ದಾವಣಗೆರೆ: ವಿಶೇಷ ಚೇತನರಾಗಿದ್ದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ತ್ರಿಭಾಷಾ ಪಂಡಿತರಾಗಿದ್ದರು. ಮೂರು ಭಾಷೆಯಲ್ಲಿ ಸಾಹಿತ್ಯದ ಹಲವು ಪ್ರಕಾರದಲ್ಲಿ ನೂರಾರು ಕೃತಿಗಳು ರಚಿಸಿದ್ದಾರೆ.
ಅವರ ಸಮಗ್ರ ಸಾಹಿತ್ಯವನ್ನು ಸರಕಾರ ಪ್ರಕಟಿಸಿ ರಾಜ್ಯದ ಓದುಗರ ಕೈಗೆ ಸಿಗುವಂತೆ ಮಾಡಬೇಕು ಎಂದು ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಅಧ್ಯಕ್ಷ ವೇದಮೂರ್ತಿ ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಸರಕಾರಕ್ಕೆ ಮನವಿ ಮಾಡಿಕೊಂಡರು. ಅವರು ದಾವಣಗೆರೆ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಸೇವಾ ಸಮಿತಿಯು ಹಮ್ಮಿಕೊಂಡಿದ್ದ, ಸಾವಿರದ ಸಾಹಿತ್ಯ ಸಾವಿರ ಸಾವಿರ ಮನೆ ಮನಗಳಿಗೆ ಅಭಿಯಾನಕ್ಕೆ ಚಾಲನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತ, ಪುಟ್ಟರಾಜರ ಜೀವನ ಸಾಧನೆ ಸಂದೇಶವನ್ನು ಜನ ಮನಕ್ಕೆ ತಲುಪಿಸುವ ಗ್ರಂಥ ದಾಸೋಹ ಸೇವೆಯ ಈ ಅಭಿಯಾನಕ್ಕೆ ಗದುಗಿನಲ್ಲಿ ಕಾಶಿ ಜಗದ್ಗುರುಗಳವರಿಂದ ಚಾಲನೆ ಚಾಲನೆ ನೀಡಲಾಗಿದ್ದು ಈ ಅಭಿಯಾನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯಲಿದೆ. ಅಭಿಯಾನದ 2ನೆಯ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆಯುತ್ತಿದೆ. ದಾವಣಗೆರೆಯ ಸದ್ಭಕ್ತರು ಗುರು ಸಾಹಿತ್ಯ ಖರೀದಿಸಿ ಶುಭ ಸಮಾರಂಭಗಳಲ್ಲಿ ಬಂಧು ಮಿತ್ರರಿಗೆ ಶಾಲೆ ಕಾಲೇಜುಗಳ ಗ್ರಂಥಾಲಯಗಳಿಗೆ ದಾನ ನೀಡಬೇಕು ಎಂದು ವಿನಂತಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಎ. ಎಚ್ ಶಿವಮೂರ್ತಿ ಸ್ವಾಮಿ ಕಾರ್ಯದರ್ಶಿಗಳು ಶ್ರೀ ವೀರೇಶ್ವರ ಪುಣ್ಯಶ್ರಮ ಟ್ರಸ್ಟ್ ದಾವಣಗೆರೆ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಗೌರವಾಧ್ಯಕ್ಷರಾದ ಗಣ್ಯವರ್ತಕ ಅಣಬೇರು ಮಂಜಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಚಿರಂತಿಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಸುಧಾ ಮಂಜುನಾಥ, ಗಣ್ಯ ಉದ್ಯಮಿದಾರ ಜಿಲ್ಲಾ ಅಧ್ಯಕ್ಷ ವಿನಾಯಕ ಪಿ ಬಿ, ಸಂಗೀತ ಗುರು ಜಿಲ್ಲಾ ಉಪಾಧ್ಯಕ್ಷ ರೇವಣಸಿದ್ದಪ್ಪ ಎಂ.ಕೆ. ಸೇವಾ ಸಮಿತಿಯ ಮಾಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸತೀಶ್ ಧಾರವಾಡ ವೇದಿಕೆಯಲ್ಲಿ ಇದ್ದರು.
ಇದೆ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ 25 ಕ್ಕೂ ಹೆಚ್ಚು ಕವಿಗಳು ಕಲೆಗೂ ಕಣ್ಣಿತ್ತ ಪೂಜ್ಯರು ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ ಮಾಡಿದರು. ಕವಿಗಳಿಗೆ ಪುಟ್ಟರಾಜರ ಕುರಿತು ಪುಸ್ತಕಗಳು ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಗುರು ಸೇವಕರಾದ ಮಂಜು ನಾಥ ಮತ್ತು ಚನ್ನವೀರಯ್ಯ ಇವರಿಗೆ ಸತ್ಕರಿಸಲಾಯಿತು.
ಪ್ರಸಾದ ಸೇವೆಯನ್ನು ಶ್ರೀ ಕೃಷ್ಣಮೂರ್ತಿ ಸಾವಿತ್ರ ಮತ್ತು ಶ್ರೀ ಟಿ ಎಂ ವೀರಯ್ಯ ರುದ್ರಮ್ಮನವರು ಮತ್ತು ಮಹೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು. ಶ್ರೀ ವೀರೇಶ್ವರ ಪುಣ್ಯಾಶ್ರಮದ ಮಕ್ಕಳಿಂದ ಪ್ರಾರ್ಥನೆ ನಡೆಯಿತು ಶಿವಬಸಯ್ಯ ಚಿರಂತಿಮಠ ಸರ್ವರಿಗೂ ಸ್ವಾಗತಿಸಿದರು ಪುಟ್ಟರಾಜ ಗಾನ ಲಹರಿ ಮಹಿಳಾ ಕಲಾ ತಂಡದವರಿಂದ ವಚನ ಗಾಯನ ನಡೆಯಿತು . ಸೌಮ್ಯ ಸತೀಶ್ ವಂದನಾರ್ಪಣೆ ಮಾಡಿದರು.
ಸುಮಾ ಹಡಪದ ಕಾರ್ಯಕ್ರಮದ ನಿರೂಪಣೆ ಮಾಡಿದರು. ಉಪನ್ಯಾಸಕಿ, ವಾಣಿ ಬಸವರಾಜ್ ಕವಿ ಗೋಷ್ಠಿ ನಡೆಸಿಕೊಟ್ಟರು ರಾಜ್ಯ ಮತ್ತು ಜಿಲ್ಲಾ ಘಟಕದ ಸದಸ್ಯರು ಮತ್ತು ಪದಾಧಿಕಾರಿಗಳು ಸಹಿತ ಇದ್ದರು ಈ ಕಾರ್ಯಕ್ರಮದ ನಂತರ ವಾರ್ಷಿಕ ಮಹಾ ಸಭೆಯು ಜರುಗಿತು.
