ರೈತರಿಗೆ ಬಂಪರ್ ಕೊಡುಗೆ: ನಾಗರಾಜ್ ಲೋಕಿಕೆರೆ ಹರ್ಷ.

ನಾಗರಾಜ್ ಲೋಕಿಕೆರೆ.

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023-24ನೇ ಸಾಲಿನ ಬಜೆಟ್ ಮುಂದಿನ 25ವರ್ಷಗಳ ದೂರದೃಷ್ಟಿ ಹೊಂದಿರುವ ಸಮಚಿತ್ತದ ಸಮತೊಲನದ ಬಜೆಟ್‌ನ್ನು ರೈತಾಪಿ ವರ್ಗಕ್ಕೆ ಶೂನ್ಯ ಬಡ್ಡಿದರದಲ್ಲಿ ರೂ 5 ಲಕ್ಷ ಸಾಲ ಸೌಲಭ್ಯ ನೀಡುವ ಮೂಲಕ ಕೃಷಿ ನೀರಾವರಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ,ಮಹಿಳೆಯರಿಗೆ,

ಪ್ರವಾಸೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ರವರು ಬಜೆಟ್ ಕುರಿತು ಹರ್ಷ ವ್ಯಕ್ತಪಡಿಸಿದರು. ಈ ವರ್ಷದ ಒಟ್ಟು ಬಜೆಟ್ ಗಾತ್ರ 3.1 ಲಕ್ಷ ಕೋಟಿ ರೂ, ಕೃಷಿ ಕ್ಷೇತ್ರಕ್ಕೆ

39, 031 ಕೋಟಿ ಅನುದಾನ ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ ಹೊಂದಿರುವ ೫೦ ಲಕ್ಷ ರೈತರಿಗೆ ‘ಭೂ ಸಿರಿ’ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಹೆಚ್ಚುವರಿಯಾಗಿ ರೂ 10 ಸಾವಿರ ಸಹಾಯ ಧನ, ರಾಜ್ಯದ 59 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲು ಜೀವನ ಜೋತಿ ಯೋಜನೆ ಜಾರಿಗೆ ಇದಕ್ಕಾಗಿ ರೂ 181 ಕೋಟಿ ಅನುದಾನ.ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ,ಮೀನುಗಾರರು,ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ,ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ ರೂ 500 ಸಹಾಯ ಧನವನ್ನು ಡಿ.ಬಿ.ಟಿ ಮೂಲಕ ನೀಡಲಿದೆ ಎಂದರು.

ಹಾಲು ಉತ್ಪಾದಕರಿಗೆ ರೂ 1067 ಕೋಟಿ,ಕೀರುಧಾನ್ಯ ಬೆಳೆಗಾರಿಗೆ ಪ್ರತಿ ಹೆಕ್ಟೇರ್ ಗೆ ರೂ 10 ಸಾವಿರ ಪ್ರೋತ್ಸಾಹ ಧನ,ಅಡಿಕೆ ಬೆಳೆ ರೋಗ ನಿರ್ವಹಣೆ, ತಂತ್ರಜ್ಞಾನ ಅಭಿವೃದ್ಧಿಗೆ ರೂ 10 ಲಕ್ಷ ಕೋಟಿ ಅನುದಾನ ಘೋಷಣೆ,ದ್ರಾಕ್ಷಿ ಬೆಳೆಗಾರಿಗೆ 100 ಕೋಟಿ ರೂಗಳ ನೆರವು ಯೋಜನೆ, ರೇಷ್ಮೆ ಬೆಳೆಯಲು 10 ಸಾವಿರ ಹೆಕ್ಟೇರ್ ವಿಸ್ತರಣೆಗೆ ಕ್ರಮ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೀರಾವರಿ ಯೋಜನೆಗಳಿಗೆ ರೂ 22, 854ಕೋಟಿ ಹೆಚ್ಚಿನ ಅನುದಾನ, ಹೀಗೆ ಹಲವಾರು ಯೋಜನೆಗಳ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ರವರಿಗೆ ಹೃದಯಪೂರ್ವಕ ವಂದನೆಗಳು.

Leave a Reply

Your email address will not be published. Required fields are marked *

error: Content is protected !!