ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಹಾವೇರಿಯಲ್ಲಿ ಮಾರ್ಗದರ್ಶಿ ಪುಸ್ತಕ ಬಿಡುಗಡೆ

ಹಾವೇರಿ : ಕೋವಿಡ ಮಹಾಮಾರಿಯಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ವಿಧ್ಯಾರ್ಥಿಗಳು ಶಿಕ್ಷಣದಿಂದ ದೂರವಾಗಿ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ತುತ್ತಾಗಿದ್ದು, ಇಂಥಹ ವಿಷಮ ಸ್ಥಿತಿಯಲ್ಲಿ ಶಿಕ್ಷಕರಿಗೆ ಹಲವಾರು ಸವಾಲುಗಳು ಎದುರಾಗಿದ್ದು, ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕಾಗಿದೆ ಎಂದು ಕಲಬುರ್ಗಿಯ ಆಪರ ಆಯುಕ್ತರ ಕಾರ್ಯಾಲಯ ನಿರ್ದೇಶಕ ಹಾಗೂ ಹಾವೇರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ನೋಡಲ ಅಧಿಕಾರಿ ಬಿ.ಕೆ.ಎಸ್. ವರ್ಧನ ಹೇಳಿದರು.

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ವಿವಿಧ ವಿಷಯಗಳ ಮಾರ್ಗದರ್ಶಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲೆಯ ಉತ್ತಮ ಸಂಪನ್ಮೂಲ ಶಿಕ್ಷಕರಿಂದ ಮಾರ್ಗದರ್ಶಿ ಪುಸ್ತಕಗಳು ರಚನೆಯಾಗಿದ್ದು, ಅಮೂಲ್ಯ ವಿಷಯ ವಸ್ತುಗಳನ್ನು ಹೊಂದಿವೆ. ಇಂಥಹ ಸಂಪನ್ಮೂಲಗಳು ವಿಧ್ಯಾರ್ಥಿಗಳು ಸಮರ್ಥವಾಗಿ ಬೆಳೆಸಿಕೊಳ್ಳಬೇಕಾಗಿದೆ. ಇದರಿಂದ ಉತ್ತಮ ಅಂಕಗಳನ್ನು ಪಡೆಯುವದರ ಜೊತೆಗೆ ಜಿಲ್ಲೆಯು ಶೈಕ್ಷಣಿಕವಾಗಿ ಉನ್ನತ ಸ್ಥಾನವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಜಗದೀಶ್ವರ ಮಾತನಾಡಿ, ವಿಧ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಇದರಿಂದ ಏಕಾಗ್ರತೆ ಕೊರೆತೆ ಜೊತೆಗೆ ಮಾನಸಿಕ ಸಮಸ್ಯೆಗಳಿಗೆ ಈಡಾದುತ್ತಿರುವದು ಆತಂಕಕಾರಿ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಪಠ್ಯದ ಜೊತೆಗೆ ಮಾರ್ಗದರ್ಶಿ ಪುಸ್ತಕಗಳನ್ನು ಓದುವದರಿಂದ ಅವರಲ್ಲಿ ಜ್ಞಾನ ಹೆಚ್ಚಾಗಿ ಅದು ಫಲಿತಾಂಶದಲ್ಲಿ ಗೋಚರವಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಶಿಕ್ಷಕರು ಇದರ ಸದುಪಯೋಗ ವಿಧ್ಯಾರ್ಥಿಗಳಿಗೆ ಸಹಕಾರಿಗಲು ಶ್ರಮಿಶಬೇಕೆಂದು ಹೇಳಿದರು.

ಸಮಾರಂಭದಲ್ಲಿ ಬಿಇಓಗಳಾದ ಎಂ.ಎಚ್.ಪಾಟೀಲ, ಸಿ.ಜಿ. ಚಿಕಮಠ, ಆರ್.ಎನ್. ಹುರಳಿ, ಐ.ಬಿ.ಬೆನಕೊಪ್ಪ, ಡಯಟ್ ಉಪನ್ಯಾಸಕ ಎಸ್.ಜಿ.ಕೋಟಿ, ಎಸ್.ಎಸ್.ಅಡಿಗ, ವಿಷಯ ಪರಿವೀಕ್ಷಕ ಮಂಜಪ್ಪ ಆರ್. ಈರಪ್ಪ ಲಮಾಣಿ, ದೇವೇಂದ್ರಪ್ಪ ಬಸಮ್ಮನವರ, ಆನಂದ ಉರ್ಮಿ, ಬಸವಗೌಡ ಪಾಟೀಲ, ನಾಗರಾಜ ಇಚ್ಚಂಗಿ, ಕೆ.ಎಂ.ಸುನೀತ ಮತ್ತಿತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಮಂಜಪ್ಪ ಆರ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!