ರಾಜ್ಯ ಮಟ್ಟದ “ಆಕರ್ಷಕ ಗೃಹಿಣಿ ಉಚಿತ ಫೋಟೋ ಸ್ಪರ್ಧೆ” ಫಲಿತಾಂಶದಲ್ಲಿ ಗೆದ್ದ ನಾರಿಯರು

ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗಸAಸ್ಥೆ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಪ್ರತಿ ವರ್ಷದಂತೆ ರಾಜ್ಯ ಮಟ್ಟದ “ಆಕರ್ಷಕ ಗೃಹಿಣಿ ಫೋಟೋ ಸ್ಪರ್ಧೆ-2022”ರ ಫಲಿತಾಂಶ ಈ ಕೆಳಗಿನಂತಿದೆ ಎಂದು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.

ಇಪ್ಪತ್ತು ವರ್ಷದಿಂದ ನಲವತ್ತು ವರ್ಷಗಳ ಒಳಗೆ ಇರುವ ವಿವಾಹಿತ ಗೃಹಿಣಿಯರಿಗೆ ನಮ್ಮ ಸಂಸ್ಕೃತಿ ಸಾಂಪ್ರದಾಯದ ಉಡುಗೆ ತೊಡುಗೆಯೊಂದಿಗೆ ಪೂರ್ಣಪ್ರಮಾಣದ ಫೋಟೋ ಸ್ಪರ್ಧೆ ಉಚಿತವಾಗಿ ಹಮ್ಮಿಕೊಂಡಿದ್ದು ನಿರೀಕ್ಷೆಗೂ ಮೀರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ಪ್ರಥಮ ಬಹುಮಾನ ಮೂರು ಜನ ಹಂಚಿಕೊಂಡಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಶ್ರೀಮತಿ ನಮ್ರತಾ ಪ್ರಭು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೆರಾಡಿಯ ಶ್ರೀಮತಿ ಭಾವನಾ ಹರ್ಷವರ್ಧನ್ ನಾಯಕ್ ಹಾಗೂ ಬೆಂಗಳೂರಿನ ಶ್ರೀಮತಿ ದೀಪಾ ನವೀನ ಶಾಮನೂರ್ ಈ ಮೂರು ಗೃಹಿಣಿಯರು ಪ್ರಥಮ ಬಹುಮಾನ ಪಡೆದಿರುತ್ತಾರೆ ಎಂದು ಸಂಸ್ಥೆಯ ಖಜಾಂಚಿ ಶ್ರೀಮತಿ ಗಿರಿಜಮ್ಮ ನಾಗರಾಜಪ್ಪ ತಿಳಿಸಿದ್ದಾರೆ.

ದ್ವಿತೀಯ ಬಹುಮಾನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ದಿವ್ಯಾ ಪೈ, ತೃತೀಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಶ್ರೀಮತಿ ವೀಣಾ ಆನಂದ ಶೇಟ್, ಸಮಾಧಾನಕರ ಬಹುಮಾನಗಳು ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿಯ ಶ್ರೀಮತಿ ತೇಜಸ್ವಿನಿ, ಕೊಡುಗು ಜಿಲ್ಲೆಯ ಮಡಿಕೇರಿಯ ಶ್ರೀಮತಿ ಚಂದ್ರಕಲಾ ಸಿದ್ದಲಿಂಗಪ್ಪ, ದಾವಣಗೆರೆಯ ಶ್ರೀಮತಿ ಸ್ನೇಹಾ ವಿನಾಯಕ ಆವಾಜಿ, ಹಾವೇರಿ ಜಿಲ್ಲೆಯ ತಿಳುವಳ್ಳಿಯ ಶ್ರೀಮತಿ ಗೀತಾಶ್ರೀ ಪುಟ್ಟರಾಜು, ಮೈಸೂರಿನ ಶ್ರೀಮತಿ ಸುಮಂಗಲಾ ವಿಶ್ವನಾಥ್ ಆಚಾರ್ಯ, ಬೆಳಗಾವಿಯ ಶ್ರೀಮತಿ ಸುವರ್ಣಾ ದಿಲೀಪ್ ಚಂದಾವಾರ್ಕರ್ ಪಡೆದಿರುತ್ತಾರೆ ಎಂದು ಸಂಸ್ಥೆಯ ಸಂಸ್ಥಾಪಕರೂ ಹಿರಿಯ ವೃತ್ತಿನಿರತ ಮಹಿಳಾ ಛಾಯಾಗ್ರಾಹಕರೂ, ತೀರ್ಪುಗಾರರಲ್ಲಿ ಒಬ್ಬರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ತಿಳಿಸಿದ್ದಾರೆ.

ಅಂತರ್ಜಾಲ ತಾಣದಲ್ಲಿ ನಡೆದ ಈ ಉಚಿತ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಕರ್ನಾಟಕ ಸೇರಿದಂತೆ ನೆರೆರಾಜ್ಯಗಳಿಂದಲೂ ಅಸಂಖ್ಯಾತ ಪೋಟೋಗಳು ಬಂದಿದ್ದು ಈಗಾಗಲೇ ತಿಳಿಸಿದ ಸ್ಪರ್ಧೆಯ ನಿಯಮದಂತೆ ಸ್ಪರ್ಧೆಯ ವಿಜೇತರಿಗೆ ಮಾತ್ರ ಅವರು ಕೊಟ್ಟ ವ್ಯಾಟ್ಸಪ್ ನಂಬರ್‌ಗೆ ಫಲಿತಾಂಶ ಹಾಗೂ ಪ್ರಮಾಣಪತ್ರ ಕಳಿಸಲಾಗುವುದು ಹಾಗೂ ಆರೋಗ್ಯ ದೃಷ್ಟಿಯಿಮದ ಯಾವುದೇ ಬಹುಮಾನ ವಿತರಣಾ ಸಮಾರಂಭ ಇರುವುದಿಲ್ಲ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುನಂದಾದೇವಿ ಜಂಬನಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!