raksha bandhan; ಸಾವಿರ ಜಗಳಗಳ ಮಾತೆಯರೇ ನಾ ನಿಮ್ಮ ರಕ್ಷಕ- ಸುನೀಲ್, ವಿದ್ಯಾರ್ಥಿ

raksha bandhan: ತಾಯಿಯ ಪ್ರತಿರೂಪಿ ನನ್ನ ತಂಗಿ ಮತ್ತು ನನ್ನಕ್ಕ. ಪ್ರತಿದಿನ ಜಗಳ ಮಾಡುವ ಜಗಳಗಂಟಿ ತಂಗಿ , ಒಯ್ ಎಂದರೇ ಕೈ ಮುಂದೆ ತರುವ ಅಕ್ಕ ,ಈ ಸಾವಿರ ಜಗಳಗಳ ಮಾತೆಯರು ನನ್ನ ಕಣ್ಣುಗಳ ಜೊತೆಗೆ ನನ್ನ ಉಸಿರಾಗಿದ್ದರೆ , ಆದರೂ ಸಹೋದರರ ರಕ್ಷೆಯ ಕೈ ತಮ್ಮ ಬೆನ್ನು ಹಿಂದೆ ಇದೆಯೆಂದು ಸಮಾಜದಲ್ಲಿ ಧೈರ್ಯವಾಗಿ ಓಡಾಡುವರು ಸಹೋದರಿಯರು.

ಹಿಂದೂಸ್ಥಾನದಲ್ಲಿ ಹೆಣ್ಣು ಎಂದರೇ ಕೊಡುವ ಗೌರವವೇ ವಿಶೇಷ. ವಿದೇಶಕ್ಕೆ ಹೋಲಿಸಿದರೆ ಸ್ವದೇಶದಲ್ಲಿ ಹೆಣ್ಣಿನ ಸ್ಥಾನಮಾನ ಬಹುದೊಡ್ಡದು. ಒಡ ಹುಟ್ಟಿದ ಸಹೋದರಿಯರಷ್ಟೇ ಸಹೋದರಿಯರು ಅನ್ನದೇ ಎಲ್ಲರಿಗೂ ಸಹೋದರಿ ಪ್ರೀತಿ ಕೊಡುವ ಸಂಸ್ಕಾರ ಹಿಂದೂಸ್ಥಾನದ ವಿಶೇಷವಾಗಿದೆ.

ರಕ್ಷಾ ಬಂಧನ ಎಂದರೇ , ಸಹೋದರಿಯರಿಗೆ ಸಹೋದರರ ರಕ್ಷಕ , ಸಹೋದರರಿಗೆ ಸಹೋದರಿ ರಕ್ಷಕ ಆಗುವ ಒಂದು ಬಂಧನ ಸೃಷ್ಟಿಸುವುದೇ, ” ರಕ್ಷಾ ಬಂಧನ ” ರಾಖಿ ಹಬ್ಬ ಎಂದು ಸಹ ಕರೆಯುವುದುಂಟು. ಈ ರಕ್ಷಾ ಬಂಧನದ ಮಹತ್ವವೇ ಸಹೋದರತ್ವ ಸಹೋದರಿಯತ್ವವನ್ನು ಸುಭದ್ರವಾಗಿಸುವ ಅಣ್ಣ ತಂಗಿಯರ ಹಬ್ಬ.

ಪ್ರತಿ ವರ್ಷ ರಾಖಿ ಕಟ್ಟಿದಾಗ ದುಡಿಯದ ಕೈಗಳಿಂದ ಕಿರು ಉಡುಗೊರೆ ಕೊಟ್ಟು ಖುಷಿಪಡಿಸುವೆ. ಪ್ರತಿ ಸಹೋದರಿಯರಿಗೂ ಉಡುಗೊರೆಗಿಂತ ತಮ್ಮ ಸಹೋದರರ ಪ್ರೀತಿ ಕಾಳಜಿನೇ ಮುಖ್ಯ ಎಂದು ಸಹೋದರರ ಕರ್ಚಿಗೆ ಬೈದು ದುಡ್ಡು ಕೊಡುವ ಸಹೋದರಿಯರೇ ಸಾಕ್ಷಿ. ಎಲ್ಲಾ ಸಹೋದರಿಯರಿಗೂ ರಕ್ಷಕನಾಗಿ , ರಕ್ಷಾಬಂಧನ ಆಚರಿಸುವೆ. ಎಲ್ಲ ಸಹೋದರಿಯರಿಗೂ ರಕ್ಷಾ ಬಂಧನದ ಶುಭಾಶಯಗಳು.

ಸುನೀಲ್ ಹರಿಹರ
ಪತ್ರಿಕೋದ್ಯಮ ವಿದ್ಯಾರ್ಥಿ

Leave a Reply

Your email address will not be published. Required fields are marked *

error: Content is protected !!