ ಸಡ್ಡು ಹೊಡೆವಷ್ಟು ಬಲಿಷ್ಟತೆ ಇವಳಿಗಿದೆ. ತನ್ನ ತೂಕದ ಆರವತ್ತು ಪಟ್ಟು ಹೆಚ್ಚು ಭಾರದ ಕಲ್ಲುಗಳನ್ನು ಇವಳು ನಿರಾಯಾಸವಾಗಿ ನೂಕಬಲ್ಲಳು.

ಅಂದರೆ 50 ಕೆ.ಜಿ. ತೂಕದ ವ್ಯಕ್ತಿಯೊಬ್ಬ 600 ಕೆ.ಜಿ. ತೂಕದ ಕಲ್ಲುಬಂಡೆಯೊಂದನ್ನು ಸುಲಭವಾಗಿ ನೂಕಿದಂತೆ.

ಇವಳಾರು ? ಎಂದಿರಾ. ಇವಳು ಎರೆಹುಳು – ಮಣ್ಣು ಸಾಮ್ರಾಜ್ಯದ ಮಹಾರಾಣಿ.

ಬೆರಗು ಮೂಡಿಸುವ ಬೆಡಗಿನರಸಿ – ಮಣ್ಣಲ್ಲಿ ತಾಕತ್ತು ತುಂಬುವ ಸೊಬಗಿನ ರಾಣಿ – ಸುಲಭಕ್ಕೆ ಕಣ್ಣಿಗೆ ಬೀಳದ ಮಾಯಾಂಗನೆ. – ನಿರಂತರ ಮಣ್ಣಲ್ಲಿ ಮೇಲಿನಿಂದ ಕೆಳಗೆ – ಕೆಳಗಿನಿಂದ ಮೇಲೆ ಸಂಚರಿಸುತ್ತಾ ಕೋಟ್ಯಾಂತರ ಸುರಂಗಗಳ ರೂಪಿಸುವ ವ್ಯೆಯ್ಯಾರಿ.

ಇವಳು ಹಾವಿನಂತೆ ಅಕ್ಕ ಪಕ್ಕ zigzag ರೀತಿಯಲ್ಲಿ ತೆವಳುತ್ತಾ ಸಾಗುವುದಿಲ್ಲ, ಬದಲಿಗೆ ನೇರವಾಗಿ ಮಣ್ಣಲ್ಲಿಯೇ ಮುನ್ನುಗ್ಗುತ್ತಾಳೆ. ಇದರಿಂದಾಗಿಯೇ “ನಿಸರ್ಗದ ನೇಗಿಲು” ಎಂಬ ಬಿರುದು ಪಡೆದವಳು.

ಒಟ್ಟಾರೆ ಮಣ್ಣು ಸುಧಾರಕಿ – ಮಣ್ಣು ವಿಶ್ಲೇಷಕಿ.

ಇಂದಿಗೂ ಮಣ್ಣಿನ ಫಲವತ್ತತೆ ಗುರುತಿಸುವಾಗ, ಮಣ್ಣಲ್ಲಿ ಇವಳ ಇರುವಿಕೆಯ ಪ್ರಮಾಣವನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ.

ಇವಳ ಇತಿಹಾಸ, ಕುಲ-ಸಂಕುಲಗಳು, ಹುಟ್ಟು – ಬೆಳವಣಿಗೆ, ಪಾತ್ರ – ಜವಾಬ್ದಾರಿ – ಸೇವೆ – ಮಹಿಮೆ, ಮಣ್ಣು ಮತ್ತು ಮಾನವ ಸಮುದಾಯಕ್ಕೆ ಇವಳ ಕೊಡುಗೆಗಳ ಕುರಿತಂತೆ ಆಳವಾಗಿ ಗಮನಿಸಿದಷ್ಟೂ ರೋಚಕ ಸಂಗತಿಗಳು ಬಯಲಾಗುತ್ತವೆ.

ಮಣ್ನನ್ನು ಉಳುಮೆ ಮಾಡದಿದ್ದರೆ, ಸೂರ್ಯನ ನೇರಬಿಸಿಲಿಗೆ ಒಡ್ಡದಿದ್ದರೆ, ಇವಳ ವಿಶಿಷ್ಟ ಶಕ್ತಿ ಸಾಮರ್ಥ್ಯಗಳ ಅರಿವಾಗುತ್ತದೆ.

ಇವಳ ಹಿಕ್ಕೆ ಮಣ್ಣಲ್ಲಿ ಬೆರೆತಾಗ, ಆಗುವುದು
– ಮಣ್ಣಿನ ಆರೋಗ್ಯ ಸುಧಾರಣೆ
– ಇವಳು ಮಣ್ಣಲ್ಲಿ ನಿರ್ಮಿಸುವ ಸುರಂಗಗಳ ಮೂಲಕ ಗಾಳಿಯಾಡುವಿಕೆ
– ಈ ಸುರಂಗ ರಂಧ್ರಗಳ ಮೂಲಕ ಮಳೆ ನೀರು ಮಣ್ಣೊಳಗಿಳಿಯುತ್ತದೆ
– ಗಿಡದ ಬೇರುಗಳ ಮೂಲಕ ಗಿಡದ ಬೆಳವಣಿಗೆಗೆ ಬೇಕಾದ ಪೋಷಕಾಂಶ ಪೂರೈಕೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!