ಪದೇ ಪದೇ ಹಾಳಾಗುತ್ತಿರುವ ಟಿ.ಸಿ ಬದಲಾವಣೆಗೆ ಕೇಶವ ನಗರ,ಪಟೇಲ್ ಬಡಾವಣೆ ನಿವಾಸಿಗಳ ಒತ್ತಾಯ.

ಪದೇ ಪದೇ ಹಾಳಾಗುತ್ತಿರುವ ಟಿ.ಸಿ ಬದಲಾವಣೆಗೆ ಕೇಶವ ನಗರ,ಪಟೇಲ್ ಬಡಾವಣೆ ನಿವಾಸಿಗಳ ಒತ್ತಾಯ.

ಹರಿಹರ : ಪದೇ ಪದೇ ಹಾಳಾಗುತ್ತಿರುವ ಮತ್ತು ವಿದ್ಯುತ್ ತೊಂದರೆ ಕೊಡುತ್ತಿರುವ ಹಳೆಯ ಟಿಸಿ ಬದಲಾವಣೆ ಮಾಡುವಂತೆ ಒತ್ತಾಯಿಸಿ ನಗರದ ಕೇಶವ ನಗರ ಪಟೇಲ್ ಬಡಾವಣೆಯ ನಿವಾಸಿಗಳು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಮ್ಮ ಬಡಾವಣೆಗಳಾದ ಕೇಶವ ನಗರ ಮತ್ತು ಪಟೇಲ್ ಬರವಣಿಯಲ್ಲಿ ಪದೇಪದೇ ದುರಸ್ತಿಯಾಗಿ ವಿದ್ಯುತ್ ವ್ಯತ್ಯಯವಾಗುತ್ತಿರುವ ಕಾರಣಕ್ಕಾಗಿ ಹೊಸ ಟಿಸಿ ಅಳವಡಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಕಾರ್ಯ ನಿರ್ವಾಹಕ ಇಂಜಿನಿಯರ್ ಅನುಪಸ್ಥಿತಿಯಲ್ಲಿ ಶಾಖಾಧಿಕಾರಿ ಮನೊಜ್ ರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಕೇಶವನಗರ ಯುವ ಮುಖಂಡ ಶಕೀಲ್ ಅಹ್ಮದ್ ಮಾತನಾಡಿ ಹರಿಹರ ನಗರದ ಪ್ರತಿಷ್ಠಿತ ಬಡವಾಣೆಗಳಾದ ಕೇಶವನಗರ, ಪಟೇಲ್ ಬಡವಾಣೆಯಲ್ಲಿ ವಿದ್ಯುತ್ ಸಮಸ್ಯೆಯು ಮಿತಿ ಮೀರಿದ್ದು, ಇದಕ್ಕೆ ಮುಖ್ಯಕಾರಣ ಹಳೆಯದಾದ ಟಿ.ಸಿಯಲ್ಲಿ ಸಮಸ್ಯೆ ಇದ್ದು ವಿದ್ಯುತ್ ಸಂಪರ್ಕ ಕಡಿತಗೊಂಡರೆ ಸರಿ ಮಾಡಲು 15ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುಲಾಗುತ್ತಿದೆ.

ಇದು ತಿಂಗಳಲ್ಲಿ 3 ರಿಂದ 4 ಬಾರಿ ಇದೆ ಸಮಸ್ಯೆ ಸಾಮಾನ್ಯವಾಗಿದ್ದು ವಿದ್ಯುತ್ ಸರಬರಾಜಿನಲ್ಲಿ ಹಲವಾರು ಬಾರಿ ಸಮಸ್ಯೆಯಾಗುತ್ತಿದ್ದು ವಿದ್ಯುತ್ತನ್ನು ಕಡಿತಗೊಳಿಸಲಾಗುತ್ತಿದೆ ಬಿಟ್ಟು ಬಿಟ್ಟು ವಿದ್ಯುತ್ ಸಂಪರ್ಕ ನೀಡುತ್ತಿದ್ದು ಇಲ್ಲಿನ ನಿವಾಸಿಗಳಿಗೆ ಬೇಸಿಗೆ ಕಾರಣಕ್ಕಾಗಿ ತುಂಬಾ ತೊಂದರೆಯಾಗುತ್ತಿದೆ. ಟಿ.ಸಿ ಬದಲಾಯಿಸಲು ಹಲವು ಬಾರಿ ಇಲಾಖೆ ಗಮನಕ್ಕೆ ತಂದರು ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹೊಸದಾದ ಟಿ.ಸಿ. ಅಳವಡಿಸಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೆ ವೇಳೆ ಸಂತೋಷ್ ಮಾತನಾಡಿ ಈ ಬಗ್ಗೆ ಹಲವು ಬಾರಿ ಪವರ್ ಮ್ಯಾನ್,ಸೂಪರ್ವೈಸರ್ ಗಳಿಗೆ ಮನವಿ ಮಾಡಿದರೂ ಅವರುಗಳಿಂದ ಸರಿಯಾದ ಸ್ಪಂದನೆ ದೊರೆತಿಲ್ಲ. ಪದೇ ಪದೇ ಹಾಳ ಗುತ್ತಿರುವ ಹಳೆಯದಾದ ಟಿ.ಸಿ ಬದಲಿಸಿ ಹೊಸ ಟಿ.ಸಿ. ಅಳವಡಿಸಿ ನಮ್ಮ ಬಡಾವಣೆಗಳ ಸಮಸ್ಯೆ ಬಗೆಹರಿಸಬೇಕು.ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಇಂಜಿನಿಯರ್ ಸಿ.ನಾಗರಾಜ್ ನಾಯ್ಕ್ ರನ್ನು ದೂರವಾಣಿ ಮೂಲಕ ಸಂಪರ್ಕಕ್ಕೇ ದೊರೆತ ಅವರು ಈ ಭಾಗದ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿರುವುದಿಲ್ಲ. ಈಗ ಬಂದಿದೆ ಕೆಲವೇ ದಿನಗಳಲ್ಲಿ ಸ್ಥಳ ಪರೀಕ್ಷೆ ನಡೆಸಿ ಟಿ.ಸಿ.ಬದಲಿಸಲೇಬೇಕು ಎನ್ನುವ ಸಮಸ್ಯೆ ಇದ್ದರೆ ಮೇಲಾಧಿಕಾರಿಗಳ ಅನುಮತಿ ಪಡೆದು ಬೇಗನೆ ಬದಲಿಸುವ ವ್ಯವಸ್ಥೆ ಖಂಡಿತವಾಗಿಯೂ ಮಾಡುತ್ತೇನೆ ಎಂದು ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು.

ಈ ಸಮಯದಲ್ಲಿ ದುಂಡಪ್ಪ, ಫಾ, ಸೈಯದ್ ಪಾಸಿ, ಫಜಲ್ ಸಾಬ್, ಅಬ್ದುಲ್ ಕರೀಂ, ಫೈಝನ್ ಸಾಬ್, ಯಾಸಿರ್, ಹಿದಾಯತ್ ಸೇರಿದಂತೆ ಟಿಪ್ಪು ನಗರ ಮತ್ತು ಪಟೇಲ್ ಬಡಾವಣೆಯ ಹಲವಾರು ನಿವಾಸಿಗಳು ಭಾಗವಹಿಸಿದ್ದರು.

ಬಾಕ್ಸ್ ಕಾಲoಗಾಗಿ.1.
ಟಿಪ್ಪು ನಗರದ ಟಿಸಿ ಬಳಿ ಇರುವ ಬಹಳಷ್ಟು ಕೇಬಲ್ ಗಳು ಸುಟ್ಟು ಹೋಗಿದ್ದು, ಭಾನುವಾರದ ದಿನ ಎಲ್ಲವನ್ನು ಸರಿಪಡಿಸಲಾಗಿದೆ. ಸುಟ್ಟುಹೋದ ಕೇಬಲ್ ಗಳನ್ನು ತೆಗೆದು ಹೊಸ ಕೇಬಲ್ ಗಳನ್ನು ಹಾಕಲಾಗಿದೆ ನಾಲ್ಕು ಹೊಸ ಕೇಬಲ್ ಗಳನ್ನು ಹಾಕಿದ್ದು ಒಂದು ಎಲ್.ಟಿ ಕಿಟ್, ಮೂರು ಸೆಟ್ ಗಳ ಒಂದು ಡುಯಲ್ ಸೆಟ್ ನ್ನು ಹೊಸದಾಗಿ ಅಳವಡಿ ಸಲಾಗಿದೆ. ಅಂದಿನಿಂದ ಯಾವುದೇ ತೊಂದರೆ ಬಂದಿರುವುದಿಲ್ಲ ವಿದ್ಯುತ್ ಸರಬರಾಜು ಸರಿಯಾಗಿ ನಡೆದಿದೆ.

ಆದಾಗ್ಯು ಅಲ್ಲಿನ ನಿವಾಸಿಗಳು ಟಿ.ಸಿ ಬದಲಾವಣೆಗೆ ಒತ್ತಾಯ ಮಾಡುತ್ತಿದ್ದಾರೆ ಪ್ರಸ್ತುತ ಅಲ್ಲಿ 63 ಕೆ.ವಿ ಟಿ.ಸಿ ಇದ್ದು ಅದನ್ನು 100 ಕೆ.ವಿ ಸಾಮರ್ಥ್ಯದ ಹೊಸ ಟಿ.ಸಿ ಬದಲಾವಣೆಗೆ ಕಾರ್ಯ ಪಾಲಕ ಇಂಜಿನಿಯರ್ ಜೊತೆ ಚರ್ಚಿಸಿ ಮೇಲಾಧಿ ಕಾರಿಗಳ ಮಂಜೂರಾತಿ, ಅನುಮತಿಯನ್ನು ಪಡೆದು ಅವಶ್ಯವಿದ್ದರೆ ಹೊಸ ಟಿ.ಸಿ ಅಳವಡಿಸಲು ಪ್ರಯತ್ನ ಮಾಡಲಾಗುವುದು.

ಚಂದ್ರಪ್ಪ ಎಸ್. ತಳವಾರ್,
ಎ.ಇ/ಶಾಖಾಧಿಕಾರಿ ಯೂನಿಟ್ 2. ಹರಿಹರ.

Leave a Reply

Your email address will not be published. Required fields are marked *

error: Content is protected !!