ಹಳೇ ಕುಂದವಾಡದಲ್ಲಿ ಫೆ.18 ರಿಂದ 27ರವರೆಗೆ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ

ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ

ದಾವಣಗೆರೆ: ನಗರಕ್ಕೆ ಸಮೀಪದಲ್ಲಿರುವ ಹಳೇ ಕುಂದವಾಡ ಗ್ರಾಮದಲ್ಲಿನ ಶ್ರೀಸದ್ಗುರು ಕರಿಬಸವೇಶ್ವರ ಸ್ವಾಮಿಯ ಪುಣ್ಯಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಇದೇ ಫೆಬ್ರವರಿ 18 ರಿಂದ 27ರವರೆಗೆ ಮಾಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
18ರ ಶನಿವಾರ ಮುಂಜಾನೆ ಶ್ರೀ ಅಜ್ಜಯ್ಯನವರ ಅಮೃತ ಶಿಲಾಮೂರ್ತಿಗೆ ರುದ್ರಭಿಷೇಕ ನಂತರ ಹೋಮ-ಹವನ ನೇರವೇರಲಿವೆ. ಬೆಳಗ್ಗೆ 10.30ಕ್ಕೆ ಧ್ವಜರೋಹಣ, ಮಧ್ಯಹ್ನ 1 ಗಂಟೆಗೆ ಹೋಮ-ಹವನದ ಪೂರ್ಣಾಹುತಿ ನಡೆಯಲಿದೆ.
ಫೆ.20ರ ಸೋಮವಾರ ಮುಂಜಾನೆ ರುದ್ರಾಭಿಷೇಕ, ವಿಶೇಷ ಪೂಜೆ, ಬೆಳಗ್ಗೆ 7.30ಕ್ಕೆ ಗುಗ್ಗುಳ ನಡೆಯಲಿದೆ. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಯೋಗೇಶ್ ದೇವರಮನಿ, ಗಿರೀಶ್ ದೇವರಮನಿ, ರಮೇಶ್ ದೇವರಮನಿ ಈ ಪೂಜೆಯ ಸೇವಾಕರ್ತರುಗಳಾಗಿದ್ದಾರೆ. ದೇವರಬೇಳಕೆರೆಯ ಚಮನ್ ಅಜ್ಜನವರು ಉಪಸ್ಥಿತರಿರುವರು.
ಸಂಜೆ 7ಕ್ಕೆ ಶ್ರೀಗುರು ಕರಿಬಸವೇಶ್ವರ ಅಜ್ಜನವರ ಬೆಳ್ಳಿಮೂರ್ತಿ ಪಲ್ಲಕ್ಕಿ ಉತ್ಸವ ಗ್ರಾಮದ ರಾಜಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಅನ್ನ ಸಂತರ್ಪಣೆ ಮಾಡಲಾಗುವುದು.
ಫೆ.27ರ ಸೋಮವಾರ ಮುಂಜಾನೆ ರುದ್ರಾಭಿಷೇಕ, ವಿಶೇಷ ಪೂಜೆ, ಮಧ್ಯಹ್ನ 12 ಗಂಟೆಗೆ ಶ್ರೀ ಕ್ಷೇತ್ರದ ಮಾತೃ ಶ್ರೀ ರಾಜ ಮಾತೆಯವರ 31ನೇ ವರ್ಷದ ಪುಣ್ಯರಾಧನೆ ನೆರವೇರಲಿವೆ. ನಂತರ ಪಳಹಾರ ಪ್ರಸಾದ ವಿನಿಯೋಗಿಸಲಾಗುವುದು. 18ರಿಂದ 27ರವರೆಗೆ ಮಹಾ ಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿರುವ ವಿಶೇಷ ಪೂಜಾ ಕಾರ್ಯಕ್ರಮಗಳು ಹಳೆ ಕುಂದುವಾಡದ ಶ್ರೀಸದ್ಗುರು ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ಜೆ.ರಾಜಣ್ಣ ನೇತೃತ್ವದಲ್ಲಿ ನೆರವೇರಲಿದೆ.
ಶಾಸಕರು ಹಾಗೂ ಹಳೆ ಕುಂದುವಾಡದ ಶ್ರೀಸದ್ಗುರು ಕರಿಬಸವೇಶ್ವರ ಟ್ರಸ್ ಟ್ನ ಗೌರವಾಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಖ್ಯಾತ ಉದ್ದಮಿ ಎಸ್.ಎಸ್.ಗಣೇಶ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಸಂಸದ ಜಿ.ಎಂ. ಸಿದ್ದೆಶ್ವರ, ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮೇಯರ್ ಜಯಮ್ಮ ಗೋಪಿನಾಯ್ಕ್, ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿ ರಾವ್, ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್, ಆಯುಕ್ತೆ ರೇಣುಕಾ, ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ವೈ.ಪ್ರಕಾಶ್, ಆಯುಕ್ತ ಬಸವನಗೌಡ ಕೋಟೂರು, ತಹಸಿಲ್ದಾರ್ ಅಶ್ವಥ್ ಸೇರಿದಂತೆ ಇನ್ನಿತರೇ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರು ಕರಿಬಸವೇಶ್ವರ ಸ್ವಾಮಿಯ ದರ್ಶನ ಪಡೆದು ಕೃಪಾಶೀರ್ವಾದಕ್ಕೆ ಪ್ರಾತ್ರರಾಗುವಂತೆ ಹಳೆ ಕುಂದುವಾಡದ ಶ್ರೀಸದ್ಗುರು ಕರಿಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿಗಳಾದ ಜೆ.ರಾಜಣ್ಣ, ಬಿಐಇಟಿ ಕಾಲೇಜಿನ ಪ್ರಾಂಶುಲಾಲ, ಶ್ರೀಸದ್ಗುರು ಕರಿಬಸವೇಶ್ವರ ಟ್ರಸ್ ಟ್ನ ಕಾರ್ಯಾಧ್ಯಕ್ಷ ಡಾ.ಎಚ್.ಬಿ. ಅರವಿಂದ್ ಮತ್ತು ಟ್ರಸ್ ಟ್ನ ಪದಾಧಿಕಾರಿಗಳು, ಭಕ್ತ ಮಂಡಳಿ, ಹಳೇ ಕುಂದವಾಡ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!