ಅಂಗನವಾಡಿಯ ಅವಾಂತರ; ಗ್ರಾಮದ ಮಕ್ಕಳು ಸ್ವಲ್ಪದರಲ್ಲೇ ಪಾರು

 ಅಂಗನವಾಡಿಯ ಅವಾಂತರ; ಗ್ರಾಮದ ಮಕ್ಕಳು ಸ್ವಲ್ಪದರಲ್ಲೇ ಪಾರು

ದೊಡ್ಡಬಳ್ಳಾಪುರ: ಅಂಗನವಾಡಿ ಕಟ್ಟಡದ ಮುಂಭಾಗದ ಸಜ್ಜೆಯ ಸಿಮೆಂಟ್ ಪ್ಲಾಸ್ಟಿಂಗ್ ಹೊದಿಕೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಅಂಗನವಾಡಿಯಲ್ಲಿದ್ದ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ದೊಡ್ಡಬೆಳವಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿನ ಅಂಗನವಾಡಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ಶಾಲಾ ಪೂರ್ವ ಕಲಿಯಲ್ಲಿ ತೊಡಗಿದ್ದಾರೆ. ಎಂದಿನಂತೆ ಮಂಗಳವಾರ ಸಹ ಮಕ್ಕಳು ಅಂಗನವಾಡಿಗೆ ಬಂದಿದ್ದು, ಕಟ್ಟಡದ ಒಳಗೆ ಕುಳಿತಿದ್ದಾರೆ. ಇದರ ಬೆನ್ನಲ್ಲೇ ಅಂಗನವಾಡಿ ಬಾಗಿಲಿನ ಮುಂಭಾಗದ ಸಜ್ಜೆಗೆ ಪ್ಲಾಸ್ಟರಿಂಗ್ ಮಾಡಿದ್ದ ಸಿಮೆಂಟ್ ಕುಸಿದು ಬಿದ್ದಿದೆ. ಮಕ್ಕಳು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಬೆಚ್ಚಿಬಿದ್ದಿದ್ದಾರೆ. ಸುದ್ದಿ ತಿಳಿದು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಅಪಾಯಕಾರಿಯಾಗಿದ್ದ ಸಜ್ಜೆಯ ಸಿಮೆಂಟ್ ಹೊದಿಕೆಯನ್ನು ತೆರವು ಮಾಡಿದ್ದಾರೆ.

 ಅಂಗನವಾಡಿಯ ಅವಾಂತರ; ಗ್ರಾಮದ ಮಕ್ಕಳು ಸ್ವಲ್ಪದರಲ್ಲೇ ಪಾರು

ಘಟನೆ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಸ್ಥಳೀಯ ಮುಖಂಡರಾದ ಚೆನ್ನೇಗೌಡ ತೀವ್ರ ಬೇಸರ ವ್ಯಕ್ತಪಡಿಸಿದರು. ಗುಣಮಟ್ಟದ ಕಟ್ಟಡ ವಿಲ್ಲದಿದ್ದರೂ, ಬಣ್ಣ ಬಳಿದು ಮಕ್ಕಳ ಪ್ರಾಣಹರಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳನ್ನು ಬೇರೆ ಕಟ್ಟಡಕ್ಕೆ ವರ್ಗಾಯಿಸಿ, ತ್ವರಿತವಾಗಿ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.

ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ರವಿಕುಮಾರ್, ಅಂಗನವಾಡಿ ಕಟ್ಟಡದ ಸಜ್ಜೆಯ ಸಿಮೆಂಟ್ ಕುಸಿದಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ತೆರಳಿ ಪರಿಶೀಲನೆ ಬಳಿಕ ಕಟ್ಟಕ್ಕೆ ದುರಸ್ತಿ ಅಗತ್ಯವಿದೆಯೋ, ನೂತನ ಕಟ್ಟಡ ಅಗತ್ಯವಿದೆಯೋ ಎಂಬುದನ್ನು ತೀರ್ಮಾನಿಸಲಾಗುವುದು. ಶೀಘ್ರದಲ್ಲೇ ಅನುದಾನ ಲಭ್ಯವಾಗುವ ನಿರೀಕ್ಷೆ ಇದ್ದು, ತಾಲೂಕಿನಲ್ಲಿ ದುರಸ್ತಿ ಅಗತ್ಯವಿರುವ ಅಂಗನವಾಡಿ ಕಟ್ಟಡಗಳ ಪಟ್ಟಿ ಮಾಡಲಾಗುತ್ತಿದೆ ಎಂದರು

 

Leave a Reply

Your email address will not be published. Required fields are marked *

error: Content is protected !!