ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಿ 29 ರಂದು ವಿಶ್ವ ಮಾನವ ದಿನಾಚರಣೆ ಹಾಗೂ “ಮುಂಗಾರು” ಕವನ ಸಂಕಲನ ಲೋಕಾರ್ಪಣೆ
ದಾವಣಗೆರೆ: ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಅಂಗವಾಗಿ ದಿನಾಂಕ 29-12-2021 ರ ಬುಧವಾರ ಅಪರಾಹ್ನ 5.00 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ವಿಶ್ವಮಾನವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಕುವೆಂಪು ಅವರ ಕುರಿತಾಗಿ ಹಿರಿಯ ಸಾಹಿತಿಗಳಾದ ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ ಅವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಿಂಡಿಕೇಟ್ ಮಾಜಿ ಸದಸ್ಯರು ಹಾಗೂ ಮಹಾನಗರಪಾಲಿಕೆಯ ಮಾಜಿ ಸದಸ್ಯ ಹೆಚ್.ಎನ್.ಶಿವಕುಮಾರ್ ಅವರ “ಮುಂಗಾರು” ಕವನ ಸಂಕಲನದ ಲೋಕಾರ್ಪಣೆ ಆಗಲಿದೆ. ಕವನ ಸಂಕಲನದ ಕುರಿತು ಉಪನ್ಯಾಸಕ ಬಸವರಾಜ ಹನುಮಲಿ ಮಾತನಾಡುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಜನತಾವಾಣಿ ಸಹ ಸಂಪಾದಕ ಇ.ಎಂ.ಮಂಜುನಾಥ್ ಭಾಗವಹಿಸಲಿದ್ದಾರೆ.
ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬಿ.ಟಿ.ಪ್ರಕಾಶ್, ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು, ಜಾನಪದ ಅಕಾಡೆಮಿಯ ಸಹ ಸದಸ್ಯೆ ಸಿ.ಕೆ. ರುದ್ರಾಕ್ಷಿಬಾಯಿ ಪುಟ್ಟ ನಾಯ್ಕ್ ಮತ್ತು ತಂಡ, ರುಕ್ಮಾ ಬಾಯಿ ಮತ್ತು ತಂಡ, ಜ್ಞಾನಶ್ರೀ ಸ್ವರಾಲಯದ ವಿದುಷಿ ಸಂಗೀತಾ ರಾಘವೇಂದ್ರ ಅವರುಗಳಿಂದ ಕುವೆಂಪು ಅವರ ಕುರಿತಾಗಿ ಗೀತ ನಮನ ಮತ್ತು ನೃತ್ಯ ಪ್ರದರ್ಶನವಿರಲಿದೆ. ಕಸಾಪ ಆಜೀವ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮಕ್ಕೆ ಹೆಚ್ಷಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮನವಿ ಮಾಡಿದ್ದಾರೆ.