Pds ration

1 Articles
ದಾವಣಗೆರೆ

PDS: ಜಿಲ್ಲೆಯ ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ತಿಂಗಳ ಪಡಿತರ ವಿತರಣೆ – ಮಧುಸೂಧನ್‌

ದಾವಣಗೆರೆ(PDS): ಮೇ-2026ರ ಮಾಹೆಯಲ್ಲಿ ಎನ್.ಎಫ್.ಎಸ್.ಎ (NFSA) ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಎರಡು ತಿಂಗಳ ಪಡಿತರವನ್ನು ಒಟ್ಟಾಗಿ ವಿತರಿಸಲು ಸರ್ಕಾರ ಆದೇಶಿಸಿದೆ. ದಾವಣಗೆರೆ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಂತ್ಯೋದಯ (AAY) ಕಾರ್ಡ್: ಪ್ರತಿ ಕಾರ್ಡಿಗೆ 28 ಕೆ.ಜಿ ಅಕ್ಕಿ ಮತ್ತು 42 ಕೆ.ಜಿ ರಾಗಿ ವಿತರಿಸಲಾಗುವುದು. ಆದ್ಯತಾ ಪಡಿತರ ಚೀಟಿ (PHH/BPL): ಪ್ರತಿ ಸದಸ್ಯರಿಗೆ 04 ಕೆ.ಜಿ ಅಕ್ಕಿ ಮತ್ತು 06 ಕೆ.ಜಿ ರಾಗಿ ವಿತರಿಸಲಾಗುವುದು. ರಾಜ್ಯ ಪಡಿತರ ಚೀಟಿ (State Cards): ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಮಾತ್ರ ಉಚಿತವಾಗಿ ನೀಡಲಾಗುವುದು. ಫಲಾನುಭವಿಗಳು ಮೇ ಮತ್ತು ಜೂನ್ ಮಾಹೆಯ ಪಡಿತರಕ್ಕಾಗಿ ಎರಡು ಬಾರಿ ಬಯೋ ಮೆಟ್ರಿಕ್ ದೃಢೀಕರಣ ನೀಡಬೇಕಾಗುತ್ತದೆ. ಪಡಿತರ ಪಡೆಯುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಪ್ರತಿ ಪಡಿತರ ಚೀಟಿದಾರರು ಬಯೋ ದೃಢೀಕರಣ ನೀಡಿದ ತಕ್ಷಣ ನ್ಯಾಯಬೆಲೆ ಅಂಗಡಿಯಿಂದ ಕಂಪ್ಯೂಟರ್ ರಸೀದಿಯನ್ನು ಪಡೆದು, ಅದರಲ್ಲಿರುವ ಪ್ರಮಾಣದಂತೆ ಆಹಾರಧಾನ್ಯ ಪಡೆಯಬೇಕು. ನ್ಯಾಯಬೆಲೆ ಅಂಗಡಿಕಾರರು ಪಡಿತರ ವಿತರಣೆಯ ನಂತರ ಕಡ್ಡಾಯವಾಗಿ ಪ್ರತ್ಯೇಕ ರಶೀದಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ದಾವಣಗೆರೆ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 08192251552 ಅನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರಾದ ಮಧುಸೂಧನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don't Miss

ದಾವಣಗೆರೆ

IGP: ವರದಿಗಾರರ ಮೇಲೆ ASP ದರ್ಪ: ಕ್ರಮಕ್ಕೆ ಒತ್ತಾಯಿಸಿ IGPಗೆ ಪತ್ರಕರ್ತರ ಮನವಿ

ದಾವಣಗೆರೆ:(IGP) ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದುರ್ವರ್ತನೆ ತೋರಿರುವುದನ್ನು ಖಂಡಿಸಿ...

ದಾವಣಗೆರೆ

Panchamasali: ಹರಿಹರ ಪಂಚಮಸಾಲಿ ಪೀಠದಲ್ಲಿ ‘ಲೆಕ್ಕದ’ ಸಮರ! ಸ್ವಾಮೀಜಿ vs ಟ್ರಸ್ಟಿಗಳ ನೇರ ಹಣಾಹಣಿ!

ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳ ನಡುವಿನ ಸಮರ...