ದಾವಣಗೆರೆ: ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ವಾಗೀಶ್ ಸ್ವಾಮಿ ಪತ್ನಿ ಸ್ವತಂತ್ರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಸಿಂಧೂವಾಗಿದೆ.
ಇನ್ನು ಮಾಯಕೊಂಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ವಾಗೀಶ್ ಸ್ವಾಮಿ ಸಲ್ಲಿಸಿದ್ದ ನಾಮಪತ್ರ ಜಾತಿ ರಿಜೆಕ್ಟ್ ಆಗಿದೆ. ಅವರು ಸಲ್ಲಿಸಿದ್ದ ಪರಿಶಿಷ್ಟ ಪಂಗಡದ ಎಸ್ ಸಿ ಸರ್ಟಿಫಿಕೇಟ್ ಸಂಬಂಧಿಸಿದ ಅಧಿಕಾರಿಯು ದಿನಾಂಕ 19-04-2023 ರಂದುರದ್ದು ಮಾಡಲಾಗಿದೆ. ಇದೇ ವೇಳೆಗೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ಮೀಸಲು ಕ್ಷೇತ್ರದಿಂದ ತಮ್ಮ ಪತ್ನಿಯನ್ನ ಕಣಕ್ಕಿಳಿಸಲು ತೀರ್ಮಾನಿಸಿ ಕೊನೆಯ ದಿನ ರದ್ದಾಗಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ದಿನ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ನಡೆದ ನಾಮಪತ್ರ ಪರಿಶೀಲನೆ ವೇಳೆ ಮಾಯಕೊಂಡ ಮೀಸಲು ಕ್ಷೇತ್ರಕ್ಕೆ ಒಟ್ಟು 38 ನಾಮಪತ್ರಗಳು ಸಲ್ಲಿಕೆಯಾಗಿದ್ದವು. 26 ನಾಮಪತ್ರಗಳು ಸಿಂಧೂವಾಗಿದ್ದು 12 ನಾಮಪತ್ರಗಳು ವಿವಿಧ ಕಾರಣಗಳಿಂದ ತಿರಸ್ಕರಿಸಲಾಗಿದೆ.
