ಹಾವೇರಿಯ ವೀರಯೋಧ ದಿ.ಹನುಮಂತಪ್ಪ ಚೂರಿ ಧರ್ಮಪತ್ನಿ ಪುಟ್ಟಮ್ಮ ಚೂರಿಗೆ ಹುಕ್ಕೆರಿ ಮಠದಲ್ಲಿ ಸನ್ಮಾನ

ಹಾವೇರಿ: ಎರಡನೇ ಮಾಹಾಯುದ್ಧದಲ್ಲಿ ಭಾಗವಹಿಸಿದ್ದ ಹಾವೇರಿಯ ವೀರಯೋಧ ದಿ.ಹನುಮಂತಪ್ಪ ಚೂರಿ ಅವರ ಧರ್ಮಪತ್ನಿ ೯೦ರ ವಯೋಮಾನದ ಪುಟ್ಟಮ್ಮ ಚೂರಿ ಅವರನ್ನು ಜ.೧೨ರಂದು ಇಲ್ಲಿನ ಹುಕ್ಕೇರಿಮಠದಲ್ಲಿ ಜರುಗಿದ ಉಭಯಶ್ರೀಗಳ ಜಯಂತಿ ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವಸ್ವಾಮಿಜಿ ಅವರು ಸನ್ಮಾನಿಸಿ ಗೌರವಿಸಿದರು.

ಪುಟ್ಟಮ್ಮ ಚೂರಿ ಅವರ ಜೀವಮಾನದ ಸಾಧನೆ ಗುರುತಿಸಿ ಕುಂದಗೋಳದ ೨೦೦-ನಾಟೌಟ್ ಗ್ರುಪ್ ಆಫ್ ಕಂಪನಿಸ್ ಹಾಗೂ ನೆನಪು ಪೌಂಡೇಶನ್ ಬಳಗದವರು ಜಂಟಿಯಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪುಟ್ಟಮ್ಮ ಚೂರಿ ಅವರನ್ನು ಹುಕ್ಕೇರಿಮಠದ ಸದಾಶಿವಸ್ವಾಮಿಜಿ, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವಸ್ವಾಮಿಜಿ, ಕೂಡಲದಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನರ , ಪಂ.ರಾಜಗುರು ಗುರುಸ್ವಾಮಿ ಕಲಕೇರಿ ಮತ್ತಿತರರು ಸನ್ಮಾನಿಸಿ ಗೌರವಿಸಿದರು.

ಈಸಂದರ್ಭದಲ್ಲಿ ಕುಂದಗೋಳದ ೨೦೦ ನಾಟೌಟ್ ಗ್ರುಪ್ ಆಫ್ ಕಂಪನಿಸ್ ಹಾಗೂ ನೆನಪು ಪೌಂಡೇಶನ್ ಬಳಗದ ಮಂಜುನಾಥ ಪವಾಡಿ, ವೀರೇಶ ಪ್ರಳಯಕಲ್ಮಠ, ವಿಧ್ಯಾಧರ ಸುಂಕದ, ಚಂದ್ರಕಾಂತ ಪಾಯಕ್ಕನವರ, ವೀರನಗೌಡ ಬಸನಗೌಡ್ರ, ವಿನಾಯಕ ಬಾನೋಜಿ, ಮುನೀಶ್ವರ ಚೂರಿ, ಮಂಜುಳಾ ಚೂರಿ, ಸಿ.ಎನ್.ರೊಡ್ಡನವರ, ನಿರಂಜನ ಹೇರೂರು ಸೇರಿದಂತೆ ಅನೇಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!