raksha bandhan; ಸಹೋದರ ಸಹೋದರಿಯರ ಪವಿತ್ರ ಬಂಧವೇ ಈ ರಕ್ಷಾ ಬಂಧನ

ಒಡಹುಟ್ಟಿದವರೊಂದಿಗಿನ ಅರ್ಥಪೂರ್ಣ ಬಂಧವನು ವಾರ್ಷಿಕವಾಗಿ ಆಚರಿಸಲು ಇರುವ ಹಬ್ಬವೇ ರಕ್ಷಾಬಂಧನ ಅಥವಾ ರಾಖಿ ಹಬ್ಬ ಸಾಂಪ್ರದಾಯಿಕವಾಗಿ ಸಹೋದರಿಯರು ತಮ್ಮ ಸಹೋದರರ ಕೈಗೆ ರಕ್ಷಾಬಂಧನ ದಿನದಂದು ರಾಕಿ ಕಟ್ಟುತ್ತಾರೆ. ಈ ರಕ್ಷಾಬಂಧನ (raksha bandhan) ಕಟ್ಟುವಾಗ ಸಹೋದರಿ ಸಹೋದರನಿಗೆ ಆರತಿ ಮಾಡಿ ರಾಕಿ ಕಟ್ಟುತ್ತಾಳೆ.

ರಾಕಿ ಕಟ್ಟುವಾಗ ಪೂಜೆ ತಟ್ಟೆಯಲ್ಲಿ ಅಕ್ಷತೆ ಕುಂಕುಮ ಶ್ರೀಗಂಧ ಸಿಹಿ ಆರತಿ ಇದ್ದು ಸಹೋದರನಿಗೆ ಆರತಿ ಮಾಡಿ ತಲೆಗೆ ಅಕ್ಷತೆ ಹಾಕಿ ಹಣೆಗೆ ಕುಂಕುಮ ಮತ್ತು ಗಂಧ ಇಟ್ಟು ಸಿಹಿ ತಿನಿಸುತ್ತಾರೆ ನಂತರ ಸಹೋದರನ ಆಶೀರ್ವಾದವನ್ನು ಪಡೆಯುತ್ತಾರೆ ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ ಸಹೋದರನ ಸಂತೋಷ ಆರೋಗ್ಯ ಆಯಸ್ಸಿಗಾಗಿ ಸಹೋದರಿ ಬಯಸಿದರೆ ತಮ್ಮ ಸಹೋದರಿಯರನ್ನು ಸದಾ ಕಾಲ ರಕ್ಷಿಸಲು ಮತ್ತು ಪ್ರೀತಿಸಲು ಸಹೋದರ ಭರವಸೆ ನೀಡುತ್ತಾನೆ. ಸಹೋದರಿಯ ಶ್ರೀರಕ್ಷೆ ಸಹೋದರನ ಕರ್ತವ್ಯವಾಗಿದೆ.

ಹಾಗೆಯೇ ಸಹೋದರಿಗೆ ಸಹೋದರ ಉಡುಗೊರೆಯನ್ನು ನೀಡುತ್ತಾನೆ ರಕ್ಷಾ ಬಂಧನವು ಒಡಹುಟ್ಟಿದವರಿಗೆ ತಮ್ಮ ಭಾವನೆಗಳನ್ನು ಮತ್ತು ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸುತ್ತದೆ. ಅವರು ಹಂಚಿಕೊಳ್ಳುವ ಅನನ್ಯ ಸಂಪರ್ಕವನ್ನು ಆಚರಿಸಲು ಮತ್ತು ಒಟ್ಟಿಗೆ ನೆನಪುಗಳನ್ನು ಪಾಲಿಸಲು ಇದು ಒಂದು ದಿನವಾಗಿದೆ.ರಕ್ಷಾ ಬಂಧನ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ. ಇದು ಕುಟುಂಬ, ಸಂಬಂಧಗಳು ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಸಂರಕ್ಷಿಸುವ ಮತ್ತು ರವಾನಿಸುವ ಒಂದು ಮಾರ್ಗವಾಗಿದೆ.

ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅಂತ್ಯವಿಲ್ಲದ ಪ್ರೀತಿಯ ಆಚರಣೆಯಾಗಿದೆ, ಇದು ಅವರ ನಡುವಿನ ಬಲವಾದ ಬಂಧವನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸುತ್ತದೆ. ಪದಗಳು ಸಾಕಷ್ಟಿಲ್ಲದಿದ್ದಾಗ, ಅವರ ಸಹೋದರಿಯರಿಂದ ಸಹೋದರರ ಮಣಿಕಟ್ಟಿಗೆ ಪವಿತ್ರ ದಾರವನ್ನು ಸರಳವಾಗಿ ಕಟ್ಟಲಾಗುತ್ತದೆ. ಪ್ರೀತಿಯನ್ನು ತೋರಿಸುವ ಈ ವಿಶಿಷ್ಟ ವಿಧಾನವು ವರ್ಣನಾತೀತವಾಗಿದೆ. ಆದರೆ, ಈ ಹಬ್ಬದ ಬಗ್ಗೆ ಏನಾದರೂ ಹೇಳಲು ಬಂದಾಗ, ಇದು ಒಡಹುಟ್ಟಿದವರ ಪ್ರೀತಿಯನ್ನು ಆಚರಿಸುವ ಹಬ್ಬ ಎಂದು ಹೇಳಬಹುದು. ಇದು ಭಾರತದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಹಬ್ಬವಾಗಿದೆ.

ಹಿಂದೂ ಪುರಾಣದ ಪ್ರಕಾರ ಮಹಾಭಾರತದ ಅವಧಿಯಿಂದಲೇ ರಕ್ಷಾಬಂಧನದ ಇತಿಹಾಸ ಆರಂಭವಾಗುತ್ತದೆ ಆ ಸಮಯದಲ್ಲಿ ಸುದರ್ಶನ ಚಕ್ರತಾಗಿ ಕೃಷ್ಣನ ಕಿರುಬೆರಳಿಗೆ ಗಾಯವಾಗುತ್ತದೆ. ಆಕಸ್ಮಿಕವಾಗಿ ಆದ ಈ ಗಾಯವನ್ನ ತಪ್ಪಿಸಲು ದ್ರೌಪದಿಯು ಪ್ರಯತ್ನಿಸುತ್ತಾಳೆ ಅದಕ್ಕಾಗಿ ಕೃಷ್ಣನ ಮಣಿ ಕಟ್ಟಿನ ಮೇಲೆ ಬಟ್ಟೆಯನ್ನು ಕಟ್ಟುತ್ತಾಳೆ ಈ ಮೂಲಕ ಹೆಚ್ಚಿನ ರಕ್ತ ಹೋರಕ್ಕೆ ಹೋಗದಂತೆ ತಡೆಯುತ್ತಾಳೆ. ದ್ರೌಪದಿಯ ಈ ಕ್ರಮದಿಂದ ಕೃಷ್ಣ ತೃಪ್ತನಾಗುತ್ತಾನೆ ದ್ರೌಪದಿಯ ಈ ಕಾಳಜಿಯನ್ನ ಜಗತ್ತು ನೆನಪಲ್ಲಿಟ್ಟುಕೊಳ್ಳಬೇಕು ಎನ್ನುತ್ತಾನೆ. ಇದನ್ನು ಶ್ರೀ ಕೃಷ್ಣನು ರಕ್ಷಾ ಸೂತ್ರ ಎಂದು ಕರೆಯುತ್ತಾನೆ ಮಹಾಭಾರತದಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವ ಸಂದರ್ಭದಲ್ಲಿ ಶ್ರೀ ಕೃಷ್ಣನು ದ್ರೌಪದಿಯ ಮಾನ ಕಾಪಾಡುತ್ತಾನೆ ಈ ಮೂಲಕ ತನಗೆ ರಕ್ಷಾ ಸೂತ್ರ ಕಟ್ಟಿದ ಸಹೋದರಿಯ ರಕ್ಷಣೆ ಮಾಡುತ್ತಾನೆ.

Leave a Reply

Your email address will not be published. Required fields are marked *

error: Content is protected !!