ರಂಭಾಪುರಿ ಮಠದ ಸ್ವಾಮೀಜಿಗಳ ದಸರಾ ಉತ್ಸವ : ಕಾರ್ಯಕ್ರಮಕ್ಕೆ ಹರಿದು ಬಂದ ಸಚಿವರು, ಶಾಸಕರು, ಸಂಸದರ ದಂಡು

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀಮದ್ ರಂಬಾಪುರಿ ಜಗದ್ಗುರುಗಳವರ ಸಾಂಪ್ರದಾಯಿಕ ಸರಳ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭ ಉತ್ಸವ ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ ರಂಭಾಪುರಿ ಮಠದ ಸ್ವಾಮೀಜಿಗಳ ದಸರಾ ಉತ್ಸವ ಜರುಗುತ್ತಿವೆ.

ದಸರಾ ಉತ್ಸವದ ಹಿನ್ನಲೆಯಲ್ಲಿ ಪ್ರತಿ ನಿತ್ಯ ಧರ್ಮ‌ ಸಭೆಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ಸಂಸದರ ದಂಡೆ ಹರಿದು ಬರುತ್ತಿದೆ.

ಗ್ರಾಮೀಣಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ರಾಘವೇಂದ್ರ ಸೇರಿಂದತೆ ಅನೇಕ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ವಾಮೀಜಿಯವರ ಆರ್ಶೀವಾದ ಪಡೆದಿದ್ದಾರೆ. ಪ್ರವಚನ ಕೇಳಿದ್ದಾರೆ.

ಶ್ರೀಮದ್ ರಂಬಾಪುರಿ ವೀರ ಸಿಂಹಾಸನಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರ ಸೋಮನಾಥ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವತ್ಪಾದರು ಉಪಸ್ಥಿತರಿದ್ದರು. ಧರ್ಮ ಸಮಾರಂಭದಲ್ಲಿ ಪ್ರವಚನವನ್ನು ರಂಭಾಪುರಿ‌ ಸ್ವಾಮೀಜಿ‌ ನೀಡುತ್ತಿದ್ದಾರೆ.
ಸಮಾರಂಭದಲ್ಲಿ ಕಡೇನಂದಿಹಳ್ಳಿ ಮಠದ ಪೀಠಾಧಿಪತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಕಾರ್ಯಕ್ರಮದಲ್ಲಿ‌ ಭಾಗವಿಸಿದ್ದರು.

Leave a Reply

Your email address will not be published. Required fields are marked *

error: Content is protected !!